Home Mangalorean News Kannada News ಯುವಕರು ದೇಶದ ಭವಿಷ್ಯವನ್ನು ಬದಲಾಯಿಸಬಹುದು – ಡಾ. ಪಿ.ಎಸ್. ಹರ್ಷ

ಯುವಕರು ದೇಶದ ಭವಿಷ್ಯವನ್ನು ಬದಲಾಯಿಸಬಹುದು – ಡಾ. ಪಿ.ಎಸ್. ಹರ್ಷ

Spread the love

ಯುವಕರು ದೇಶದ ಭವಿಷ್ಯವನ್ನು ಬದಲಾಯಿಸಬಹುದು – ಡಾ. ಪಿ.ಎಸ್. ಹರ್ಷ

ಮಂಗಳೂರು: ಎಂಎಸ್ಎನ್ಎಂ ಬೆಸೆಂಟ್ ಇನ್ಸ್ಟಿಟ್ಯೂಟ್ ಆಫ್ ಪಿಜಿ ಸ್ಟಡೀಸ್ನ ಮಣೇಲ್ ಶ್ರೀನಿವಾಸ್ ನಾಯಕ್ ಜ್ಞಾನ ಸರಣಿಯ ಇತ್ತೀಚಿನ ಉಪನ್ಯಾಸ ಅಕ್ಟೋಬರ್ 25, 2019 ರಂದ ನಡೆಯಿತು. ಹಿರಿಯ ಐಪಿಎಸ್ ಅಧಿಕಾರಿ ಡಾ.ಪಿ.ಎಸ್. ಹರ್ಷ, ಪೆÇಲೀಸ್ ಆಯುಕ್ತರು, ಮಂಗಳೂರು, ಅವರು “ಶಾಂತಿಯುತ ಸಮಾಜವನ್ನು ಅಭಿವೃದ್ಧಿಪಡಿಸುವಲ್ಲಿ, ಪೆÇಲೀಸರಿಗೆ ಸಹಾಯ ಮಾಡುವಲ್ಲಿ, ವಿದ್ಯಾರ್ಥಿಗಳ ಪಾತ್ರ ಮತ್ತು ಜವಾಬ್ದಾರಿಗಳು” ಎಂಬ ವಿಷಯದ ಕುರಿತು ಮಾತನಾಡಿದರು.

ನಗರದ ಬೊಂದೆÉಲ್ನಲ್ಲಿರುವ ಎಂಎಸ್ಎನ್ಎಂ ಬೆಸೆಂಟ್ ಕ್ಯಾಂಪಸ್ನ ‘ಸ್ವರ್ಣ ಅಕಾಡೆಮಿ ಹಾಲ್’ನಲ್ಲಿ ಮಧ್ಯಾಹ್ನ 3:00 ಕ್ಕೆ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಎಂಎಸ್ಎನ್ಎಂ ಸಂಸ್ಥೆಯ ಮತ್ತು ಇತರ ಕಾಲೇಜುಗಳ ಸುಮಾರು 250 ವಿದ್ಯಾರ್ಥಿಗಳು ಭಾಷಣವನ್ನು ಆಲಿಸಿದರು.

“ಯುವಕರು ದೇಶದ ಭವಿಷ್ಯವನ್ನು ಬದಲಾಯಿಸಬಹುದು. ಯಾವಾಗಲೂ ಗುರಿ ಉನ್ನತ ಇರಬೇಕು. ಕೀಳು ಗುರಿ ಇಡುವುದು ನಮ್ಮಗೆ ನಾವೇ ಮಾಡುವ ಅನ್ಯಾಯವೆನ್ನಬಹುದು. ನಿಮ್ಮ ಅಡಚಣೆಗಳನ್ನು ಸೋಲಿಸಿ; ನಿಮ್ಮ ಗುರಿಗಳನ್ನು ಸಾಧಿಸಲು ಆರಾಮ ವಲಯದಿಂದ ಹೊರಬನ್ನಿ. ಕನಸು ಕಾಣುವ ನಿಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿ. ಆರೋಗ್ಯಕರ ಸ್ಪರ್ಧೆಯನ್ನು ಬೆಳೆಸಿಕೊಳ್ಳಿ,” ಎಂದು ಯುವ ಪ್ರೇಕ್ಷಕರನ್ನು ಉದ್ದೇಶಿಸಿ ಡಾ. ಹರ್ಷ ಹೇಳಿದರು.

ಉಪನ್ಯಾಸದ ಮುಖ್ಯ ವಿಷಯಕ್ಕೆ ಬಂದ ಅವರು, ವಿದ್ಯಾರ್ಥಿಗಳು ಮಾದಕ ದ್ರವ್ಯಗಳಿಂದ ದೂರವಿರಲು ಎಚ್ಚರಿಕೆ ನೀಡಿದರು ಮತ್ತು ಅಂತಹ ಚಟುವಟಿಕೆಗಳ ಬಗ್ಗೆ ಎಚ್ಚರವಾಗಿರಬೇಕು ಮತ್ತು ಪೆÇಲೀಸರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು. “ಅನಾಥ ವಸ್ತುಗಳ ಬಗ್ಗೆ ಮತ್ತು ಅಪರಿಚಿತ ವ್ಯಕ್ತಿಗಳ ಚಲನವಲನಗಳ ಬಗ್ಗೆ ಜಾಗರೂಕರಾಗಿರಿ. ಪೆÇಲೀಸರಿಗೆ ತಿಳಿಸಲು ಸಾಮಾಜಿಕ ಮಾಧ್ಯಮವನ್ನು ಬಳಸಿ,” ಎಂದು ಅವರು ಸಲಹೆ ನೀಡಿದರು.

ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳ ಆಕಾಂಕ್ಷೆಗಳನ್ನು ಉದ್ದೇಶಿಸಿ ಮಾತನಾಡಿದ ಡಾ. ಹರ್ಷ ಅವರು ಉದ್ಯಮಶೀಲತಾ ಉತ್ಸಾಹವನ್ನು ಬೆಳೆಸಲು ಮತ್ತು ತಮ್ಮ ಸ್ವಂತ ಉದ್ದಿಮೆಯಲ್ಲಿ ತೊಡಗಿಸಿ ಕೊಳ್ಳುವ ಬಗ್ಗೆ ಯೋಚಿಸಲು ಪ್ರೇರೇಪಿಸಿದರು. ಸಕಾರಾತ್ಮಕ ರೋಲ್ ಮಾಡೆಲ್ಗಳಿಂದ ಪ್ರೇರಿತರಾಗಬೇಕೆಂದು ಸಲಹೆ ನೀಡಿದ ಅವರು, “ದಕ್ಷಿಣ ಕನ್ನಡದವರು ಇಂದ್ರಾ ನೂಯಿ ಮತ್ತು ಕೆ. ವಿ. ಕಾಮತ್ರಂತಹ ಮಹಾನ್ ನಾಯಕರನ್ನು ಜಗತ್ತಿಗೆ ಕೊಡುಗೆ ನೀಡಿದ್ದಾರೆ. ಅದೇ ರೀತಿ ನೀವು ಉತ್ತಮ ನಾಗರಿಕರಾಗಿ ನಿಮ್ಮ ಜವಾಬ್ದಾರಿಗಳನ್ನು ಹೊಂದಿದ್ದರೆ ನೀವು ಕೂಡ ದೇಶದ ಧ್ವಜ ಧಾರಕರಾಗಬಹುದು. ನೀವು ಸಂಸ್ಕೃತಿ, ಸಂಪ್ರದಾಯ ಮತ್ತು ಭಾರತೀಯರಾಗಿರುವುದರ ಬಗ್ಗೆ ಹೆಮ್ಮೆ ಪಡಬೇಕು,” ಎಂದರು.

ನಂತರ ಅವರು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು, ಅವರ ಅನುಮಾನಗಳನ್ನು ಸ್ಪಷ್ಟಪಡಿಸಿದರು ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸಿದರು. ಎಂಎಸ್ಎನ್ಎಂ ಬೆಸೆಂಟ್ ಸಂಸ್ಥೆಯ ನಿರ್ದೇಶಕಿ ಡಾ. ಮೊಲ್ಲಿ ಎಸ್. ಚೌಧುರಿ, ಮಹಿಳಾ ರಾಷ್ಟ್ರೀಯ ಶಿಕ್ಷಣ ಸೊಸೈಟಿ (ಡಬ್ಲ್ಯುಎನ್ಇಎಸ್) ಅಧ್ಯಕ್ಷರಾದ ಶ್ರೀ ಕುಡ್ಪಿ ಜಗದೀಶ್ ಶೆಣೈ, ಉಪಾಧ್ಯಕ್ಷರಾದ ಶ್ರೀ ಮಣೇಲ್ ಅನ್ನಪ್ಪ ನಾಯಕ್, ಕಾರ್ಯದರ್ಶಿ ಶ್ರೀ ಕೆ. ದೇವಾನಂದ್ ಪೈ, ಆಡಳಿತ ಮಂಡಳಿ ಸದಸ್ಯರಾದ ಶ್ರೀ ನಗರ್ ನಾರಾಯಣ್ ಶೆಣೈ ಮತ್ತು ಶ್ರೀ ಸತೀಶ್ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪಾಯಲ್ ಸ್ವಾಗತಿಸಿದರು. ವೈಶಾಲಿ ಪ್ರಾರ್ಥನೆಗೆ ಸಲ್ಲಿಸಿದರು. ಅಪೂರ್ವಾ ಕಿನಿ ವಂದಿಸಿದರು. ಶಿಬೊನಿ ಕಾರ್ಯಕ್ರಮವನ್ನು ಸಂಯೋಜಿಸಿದರು.


Spread the love

Exit mobile version