ಯುವ ಕಾಂಗ್ರೆಸ್ ನೀಡಲಿದೆ ಒಂದು ದಿನದ ನ್ಯಾಯ -ಕೇಂದ್ರ ಸರ್ಕಾರ ನೀಡಲಿ 6 ತಿಂಗಳ ಯೋಜನೆಯ ಹಣ
ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಮಿಥುನ್ ರೈಯವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ನ್ಯಾಯ್ ಯೋಜನೆಯ ಒಂದು ದಿನದ ವೇತನವಾದ ₹200 ವಿತರಿಸಲಾಯಿತು.
ನೊಬೆಲ್ ಪ್ರಶಸ್ತಿ ಪುರಸ್ಕೃತ ದೇಶದ ಹೆಮ್ಮೆಯ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅವರ ಸಲಹೆ ಸೂಚನೆ ಮೇರೆಗೆ ಕಾಂಗ್ರೆಸ್ ರೂಪಿಸಿದ್ದ #NYAY ‘ನ್ಯಾಯ ಯೋಜನೆ’ ದೇಶದ ಬಡ ಜನರು, ಕಾರ್ಮಿಕರು ಹಸಿದು ಮಲಗಬಾರದು. ಕಾರ್ಮಿಕರು ಸಂಕಷ್ಟ ಎದುರಿಸಬಾರದು ಎಂದರೆ ಅದನ್ನು ಜಾರಿಗೆ ಬರಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಯುವ ಕಾಂಗ್ರೆಸ್ ರವರ ನಿರ್ದೇಶನದ ಮೇರೆಗೆ ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಮಿಥುನ್ ರೈಯವರ ನೇತೃತ್ವದಲ್ಲಿ ಮಂಗಳೂರಿನಲ್ಲಿ 60 ಕೂಲಿ ಕಾರ್ಮಿಕರಿಗೆ, ರಿಕ್ಷಾ ಮತ್ತು ಟೆಂಪೋ ಡ್ರೈವರ್ ಗಳಿಗೆ ನ್ಯಾಯ್ ಯೋಜನೆಯ ಒಂದು ದಿನದ ವೇತನವಾದ ₹200 ವಿತರಿಸಲಾಯಿತು.