ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಸೊರಕೆ ಚಾಲನೆ
ಉಡುಪಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಿರ್ದೇಶನದಂತೆ ಯುವ ಕಾಂಗ್ರೆಸ್ ನ ಸದಸ್ಯತ್ವ ನೋಂದಣಿ ಕಾರ್ಯಕ್ರಮ ನಡೆಯುತ್ತಿದು ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸದಸ್ಯತ್ವ ನೋಂದಣಿಗೆ ಬೆಳ್ಳರ್ಪಾಡಿಯಲ್ಲಿ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಿದ ಕಾಪು ಮಾಜಿ ಸಚಿವರು ಕಾಪು ವಿಧಾನ ಕ್ಷೇತ್ರದ ಶಾಸಕರು ಮಾನ್ಯ ಶ್ರೀ ವಿನಯ್ ಕುಮಾರ್ ಸೊರಕೆರವರು ಈ ಸಂದರ್ಭಲ್ಲಿ ಮಾತನಾಡುತ್ತ ಕಾಂಗ್ರೆಸ್ ಪಕ್ಷವು ಯುವಕರಿಗೆ ಬಹಳಷ್ಟು ಕೊಡುಗೆ ನೀಡಿದೆ. ದಿವಂಗತ ಪ್ರಧಾನಿ ರಾಜೀವ್ ಗಾಗಾಂಧಿಯವರು 18 ವರ್ಷದವರಿಗೆ ಮತದಾನ ಮಾಡುವ ಕಾನೂನು ಜಾರಿಗೆ ತಂದರು. ಅದೇ ರೀತಿ ವೀರಪ್ಪ ಮೊಯಿಲಿ ಸಿ ಇ ಟಿ ಯನ್ನು ಜಾರಿಗೆ ತರುವ ಮೂಲಕ ಯುವಕರಿಗೆ ಡಾಕ್ಟರ್, ಇಂಜಿನಿಯರ್ ಆಗುವ ಕನಸನ್ನು ನನಸಾಗುವ ಕೆಲಸವನ್ನು ಮಾಡಿರುತ್ತಾರೆ. ಹಾಗೇ ದೇಶದಲ್ಲಿ ಯುವಕರಿಗೆ ಕಾಂಗ್ರೆಸ್ ಪಕ್ಷವು ನೀಡಿದಷ್ಟು ಕೊಡುಗೆಯನ್ನು ಬೇರೆ ಯಾವುದೇ ರಾಜಕೀಯ ಪಕ್ಷವು ನೀಡಿಲ್ಲ, ಬಿಜೆಪಿ ಯವರು ಯುವಕರನ್ನು ತಪ್ಪುದಾರಿಗೆಳೈದು ಜೈಲಿನಲ್ಲಿ ಕೊಳೆಯುವಂತೆ ಮಾಡಿ ತಂದೆ ತಾಯಿಯನ್ನು ಅನಾಥರಾಗುವಂತೆ ಮಾಡಿರುತ್ತಾರೆ. ಆದ್ದರಿಂದ ಯುವಕರು ಆಲೋಚನೆ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಕಾಂಗ್ರೆಸ್ ಸದಸ್ಯತ್ವವನ್ನು ನೊಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಲಕ್ಷ್ಮೀ ನಾರಾಯಣ ಪ್ರಭು ತಾಲೂಕು ಪಂಚಾಯತ್ ಸದಸ್ಯರು , ಪ್ರವೀಣ್ ಪೂಜಾರಿ ಅಧ್ಯಕ್ಷರು ಬೈರಂಪಳ್ಳಿ ಗ್ರಾಮೀಣ ಸಮಿತಿ, ಶ್ರೀಧರ್ ಶೆಟ್ಟಿ ಭೈರಂಪಳ್ಳಿ ಅಕ್ರಮ-ಸಕ್ರಮ ಸಮಿತಿಯ ಸದಸ್ಯರು , ವಿಶ್ವಾಸ್ ಅಮೀನ್ ಕಾಪು ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರು, ಸುನೀಲ್ ಬಂಗೇರ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷರು, ಕಿರಣ್ ಕುಮಾರ್ ಹೆಗ್ಡೆ ಅಧ್ಯಕ್ಷರು ವಲಯ ಯುವ ಕಾಂಗ್ರೆಸ್ ಸಮಿತಿ , ನಿತಿನ್ ಕುಮಾರ್ ಬೆಳ್ಳರ್ಪಾಡಿ ಬೈರಂಪಳ್ಳಿ ಗ್ರಾಮೀಣ ಸಮಿತಿಯ ಕಾರ್ಯದರ್ಶಿ, ಕೃಷ್ಣಾನಂದ ಭೈರಂಪಳ್ಳಿ ಬೂತ್ ಗ್ರಾಮೀಣ ಕಾಂಗ್ರೆಸ್ ಯುವ ಕಾಂಗ್ರೆಸ್ ಅಧ್ಯಕ್ಷರು, ಮಂಜುನಾಥ ಸೇರಿಗಾರ್ ಭೈರಂಪಳ್ಳಿ ಬೂತ್ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರು, ವಿನೋದ್ ಕುಮಾರ್ ಹಿರಿಯಡ್ಕ, ರಮೇಶ್ ಪೂಜಾರಿ, ಜಡ್ಡು ಕೃಷ್ಣಾನಂದ ನಾಯಕ್, ರೋಹಿತ್ ಶೆಟ್ಟಿ, ಮಂಜುನಾಥ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.