ಯುವ ಚೈತನ್ಯ ಯೋಜನೆಯಡಿ ಸಂಘಗಳಿಗೆ ಕ್ರೀಡಾ ಕಿಟ್ ವಿತರಣೆ
ಉಡುಪಿ: ಯುವ ಸಂಘಗಳಿಗೆ ಕ್ರೀಡಾ ಕಿಟ್ ವಿತರಿಸುವ ಉದ್ದೇಶದಿಂದ ರಾಜ್ಯ ಸರಕಾರ ನೂತನವಾಗಿ ಜಾರಿಗೆ ತಂದಿರುವ ಯುವ ಚೈತನ್ಯ ಯೋಜನೆಯಡಿ ಶ್ರೀ ವೀರಮಾರುತಿ ವ್ಯಾಯಾಮಶಾಲೆ ಕೆಳಾರ್ಕಳಬೆಟ್ಟು , ವಿ.ಮ್ ಕ್ರಿಕೆಟರ್ಸ್ ವಿಷ್ಣುಮೂರ್ತಿನಗರ, ಉಡುಪಿ ಪ್ರೆಸ್ ಕ್ಲಬ್ ಹಾಗು ವಿವಿಧ ಸಂಘ ಸಂಸ್ಥೆಗಳಿಗೆ ಶುಕ್ರವಾರ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿಯ ಬೀಡಿನಗುಡ್ಡೆ ಬಯಲು ರಂಗಮಂದಿರದಲ್ಲಿ ವಿತರಿಸಿದರು.
ಆರೋಗ್ಯಯುತ ಸಮಾಜ ನಿರ್ಮಾಣ ಹಾಗೂ ಸಾಮಾಜಿಕ ಬಾಂಧವ್ಯ ಬೆಸೆಯುವ ಯುವ ಸಂಘಗಳನ್ನು ಸಕ್ರಿಯಗೊಳಿಸುವ ಉದ್ದೇಶದಿಂದ ಆರಂಭಿಸಿರುವ ಈ ಯೋಜನೆಯಂತೆ ಉಡುಪಿ ಜಿಲ್ಲೆಯ ಸುಮಾರು 600 ಯುವ ಸಂಘಗಳು ಸೇರಿದಂತೆ ರಾಜ್ಯದಾದ್ಯಂತ ಒಟ್ಟು 5000 ಯುವ ಸಂಘಗಳಿಗೆ ಒಟ್ಟು 40000 ರೂ. ಮೌಲ್ಯದ ಕ್ರೀಡಾ ಕಿಟ್ ಶುಕ್ರವಾರ ವಿತರಿಸಲಾಯಿತು.
40 ಸಾವಿರ ರೂ ಮೌಲ್ಯದ ಕ್ರೀಡಾ ಕಿಟ್ ನಲ್ಲಿ ಮೂರು ವಾಲಿಬಾಲ್, ನೆಟ್, ಎರಡು ಕಂಬಗಳು, ಎರಡು ತ್ರೋಬಾಲ್, ಮೂರು ಫುಟ್ ಬಾಲ್, ಎರಡು ಶಟ್ಲ್ ರಾಕೆಟ್, ಮೂರು ಕ್ರಿಕೆಟ್ ಬ್ಯಾಟ್, ಎರಡು ಸೆಟ್ ಸ್ಟಂಪ್, ಆರು ಟೆನ್ನಿಸ್ ಬಾಲ್, ಆರು ಟೆನಿಕಾಯಿಟ್ ರಿಂಗ್ ಮತ್ತು ಇವುಗಳನ್ನು ತುಂಬಿಸಿಕೊಳ್ಳಲು ದೊಡ್ಡಯ ಬ್ಯಾಗನ್ನು ನೀಡಲಾಗಿದೆ. ಅಲ್ಲದೆ ಸಾಗಾಟ ವೆಚ್ಚ ರೂ 500 ಕೂಡ ಸಂಘಗಳಿಗೆ ನೀಡಲಾಗುತ್ತದೆ.
ಈ ವೇಳೆ ವ್ಯಾಯಾಮಶಾಲೆಯ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಪದಾಧಿಕಾರಿಗಳಾದ ಪ್ರಸಾದ್ ಪಾಲನ್, ಮಧುಕರ್, ಶಶಿಕಾಂತ್, ನಾಗೇಶ್, ಉದಯ, ಸತೀಶ್, ರಮೇಶ್, ಅರವಿಂದ್, ರಾಕೇಶ್, ಅಜಿತ್ ಹಾಗೂ ಇತರರು ಉಪಸ್ಥಿತರಿದ್ದರು.