ಯುವ ಲೇಖಕಿ ರಿಷೆಲ್ ಬಿ ಫೆರ್ನಾಂಡಿಸ್ ಗೆ ಯುವ ಪ್ರೇರಣೆ ಪ್ರಶಸ್ತಿ

Spread the love

ಯುವ ಲೇಖಕಿ ರಿಷೆಲ್ ಬಿ ಫೆರ್ನಾಂಡಿಸ್ ಗೆ ಯುವ ಪ್ರೇರಣೆ ಪ್ರಶಸ್ತಿ

ಬೆಂಗಳೂರು: ಕು. ರೆಶೆಲ್ ಬ್ರಿಟ್ನಿ ಫೆರ್ನಾಂಡಿಸ್ ಯುವ ಲೇಖಕಿ ಮತ್ತು ವಾಗ್ಮಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜ್ಯ ಮತ್ತು ಇತರ ಹಂತಗಳಲ್ಲಿ ಸಾಧನೆ ಮಾಡಿದ ಪ್ರಖ್ಯಾತ ಸಂಸ್ಥೆ ದಿಶಾ ಭಾರತ್ ಅವರು ರಾಜ್ಯ ಮಟ್ಟದ ವಿದ್ಯಾರ್ಥಿ ಸಮ್ಮೇಳನದಲ್ಲಿ ಯುವ ಪ್ರೇರಣಾ ಪ್ರಶಸ್ತಿಯನ್ನು ಇತರ ಇಬ್ಬರು ಯುವ ಸಾಧಕರೊಂದಿಗೆ ಡಾ. ದಯಾನಂದ ಸಾಗರ್ ಸಂಸ್ಥೆಗಳು ಬೆಂಗಳೂರಿನ ಪ್ರೇಮಾ ಚಂದ್ರ ಸಾಗರ ಸಭಾಂಗಣ ಇಲ್ಲಿ ನೀಡಿದರು.

ಗೌರವ ಅತಿಥಿಗಳಾಗಿ ದಿಶಾ ಭಾರತ್ ಸಂಸ್ಥಾಪಕಿ ಮತ್ತು ಟ್ರಸ್ಟಿ ಶ್ರೀಮತಿ ರೇಖಾ ರಾಮಚಂದ್ರನ್, ಶ್ರೀ .ಸುಹಾಸ್ ಗೋಪಿನಾಥ್ ಕಿರಿಯ ಉದ್ಯಮಿ ಮತ್ತು ಸಿಇಒ ಗ್ಲೋಬಲ್ಸ್ ಲಿಮಿಟೆಡ್, ಡಾ.ಹೇಮಂತ್ ಪ್ರಾಂಶುಪಾಲರು ಮತ್ತು ದಿಶಾ ಭಾರತ್ ಟ್ರಸ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳು ಮತ್ತು ರಾಜಕಾರಣಿಗಳು ಮತ್ತು ಇತರ ಸದಸ್ಯರು ಭಾಗವಹಿಸಿದ್ದರು


Spread the love