ಯುವ ವಕೀಲಗೆ ಬೆದರಿಸಿ ಹಣ ವಸೂಲಿ ಆರೋಪ – ಪ್ರಕರಣ ದಾಖಲು

Spread the love

ಯುವ ವಕೀಲಗೆ ಬೆದರಿಸಿ ಹಣ ವಸೂಲಿ ಆರೋಪ – ಪ್ರಕರಣ ದಾಖಲು

ಕೋಟ: ಯುವ ವಕೀಲರೋರ್ವರಿಗೆ ಹೆದರಿಸಿ ಹಣ ವಸೂಲಿ ಮಾಡಿಕೊಂಡು ಹೋಗಿರುವ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ದೇವೆಂದ್ರ ಮತ್ತು ಮೂಕಾಂಬಿಕ ಎಂಬ ಇಬ್ಬರು ವ್ಯಕ್ತಿಗಳ ವಿರುದ್ದ ಪ್ರಕರಣ ದಾಖಲಾಗಿದೆ

ನೀಲ್ ಬ್ರಾಯನ್ ಪಿರೇರಾ ಎಂಬ ವಕೀಲರೋರ್ವರು ಕುಂದಾಪುರ ನ್ಯಾಯಾಲಯದಲ್ಲಿ ವಕೀಲರಾಗಿ ಕೆಲಸವನ್ನು ಮಾಡಿಕೊಂಡಿದ್ದು ಕೋಟದಲ್ಲಿ ತನ್ನ ಹಿರಿಯ ವಕೀಲರ ಬಳಿ ಕಿರಿಯ ಸಹಾಯಕನಾಗಿ ಕೆಲಸಮಾಡಿಕೊಂಡಿರುತ್ತಾರೆ. 2023 ರ ಜನವರಿ ತಿಂಗಳಲ್ಲಿ ನೀಲ್ ಅವರು ಕಚೇರಿಯಲ್ಲಿ ಇದ್ದಾಗ ದೇವೆಂದ್ರ ಸುವರ್ಣ ಎಂಬವರು ಮೂಕಾಂಬು ಯಾನೆ ಮೂಕಾಂಬಿಕ ಎಂಬ ಮಹಿಳೆಯನ್ನು ಕಚೇರಿಗೆ ಕರೆದುಕೊಂಡು ಬಂದು ಯಾವುದೋ ಒಂದು ಕೇಸಿನ ಬಗ್ಗೆ ಮಾತಾಡಿಕೊಂಡು ಹೋಗಿರುತ್ತಾರೆ. ಅದೇ ಕೇಸಿನ ವಿಚಾರವಾಗಿ ಮಾತನಾಡಲು ಮೂಕಾಂಬುರವರು ನೀಲ್ ಅವರ ಮೊಬೈಲ್ ನಂಬರ್ ಪಡೆದಕೊಂಡಿದ್ದು ನಂತರ ದೇವೆಂದ್ರ ಸುವರ್ಣ ಮೂಕಾಂಬುರವರೊಂದಿಗೆ ಅದೇ ಕಚೇರಿಗೆ ಆಗಮಿಸಿ ನೀಲ್ ಅವರನ್ನು ಉದ್ದೇಶಿಸಿ ನೀನು ನನಗೆ ಮತ್ತು ಮೂಕಾಂಬು ಅವರಿಗೆ ರೂ 50000 ಹಣವನ್ನು ನೀಡಬೇಕು ಇಲ್ಲವಾದಲ್ಲಿ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ನೀನು ಮೂಕಾಂಬಿಕಾ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದಿಯಾ ಎಂದು ಸುಳ್ಳೂ ಪ್ರಕರಣವನ್ನು ದಾಖಲಿಸಿ ನಿನ್ನ ಮಾನ ಮರ್ಯಾದೇ ತೆಗೆಯುವುದಾಗಿ ಹೆದರಿಸಿರುತ್ತಾರೆ. ಅಲ್ಲದೆ ನೀಲ್ ಅವರಿಗೆ ಇದೇ ರೀತಿ ಪದೇ ಪದೇ ಭಯ ಹುಟ್ಟಿಸಿ ಅವಮಾನ ಪಡಿಸುವುದಾಗಿ ಹೆದರಿಸಿ ಅಲ್ಲದೆ ಗೂಂಡಾಗಳನ್ನು ಬಳಸಿ ಕೊಲ್ಲಿಸುವುದಾಗಿ ಹೆದರಿಸಿ ರೂ 18000/- ಹಣವನ್ನು ಬಲಾತ್ಕಾರವಾಗಿ ವಸೂಲಿ ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ದೂರು ಸ್ವೀಕರಿಸಿರುವ ಕೋಟ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments