ಯೂನಿಯನ್ ಬ್ಯಾಂಕ್ ವತಿಯಿಂದ ಮಂಗಳೂರು ಪೊಲೀಸರಿಗೆ ರೈನ್ ಕೋಟ್ ವಿತರಣೆ
ಮಂಗಳೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ಅವರ ಪ್ರಾಯೋಜಕತ್ವದಲ್ಲಿ ಮಂಗಳೂರು ನಗರ ಸಂಚಾರ ಪೊಲೀಸ್ ಸಿಬಂದಿಗಳಿಗೆ ಉಚಿತವಾಗಿ 300 ರೈನ್ ಕೋಟ್ಗಳನ್ನು ವಿತರಿಸಲಾಯಿತು.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಯೂನಿಯನ್ ಬ್ಯಾಂಕ್ ವಲಯ ಮುಖ್ಯಸ್ಥೆ ರೇಣು ಕೆ. ನಾಯರ್, ಪ್ರಾದೇಶಿಕ ಮುಖ್ಯಸ್ಥ ಎ.ರಾಜಮಣಿ, ಡಿಸಿಪಿ ಕಾನೂನು ಸುವ್ಯವಸ್ಥೆ ಸಿದ್ದಾರ್ಥ್ ಗೋಯಲ್, ಅಪರಾಧ ಹಾಗೂ ಸಂಚಾರ ಡಿಸಿಪಿ ಬಿ.ಪಿ.ದಿನೇಶ್ ಕುಮಾರ್, ಎಸಿಪಿ ಸಂಚಾರ ನಜ್ಮಾ ಫಾರೂಖಿ, ಟ್ರಾಫಿಕ್ ಇನ್ಸ್ಪೆಕ್ಟರ್ಗಳು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪುರಂದರ್, ನಿಕಿತ್ ಶ್ರೀಯಾನ್, ನರೇಂದ್ರ ಕುಮಾರ್ ಹೆಗಡೆ, ಜೋನ್ ಗ್ರೇಸಿ ಲೋಬೋ, ಚೇತನ್ ಅರೋರಾ ಉಪಸ್ಥಿತರಿದ್ದರು.