Home Mangalorean News Kannada News ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆಯಲ್ಲಿ  ಒರಲ್ ಪ್ಯಾತೊಲಾಜಿ ದಿನ

ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆಯಲ್ಲಿ  ಒರಲ್ ಪ್ಯಾತೊಲಾಜಿ ದಿನ

Spread the love

ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆಯಲ್ಲಿ  ಒರಲ್ ಪ್ಯಾತೊಲಾಜಿ ದಿನ

ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆಯಲ್ಲಿ , ಒರಲ್ ಪ್ಯಾತೊಲಾಜಿ ದಿನವನ್ನು,26 ನೆ ಫೆಬ್ರವರಿ 2024 ರಂದು ಒರಲ್ ಪ್ಯಾತೊಲಾಜಿ ವಿಭಾಗದ ಮೂಲಕ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಡಾ. ಯು. ಎಸ್. ಕೃಷ್ಣ ನಾಯಕ್, ಪ್ರಾಂಶುಪಾಲರು ಹಾಗೂ ಡೀನ್, ಎ ಬಿ ಶೆಟ್ಟಿ ದಂತ ಕಾಲೇಜು ಮತ್ತು ಆಸ್ಪತ್ರೆ, ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ಭಾಗವಹಿಸಿ ಕಾರ್ಯಕ್ರಮದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು. ಡಾ. ಮ್. ವಿಜಯ ಕುಮಾರ್, ಗೌರವನ್ವಿತಾ ಉಪ ಕುಲಪತಿಗಳು, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ,ಗೌರವ ಅತಿಥಿಯಾಗಿ ಭಾಗವಹಿಸಿ ಬಾಯಿಯ ಕ್ಯಾನ್ಸರ್ ರೋಗ ಚಿಕಿತ್ಸೆಯಲ್ಲಿ ದಂತ ವೈದ್ಯರ ಮುಖ್ಯ ಪಾತ್ರ ಮತ್ತು ಪ್ರಾಥಮಿಕ ಹಂತದಲ್ಲಿ ಇದರ ಪತ್ತೆ ಹಚ್ಚುವಿಕೆಯ ಮಹತ್ವವನ್ನು ವಿವರಿಸಿದರು.

ಡಾ. ಲಕ್ಷ್ಮಿಕಾಂತ್ ಚಾತ್ರ, ಪ್ರಾಂಶುಪಾಲರು, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು . ಡಾ. ಶಾಮ್ ಎಸ್ ಭಟ್, ಡೀನ್, ಉಪಸ್ಥಿತರಿದ್ದರು. ಒರಲ್ ಪ್ಯಾತೊಲಾಜಿ ವಿಭಾಗದ ಮುಖ್ಯಸ್ಥರಾದ ಡಾ. ರಿಯಾಜ್ ಅಬ್ದುಲ್ಲ ಎಲ್ಲರನ್ನು ಕಾರ್ಯಕ್ರಮದಲ್ಲಿ ಸ್ವಾಗತಿಸಿ, ಮಾತನಾಡಿ ವಿಭಾಗದಲ್ಲಿ ಶೈಕ್ಷಣಿಕ, ಸಂಶೋಧನೆ ಹಾಗೂ ರೋಗಿಗಳ ಆರೈಕೆ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಅಲ್ಲದೆ ಒರಲ್ ಪ್ಯಾತೊಲಾಜಿ ವಿಭಾಗಕ್ಕೆ ರಾಷ್ಟ್ರೀಯ ವಿಜ್ಞಾನ ದಿನ, ಫೆಬ್ರವರಿ 28, 2024 ರ ಕಾರ್ಯಕ್ರಮದಲ್ಲಿ ಉತ್ತಮ ದಂತ ವಿಭಾಗ ಪ್ರಶಸ್ತಿ ದೊರೆತ ಕುರಿತು ಸಂತಸ ಹಂಚಿಕೊಂಡರು. ಡಾ. ಇಮ್ರಾನ್ ಮೋತಿಸಾಮ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಡಾ. ಪಲ್ಲವಿ ಮತ್ತು ಡಾ. ಯುಗಷಿನ್ ಕಾರ್ಯಕ್ರಮವನ್ನು ಸಂಯೋಜಿಸಿದರು .ಡಾ. ವಿಷ್ಣು ದಾಸ್ ಪ್ರಭು
ಕಾರ್ಯಕ್ರಮದಲ್ಲಿ ವಂದಿಸಿದರು.


Spread the love

Exit mobile version