ಯೆನೆಪೋಯ ದಂತ ಮಹಾವಿದ್ಯಾಲಯ ಮತ್ತು ಟೀಚ್ ಸ್ಪೂನ್ ಎಜುಟೆಕ್ ಸಹಯೋಗದೊಂದಿಗೆ ಮೆಡಿ ಸ್ಟಡಿ ಗೊ ಕಲಿಕಾ ಕಾರ್ಯಕ್ರಮ
ದೇರಳಕಟ್ಟೆಯ ಯೆನೆಪೋಯ ದಂತ ಮಹಾವಿದ್ಯಾಲಯ ಮತ್ತು ಟೀಚ್ ಸ್ಪೂನ್ ಎಜುಟೆಕ್ ಸಹಯೋಗದೊಂದಿಗೆ ಆಯೋಜಿಸಿದ ಮೆಡಿ ಸ್ಟಡಿ ಗೊ ಕಲಿಕಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಜೊತೆಗೆ ಮೆಡಿ ಸ್ಟಡಿ ಗೊ ಅಪ್ಲಿಕೇಶನ್ ನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು. ಇದರೊಂದಿಗೆ ಅಪ್ಲಿಕೇಶನ್ ನ ಸದುಪಯೋಗದ ಕುರಿತು ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.
ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ ಎಣಿಸುವ, ಅತ್ಯಂತ ಕ್ಲಿಷ್ಟಕರವಾದ ವಿಷಯಗಳನ್ನು ಅತ್ಯಂತ ಸರಳ ಹಾಗೂ ಸುಲಭವಾಗಿ ಮೈಂಡ್ ಮ್ಯಾಪ್ ನ ಸಹಾಯದಿಂದ ಹೇಗೆ ಕಲಿಯಬಹುದು , ಬಣ್ಣ, ಸಂಕೇತಗಳ ಮುಖಾಂತರ ಹೇಗೆ ನೆನಪಿಟ್ಟುಕೊಳ್ಳಬಹುದು ಎಂದು ಡಾ. ಪಿ.ಚಾಂದನಿ ಪಿಂಟೋ ಹಾಗೂ ಡಾ. ಪಲಕ್ ಭಂಡಾರಿಯವರು ತಿಳಿಸಿಕೊಟ್ಟರು. ಜೊತೆಗೆ ಕಾರ್ಯಕ್ರಮದಲ್ಲಿ ರಸ ಪ್ರಶ್ನೆ ಮತ್ತು ಉಪಯುಕ್ತ ಮೈಂಡ್ ಮ್ಯಾಪ್ ಗಳನ್ನು ಸ್ವತಃ ವಿದ್ಯಾರ್ಥಿಗಳೆ ಪ್ರಾಯೋಗಿಕವಾಗಿ ತಯಾರಿಸಿದರು.
ಕಾರ್ಯಕ್ರಮದಲ್ಲಿ ಡಾ. ಶಿವ ಶರಣ್ ಶೆಟ್ಟಿ, ಐ.ಡಿ.ಎ ಅಧ್ಯಕ್ಷರು, ಡಾ. ಜಾರ್ಜ್ ಪಿ.ಜೋನ್, ಚೇರ್ಮನ್ ಟೀಚ್ ಸ್ಪೂನ್ ಎಜುಟೆಕ್, ಡಾ. ಕೆ ಎಸ್ ಗಂಗಾಧರ್ ಸೋಮಯಾಜಿ, ಕುಲಸಚಿವರು, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ, ಉಪಸ್ಥಿತರಿದ್ದರು. ಗಣ್ಯರು ಕಾರ್ಯಕ್ರಮ ದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಜೊತೆಗೆ
ಕಾರ್ಯಕ್ರಮದಲ್ಲಿ ದಂತ ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮಿಕಾಂತ್ ಚಾತ್ರ, ಡೀನ್ ಡಾ. ಶಾಮ್ ಎಸ್ ಭಟ್, ಉಪ ಪ್ರಾಂಶುಪಾಲರಾದ ಡಾ. ಹಸನ್ ಸರ್ಫಾರಾಝ್ ರವರು ಉಪಸ್ಥಿತರಿದ್ದರು.ಹಾಗೆಯೇ ಡಾ. ರಕ್ಷಾ ಬಲ್ಲಾಳ್ ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ದಂತಕಾಲೇಜಿನ ಎಲ್ಲಸಿಬ್ಬಂದಿವರ್ಗದವರು , ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾದರು ಜೊತೆಗೆ ಯೆನೆಪೋಯ ವಿಶ್ವವಿದ್ಯಾಲಯವು ಮೆಡಿ ಸ್ಟಡಿ ಗೋ ಆ್ಯಪ್ ನ್ನ ಮೊದಲ ಬಾರಿಗೆ ಪರಿಚಯಿಸಿ, ಹೆಗ್ಗಳಿಕೆಗೆ ಪಾತ್ರವಾಯಿತು.