ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯದಲ್ಲಿ ರಾಷ್ಟಿçÃಯ ಭಾವೈಕ್ಯತಾ ಶಿಬಿರ – ಸಮಾರೋಪ
ರಾಜ್ಯ ಎನ್.ಎಸ್.ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ, ಮತ್ತು ಎನ್.ಎಸ್.ಎಸ್ ಘಟಕ, ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯ ಮಂಗಳೂರು ಇವರ ಸಂಯೋಜನೆಯಲ್ಲಿ ೨೦೨೩, ಡಿಸೆಂಬರ್ ೧೭ ರಿಂದ ಆರಂಭಗೊAಡ ರಾಷ್ಟಿçÃಯ ಭಾವೈಕ್ಯತಾ ಶಿಬಿರ ಡಿಸೆಂಬರ್ ೨೩ ರಂದು ಸಮಾರೋಪಗೊಂಡಿತು.
ಡಾ. ಪ್ರತಾಪ್ ಲಿಂಗಯ್ಯ. ರಾಜ್ಯ ಎನ್.ಎಸ್.ಎಸ್ ಅಧಿಕಾರಿ ಅವರು ಸಮಾರೋಪದ ಮಾತುಗಳನ್ನಾಡಿದರು. ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದ ಸರಿಸುಮಾರು ೨೦೦ ಪ್ರತಿನಿಧಿಗಳು, ತಮ್ಮ ಪ್ರತಿಭೆಯ ಪ್ರಸ್ತುತಿಯೊಂದಿಗೆ ಸಹಬಾಳ್ವೆ ನಡೆಸಿ ಏಕತೆಯ ಅರಿವನ್ನು ಪಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಾಂಸ್ಕೃತಿಕ ವಿನಿಮಯ, ಪರಿಸರದ ಅಧ್ಯಯನ, ಏಳಿಗೆಯ ಚಿಂತನ-ಮAಥನ, ದೈಹಿಕ ಆರೋಗ್ಯ, ಬೌಧಿಕ ವಿಕಾಸ ಈ ಶಿಬಿರದ ಫಲಶ್ರುತಿ. ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯ, ಸಂಯೋಜಕರ ಕಾರ್ಯವೈಖರಿ ಶ್ಲಾಘನೀಯವೆಂದರು.
ಡಾ. ಎಂ ವಿಜಯಕುಮಾರ್ ಮಾನ್ಯ ಉಪಕುಲಪತಿಗಳು, ಯೆನೆಪೋಯ ವಿಶ್ವವಿದ್ಯಾಲಯ, ಇವರು ಸಮಾರಂಭದ ಅಧ್ಯಕ್ಷತೆ ವಹಿಸಿ, ಶಿಬಿರದ ಯಶಸ್ವಿಗೆ ಕಾರಣರಾದ ಸರ್ವರನ್ನು ಅಭಿನಂದಿಸಿದರು. ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ, ಡಾ. ಕೆ.ಎಸ್.ಗಂಗಾಧರ ಸೋಮಯಾಜಿ. ಮಾನ್ಯ ಕುಲಸಚಿವರು ಯೆನೆಪೋಯ ವಿಶ್ವವಿದ್ಯಾಲಯ, ಅಭ್ಯಾಗತರಾಗಿದ್ದರು.
ಡಾ. ಅಶ್ವಿನಿ ಶೆಟ್ಟಿ ಸಂಯೋಜಕರು, ಎನ್.ಎಸ್.ಎಸ್ ಘಟಕ, ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯ ಇವರು ಶಿಬಿರದ ಏಳು ದಿನಗಳಲ್ಲಿ ನಡೆದ ಕಾರ್ಯಕ್ರಮಗಳ ವೈಶಿಷ್ಟö್ಯವನ್ನು ನಿರೂಪಿಸಿದರು. ಅಂತಿಮವಾಗಿ ಕರ್ನಾಟಕ, ಗೋವಾ, ಮಹಾರಾಷ್ಟç, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಗುಜರಾತ್‌ನಿಂದ ಭಾಗವಹಿಸಿದ ಪ್ರತಿನಿಧಿಗಳಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು.
ಮನೀಷ್ ಸ್ವಾಗತಿಸಿದರು. ಪವಿತ್ರ ಶೆಟ್ಟಿ ವಂದನಾರ್ಪಣೆ ಮಾಡಿದರು, ಅವರಿಲ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು,