Home Mangalorean News Kannada News ಯೆನೆಪೋಯ ಮೆಡಿಕಲ್ ಕಾಲೇಜಿನ ಮಕ್ಕಳ ವಿಭಾಗ: ಮಕ್ಕಳ ಲಸಿಕಾ ಸಹಾಯವಾಣಿ

ಯೆನೆಪೋಯ ಮೆಡಿಕಲ್ ಕಾಲೇಜಿನ ಮಕ್ಕಳ ವಿಭಾಗ: ಮಕ್ಕಳ ಲಸಿಕಾ ಸಹಾಯವಾಣಿ

Spread the love

ಯೆನೆಪೋಯ ಮೆಡಿಕಲ್ ಕಾಲೇಜಿನ ಮಕ್ಕಳ ವಿಭಾಗ: ಮಕ್ಕಳ ಲಸಿಕಾ ಸಹಾಯವಾಣಿ

ಯೆನೆಪೋಯ ಮೆಡಿಕಲ್ ಕಾಲೇಜಿನ ಮಕ್ಕಳ ವಿಭಾಗವು ಮಕ್ಕಳ ಲಸಿಕಾ ಸಹಾಯವಾಣಿಯನ್ನು ಇದೇ ಬರುವ ಏಪ್ರಿಲ್ ೫ ರಿಂದ ಆರಂಭಿಸುತ್ತಿದ್ದಾರೆ. ಇದರ ಮೂಲಕ ಮಕ್ಕಳ ಪೋಷಕರು ಲಸಿಕೆಗೆ ಸಂಬAದ ಪಟ್ಟ ಹಾಗೆ ಯಾವುದೇ ಸಂದೇಹಗಳಿದ್ದರೆ ದೂರವಾಣಿಯ ಮೂಲಕ ಕರೆ ಮಾಡಿ ವೈದ್ಯರನ್ನು ಸಂಪರ್ಕಿಸಿ ತಮ್ಮ ಸಂದೇಹಗಳನ್ನು ಚರ್ಚಿಸಬಹುದು. ಇದರಿಂದ ಮಕ್ಕಳಿಗೆ ಅತ್ಯಗತ್ಯವಾದ ಲಸಿಕೆಗಳನ್ನು ಸಮಯಕ್ಕೆ ಸರಿಯಾಗಿ ನೀಡಲಿಕ್ಕೆ ಅನುಕೂಲವಾಗುತ್ತದೆ. ಪೋಷಕರು ತಮ್ಮ ಮಗುವಿಗೆ ಸಮಯಕ್ಕೆ ಅನುಗುಣವಾಗಿ ಯಾವುದಾದರೂ ಲಸಿಕೆಗಳನ್ನು ಕೊಡಿಸಲು ಮರೆತು ಹೋದಲ್ಲಿ / ತಪ್ಪಿ ಹೋದಲ್ಲಿ ಅಥವಾ ಹೊಸ ಲಸಿಕೆಗಳ / ಐಛಿಕ ಲಸಿಕೆಗಳ ಬಗ್ಗೆ ಸಂದೇಹವಿದ್ದಲ್ಲಿ ಮಕ್ಕಳ ತಜ್ಞರ ಜೊತೆ ಕರೆ ಮಾಡಿ ನಿವಾರಿಸಿಕೊಳ್ಳಬಹುದು. ಬೇರೆ ದೇಶಗಳಿಗೆ ಹೋಗುವುದಾದರೆ ಅಥವಾ ಬೇರೆ ದೇಶದಿಂದ ಇಲ್ಲಿಗೆ ಬಂದು ನೆಲೆಸುವುದಾದರೆ ಮಕ್ಕಳ ಲಸಿಕೆಯ ವೇಳಾಪಟ್ಟಿಯಲ್ಲಿ ವ್ಯತ್ಯಾಸವಾಗಬಹುದು. ಆದನೆಲ್ಲಾ ಕರೆಮಾಡಿ ವಿಚಾರಿಸಿ ಸರಿಯಾದ ರೀತಿಯಲ್ಲಿ ಲಸಿಕೆಗಳನ್ನು ಹಾಕಿಸಲು ಈ ಸಹಾಯವಾಣಿಯನ್ನು ಉಪಯೋಗಿಸಬಹುದು. ಇಷ್ಟೆ ಅಲ್ಲದೆ ನಾಯಿ ಅಥವಾ ಬೇರೆ ಪ್ರಾಣಿ ಕಚ್ಚಿದಾಗ ಯಾವ ಲಸಿಕೆ ನೀಡಬಹುದು ಎಂಬುದನ್ನು ಕೂಡಲೇ ಕರೆಮಾಡಿ ತಿಳಿದುಕೊಳ್ಳಬಹುದು. ಇದಲ್ಲದೆ ಕಬ್ಬಿಣದ ಯಾವುದಾದರು ವಸ್ತು ತಗುಲಿದಾಗ ಪೋಷಕರಲ್ಲಿ ಬಹಳ ಸಲ ಟಿಟಿ ಚುಚ್ಚುಮದ್ದಿನ ಬಗ್ಗೆ ಗೊಂದಲ ಮೂಡುತ್ತದೆ. ಆದನ್ನು ಕೂಡ ದೂರವಾಣಿ ಕರೆ ಮಾಡಿ ಕೇಳಿಕೊಳ್ಳಬಹುದು. ಆದಲ್ಲದೆ ಲಸಿಕೆಯ ಬಗ್ಗೆ ಹಾಗೂ ಲಸಿಕೆಯಿಂದ ಉಂಟಾಗುವ ಅಡ್ಡ ಪರಿಣಾಮದ ಬಗ್ಗೆ ಯಾವುದೇ ರೀತಿಯ ಸಣ್ಣ ಪುಟ್ಟ ಅನುಮಾನಗಳಿದ್ದರೂ ಪರಿಹರಿಸಿಕೊಳ್ಳಬಹುದು.

ಈ ಸಹಾಯವಾಣಿಯ ಮೂಲ ಉದ್ದೇಶ ಮಕ್ಕಳ ಲಸಿಕೆಯ ಬಗ್ಗೆ ಪೋಷಕರ ಸಂದೇಹಗಳನ್ನು ನಿವಾರಿಸುವುದು ಮತ್ತು ಎಲ್ಲಾ ಮಕ್ಕಳು ಸಮಯಕ್ಕೆ ಸರಿಯಾಗಿ ಲಸಿಕೆಯನ್ನು ಹಾಕಿಸಿಕೊಳ್ಳಲು ಪ್ರೋತ್ಸಾಹಿಸಿ ಕಾಯಿಲೆಯಿಂದ ರಕ್ಷಣೆ ಪಡೆಯುವುದು.

ಈ ಸಹಾಯವಾಣಿಯು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ ೯ ಗಂಟೆಯಿAದ ಮಧ್ಯಾಹ್ನ ೩ ಗಂಟೆಯವರೆಗೆ ಕಾರ್ಯನಿರತವಾಗಿರುತ್ತದೆ. ಯೇನೆಪೋಯ ಮೆಡಿಕಲ್ ಕಾಲೇಜಿನ ಮಕ್ಕಳ ತಜ್ಞರು ಈ ಕರೆಗಳನ್ನು ಸ್ವೀಕರಿಸಿ ಪೋಷಕರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಇದರ ಉದ್ಘಾಟಣಾ ಸಮಾರಂಭವು ೦೪.೦೪.೨೦೨೪, ಗುರುವಾರ ಬೆಳಿಗ್ಗೆ ೧೦ ಗಂಟೆಗೆ ಯೇನೆಪೋಯ ಡೆಂಟಲ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಇದಕ್ಕೆ ಕಾಲೇಜಿನ ಮುಖ್ಯಸ್ಥರು, ಪ್ರಾಂಶುಪಾಲರು ಮತ್ತು ಸರ್ವೇಕ್ಷಣ ವೈದ್ಯಾಧಿಕಾರಿಗಳು ಉಪಸ್ಥಿತರಿರುತ್ತಾರೆ.

ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಯೇನೆಪೋಯ ಮೆಡಿಕಲ್ ಕಾಲೇಜಿನ ಮಕ್ಕಳ ತಜ್ಞರ ಒಂದು s ಸಣ್ಣ ಪ್ರಯತ್ನ ಇದಾಗಿದೆ.


Spread the love

Exit mobile version