ಯೆನೆಪೋಯ ಮೆಡಿಕಲ್ ಕಾಲೇಜು ಯೋಗ ಮ್ಯಾರಥಾನ್; ಒಂದೇ ದಿನ ಎರಡು ವಿಶ್ವದಾಖಲೆ
ಯೆನೆಪೋಯ ವೈದ್ಯಕೀಯ ಕಾಲೇಜು, ಇವರ ಬೆಳ್ಳಿಹಬ್ಬದ ಪ್ರಯುಕ್ತ ಆಯೋಜಿಸಿದ 25 ಗಂಟೆಗಳ ಮ್ಯಾರಥಾನ್ ಯೋಗ ಬೋಧನೆ ಗೋಲ್ಡನ್ ಬುಕ್ ವರ್ಲ್ಡ್ ರೆಕಾರ್ಡಿನಲ್ಲಿ ಎರಡು ನೂತನ ದಾಖಲೆ ಸೃಷ್ಟಿಸಿದೆ.
ಎರಡನೆಯ ದಾಖಲೆಯಾಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಯಡಿಯಲ್ಲಿ 25 ಗಂಟೆಗಳ ಅವಧಿಯಲ್ಲಿ ತಲಾ 1.5 ಗಂಟೆ ಯೋಗ ಶಿಕ್ಷಣ ನೀಡುವ ಮೂಲಕ ” Most Healthcare Professionals Attending Yoga Session” ಎಂಬ ಶೀರ್ಷಿಕೆಯಲ್ಲಿ ಯೆನೆಪೋಯ ವೈದ್ಯಕೀಯ ಕಾಲೇಜು ಸಂಸ್ಥೆಗೆ ಎರಡನೇ ವಿಶ್ವದಾಖಲೆಯನ್ನು ಘೋಷಿಸಲಾಯಿತು.
ಈ ಐತಿಹಾಸಿಕ ಯೋಗ ದಾಖಲೆಯಲ್ಲಿ 17 ಬ್ಯಾಚುಗಳ್ಳಲ್ಲಿ25 ಗಂಟೆಗಳ ಕಾಲ ಒಟ್ಟು 3658 ಮಂದಿ ಭಾಗವಹಿಸಿದರು, ಇದರಲ್ಲಿ2,693 ಆರೋಗ್ಯ ವೃತ್ತಿಪರರು ಭಾಗಿಯಾಗಿದ್ದರು
ಈ ಎರಡು ದಾಖಲೆಯನ್ನು ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಮ್ಯಾನೇಜ್ಮೆಂಟ್ ಜಡ್ಜ್, ಏಷ್ಯಾ ಹೆಡ್ ಡಾ. ಮನೀಶ್ ವಿಶ್ನೋಯಿ ಅವರು 25 ಗಂಟೆ ದಾಖಲೆನಡೆದ ಸ್ಥಳ ಯೆನೆಪೋಯ ಎಂಡ್ಯೂರೆನ್ಸ್ ಜೋನ್ ದೇರಳಕಟ್ಟೆಯಲ್ಲಿ ವೀಕ್ಷಣೆ ಮಾಡಿ ಘೋಷಿಸಿದರು.
ವೈಯಕ್ತಿಕ ಗೋಲ್ಡನ್ ಬುಕ್ ಆಫ್ ರೆಕಾರ್ಡನ್ನು ಕುಶಾಲಪ್ಪ ಗೌಡರಿಗೆ ಹಸ್ತಾಂತರಿಸಲಯಿತು. ಸಂಸ್ಥೆಗೆ ನೀಡಲಾದ ಗೋಲ್ಡನ್ ಬುಕ್ ಆಫ್ ರೆಕಾರ್ಡನ್ನು ಯೆನೆಪೋಯ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಎಸ್.ಮೂಸಬ್ಬ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ)ದ ಉಪಕುಲಪತಿ ಡಾ.ವಿಜಯಕುಮಾರ್, ಡಾ. ಗಂಗಾಧರ ಸೋಮಯಾಜಿ,ರಿಜಿಸ್ಟ್ರಾರ್, ಯೆನೆಪೋಯ ವಿ. ವಿ , ರೇ.ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ , ಉಪಕುಲಪತಿ ಸಂತ ಅಲೋಶಿಯಸ್ ಪರಿಗಣಿಸಲ್ಪಟ್ಟ ವಿ.ವಿ., ಡಾ.ಹಿಮನಿ, ಯೋಗ ಕನ್ಸ್ಲ್ ಟೆಂಟ್,ಆಯುಷ್ ಮಂತ್ರಾಲಯ ದೆಹಲಿ, ಡಾ. ಅಶ್ವಿನಿ ದತ್ ಡೀನ್ ಅಕ್ಯಾಡೆಮಿಕ್ಸ್ ಯೆನೆಪೋಯ ವಿ. ವಿ, ಡಾ.ಪ್ರಕಾಶ್ ಸಲ್ದಾನ, ಉಪ ಪ್ರಾಂಶುಪಾಲರು ಯೆನೆಪೋಯ ವೈದ್ಯಕೀಯ ಕಾಲೇಜು, ಡಾ. ಅಭಯ್ ನಿರ್ಗುಡೆ,ಡೀನ್ ಯೆನೆಪೋಯ ವೈದ್ಯಕೀಯ ಕಾಲೇಜು, ಡಾ. ಹಬೀಬ್ ರೆಹ್ಮಾನ್ ವೈದ್ಯಕೀಯ ಅಧೀಕ್ಷಕ, ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ, ಡಾ. ಅಶ್ವಿನಿ ಶೆಟ್ಟಿ, ನಿರ್ದೇಶಕರು – ಔಟ್‌ರೀಚ್ ಮತ್ತು ವಿಸ್ತರಣೆ ನಿರ್ದೇಶನಾಲಯ ಯೆನೆಪೋಯ(ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಉಪಸ್ಥಿತರಿದ್ದರು.