ಯೆನೆಪೋಯ ವಿವಿಯಲ್ಲಿ ರಾಜ್ಯಮಟ್ಟದ ಎನ್ ಎಸ್ ಎಸ್ ಕಾರ್ಯಾಗಾರ

Spread the love

ಯೆನೆಪೋಯ ವಿವಿಯಲ್ಲಿ ರಾಜ್ಯಮಟ್ಟದ ಎನ್ ಎಸ್ ಎಸ್ ಕಾರ್ಯಾಗಾರ

ಕೊಣಾಜೆ: ರಾಜ್ಯ ಎನ್.‌ ಎಸ್.‌ ಎಸ್.‌ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಯೆನೆಪೋಯ ವಿಶ್ವವಿದ್ಯಾಲಯ, ಮಂಗಳೂರು ಇವರ ಸಹಯೋಗದಲ್ಲಿ ಇಟಿಐ ಮಾದರಿಯ ರಾಜ್ಯ ಮಟ್ಟದ ಐದು ದಿನಗಳ ಎನ್.‌ ಎಸ್.‌ ಎಸ್.‌ ತರಬೇತಿ ಕಾರ್ಯಗಾರದ ಉದ್ಘಾಟನೆಯು ಸೋಮವಾರ ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯ ದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿ ರಂದೀಪ್.‌ ಡಿ ರವರು ನೆರವೇರಿಸಿದತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಂ. ವಿಜಯಕುಮಾರ್ ರವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ನಾಡೋಜ. ವೂಡೇ ಪಿ. ಕೃಷ್ಣ, ರಾಜ್ಯ ಎನ್.‌ ಎಸ್.‌ ಎಸ್.‌ ಅಧಿಕಾರಿ ಡಾ. ಪ್ರತಾಪ್‌ ಲಿಂಗಯ್ಯ, ಬೆಂಗಳೂರಿನ ಎನ್.‌ ಎಸ್.‌ ಎಸ್.‌ ಪ್ರಾದೇಶಿಕ ಕಛೇರಿಯ ನಿರ್ದೇಶಕರಾದ ಕಾರ್ತಿಗೇಯನ್‌ , ಗಾಂಧಿಭವನದ ಪ್ರೊ. ಜಿ.ಬಿ. ಶಿವರಾಜು, ಯೆನೆಪೋಯ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಕೆ. ಎಸ್.‌ ಗಂಗಾಧರ ಸೋಮಯಾಜಿ, ಎನ್.‌ ಎಸ್.‌ ಎಸ್.‌ ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಡಾ. ಅಶ್ವಿನಿ ಎಸ್.‌ ಶೆಟ್ಟಿ ಭಾಗವಹಿಸಿದ್ದರು.


Spread the love