ಯೇನೆಪೋಯ ವಿ.ವಿ: ಡಾ.ನಿವೇದಿತಾ ಅವರ ಕೃತಿ ಬಿಡುಗಡೆ

Spread the love

ಯೇನೆಪೋಯ ವಿ.ವಿ: ಡಾ.ನಿವೇದಿತಾ ಅವರ ಕೃತಿ ಬಿಡುಗಡೆ
 
ಕೊಣಾಜೆ: ದೇರಳಕಟ್ಟೆ ಯೇನೆಪೋಯ ಮೆಡಿಕಲ್ ಕಾಲೇಜಿನ ಬಯೋಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕರಾದ ಡಾ.ನಿವೇದಿತಾ ಎಲ್. ರಾವ್ ಅವರು ಸಂಪಾದಿಸಿರುವ ‘ಎಕ್ಸ್‌ಪ್ಲೋರ್ ದಿ ಸಿಸ್ಟಮಿಕ್ ಅಪ್ಲಿಕೇಷನ್ಸ್ ಆಫ್ ಸಲೈವಾ -ಡಯಾಗ್ನೋಸ್ಟಿಕ್ಸ್’ ಎಂಬ ಅಂತರಾಷ್ಟ್ರೀಯ ಮಟ್ಟದ ಕೃತಿಯನ್ನು ಯೇನೆಪೋಯ ವಿಶ್ವವಿದ್ಯಾಲಯ (ಪರಿಗಣಿಸಲ್ಪಟ್ಟ)ದ ಕುಲಪತಿ ಡಾ.ಎಂ.ವಿಜಯಕುಮಾರ್ ಅವರು ಯೇನೆಪೋಯ ವಿ.ವಿ.ಆವರಣದಲ್ಲಿ ಬಿಡುಗಡೆಗೊಳಿಸಿದರು.


ಈ ಕೃತಿಯನ್ನು ಯುನೈಟೆಡ್ ಕಿಂಗ್‌ಡಂನ ಕೇಂಬ್ರಿಡ್ಜ್ ಸ್ಕಾಲರ್ಸ್ ಪಬ್ಲಿಷಿಂಗ್ ಪ್ರಕಟಿಸಿದ್ದು ಮತ್ತು ವೈಎಂಸಿಯ ಹಳೆಯ ವಿದ್ಯಾರ್ಥಿ ಡಾ.ಸದಾಫ್ ಅಲಿ ಸಹ-ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಯೆನೆಪೋಯದ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಕುಲಸಚಿವ ಡಾ.ಗಂಗಾಧರ ಸೋಮಯಾಜಿ ಕೃತಿಯ ವೆಬ್‌ಲಿಂಕ್ ಬಿಡುಗಡೆ ಮಾಡಿದರು. ಕ್ಯಾನ್ಸರ್, ವೈರಲ್ ಸೋಂಕು, ಹೃದಯರಕ್ತನಾಳದ ಕಾಯಿಲೆ,ಮನೋವೈದ್ಯಕೀಯ ಪರಿಸ್ಥಿತಿಗಳು ಮತ್ತು ಮಧುಮೇಹ ಸೇರಿದಂತೆ ವ್ಯವಸ್ಥಿತ ರೋಗಗಳಿಗೆ ಸುಧಾರಿತ ತಂತ್ರಜ್ಞಾನ-ಆಧಾರಿತ ಲಾಲಾರಸ-ರೋಗ ನಿರ್ಣಯಗಳ ಇತ್ತೀಚಿನ ಪರಿಣಾಮಗಳ ಮೇಲಿನ ವಿಷಯಗಳನ್ನು ಕೇಂದ್ರೀಕರಿಸಿ ರಚಿಸಿದ ಕೃತಿ ಇದಾಗಿದೆ.

ವೈದ್ಯರು, ಶಿಕ್ಷಣತಜ್ಞರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಓದುಗರಿಗೆ ಅಧ್ಯಯನಾಸಕ್ತರಿಗೆ ‌ಇದೊಂದು ಆಕರ ಗ್ರಂಥವಾಗಿದೆ.

ಯೆನೆಪೋಯ ವಿವಿಯ ಡೀನ್ ಡಾ.ಅಶ್ವಿನಿ ದತ್, ಕಣ್ಣೂರು ಮತ್ತು ಕ್ಯಾಲಿಕಟ್ ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿ ಡಾ. ಅಬ್ದುಲ್ ರಹ್ಮಾನ್, ಯೇನೆಪೋಯ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎಸ್.ಮೂಸಬ್ಬ, ಮೆಡಿಸಿನ್ ವಿಭಾಗದ ಡೀನ್ ಡಾ.ಅಭಯ್ ನಿರ್ಗುಡೆ,ಯೆನೆಪೋಯ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ರೇಖಾ ಪಿ.ಡಿ., ಯೇನೆಪೋಯ ಗ್ರೂಪ್ ಆಫ್ ಹಾಸ್ಪಿಟಲ್ಸ್ ಗ್ರೂಪ್ ಡೈರೆಕ್ಟರ್ ಡಾ. ಖಾಲಿದಾ ಅದ್ನಾನ್, ವಿವಿಧ ವಿಭಾಗಗಳ ಡಾ. ಅಶ್ವಿನಿ ಶೆಟ್ಟಿ, ರಾಜೇಶ್ ಕರ್ಕೇರ, ಡಾ.ಭಾಗ್ಯ ಶರ್ಮಾ, ಡಾ.ಶಾಹೀನ್ ಬಿ.ಶೇಖ್, ಡಾ.ಅನಿಲ್ ಕಾಕುಂಜೆ ಉಪಸ್ಥಿತರಿದ್ದರು.

ಡಾ.ನಿವೇದಿತಾ ಎಲ್.ರಾವ್ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಅಧ್ಯಾಪಕರು, ಬಯೋಕೆಮಿಸ್ಟ್ರಿ ವಿಭಾಗದ ಸ್ನಾತಕೋತ್ತರ ಪದವೀಧರರು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.


Spread the love