ಯೋಗಿ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗದ ವೀಡಿಯೋಗ್ರಾಫರ್ ಮೇಲೆ ಬಿಜೆಪಿಗರಿಂದ ಪುಂಡಾಟದ ವರ್ತನೆ, ದೂರು ದಾಖಲು
ಕುಂದಾಫುರ: ತ್ರಾಸಿಯಲ್ಲಿ ನಡೆದ ಚುನಾವಣಾ ಸಭಾ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾರ್ಯಕ್ರಮ ಚಿತ್ರೀಕರಣಕ್ಕೆ ತೆರಳಿದ ಚುನಾವಣಾ ಆಯೋಗದ ಸರ್ವೈಲೆನ್ಸ್ ತಂಡದಲ್ಲಿ ಟೀಮ್ ನ ವಿಡಿಯೋ ಗ್ರಾಫರ್ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತು ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೇ 8 ರಂದು ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ತ್ರಾಸಿ ಎಂಬಲ್ಲಿ ಭಾರತೀಯ ಜನತಾ ಪಕ್ಷದ ಯೋಗಿ ಆದಿತ್ಯನಾಥ ರವರ ಚುನಾವಣಾ ಸಭಾ ಕಾರ್ಯಕ್ರಮಲ್ಲಿ ಪ್ರಸಾದ್ ಎಂಬುವವರು ವಿಡಿಯೋ ಸರ್ವೈಲೆನ್ಸ್ ತಂಡದೊಂದಿಗೆ ಭಾಗವಹಿಸಿದ್ದು. ಅವರು ಸರ್ವೈಲೆನ್ಸ್ ತಂಡದಲ್ಲಿ ಟೀಮ್ ನ ವಿಡಿಯೋ ಗ್ರಾಫರ್ ಆಗಿದ್ದವರು ಮಧ್ಯಾಹ್ನ 12:45 ಗಂಟೆಗೆ ಅವರು ವೇದಿಕೆಯ ಬಳಿ ತುರ್ತಾಗಿ ಹೋಗಿ ವಿಡಿಯೋ ಚಿತ್ರೀಕರಣ ಮಾಡಲು ತೆರೆಳಿದಾಗ ವೇದಿಕೆಯ ಮೇಲಿದ್ದ ಕೆಲವೊಂದು ವ್ಯಕ್ತಿಗಳು ವಿಡಿಯೋ ಗ್ರಾಫರ್ ಪ್ರಸಾದ್ ರವರು ವಿಡಿಯೋ ಚಿತ್ರೀಕರಣ ಮಾಡುವುದನ್ನು ತಡೆ ಹಿಡಿದು ಅವರನ್ನು ಎಳೆದಾಡಿ, ವಿಡಿಯೋ ಕೆಮರಾವನ್ನು ಬಲತ್ಕಾರವಾಗಿ ಕಿತ್ತುಕೊಂಡು ವಿಡಿಯೋ ಕೆಮರಾದಲ್ಲಿ ಸೆರೆ ಹಿಡಿದ ಎಲ್ಲಾ ವಿಡಿಯೋವನ್ನು ಡಿಲೀಟ್ ಮಾಡಿ ಕೆಮಾರವನ್ನು ಹಿಂತಿರುಗಿಸಿರುತ್ತಾರೆ.
ಈ ಮೂಲಕ ಚುನಾವಣಾ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ವಿಡಿಯೋ ಗ್ರಾಫರ್ ಪ್ರಸಾದ್ ರವರು ಪಿ. ಶ್ರೀನಿವಾಸ, 118ನೇ ಬೈಂದೂರು ವಿಧಾನ ಸಭಾ ಕ್ಷೇತ್ರ ಇವರ ಕಛೇರಿಗೆ ಬಂದು ದೂರು ನೀಡಿದ್ದು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 58/2018 ಕಲಂ: 352, 332, 341 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.