ರಕ್ತದಾನದಿಂದ ಹೃದಯಗಳು ಬೆಸೆಯುತ್ತದೆ : ಡಾ|| ಚೂಂತಾರು 

Spread the love

ರಕ್ತದಾನದಿಂದ ಹೃದಯಗಳು ಬೆಸೆಯುತ್ತದೆ : ಡಾ|| ಚೂಂತಾರು 

ಮ0ಗಳೂರು :ಜೂನ್ 14 ರಂದು “ವಿಶ್ವ ರಕ್ತದಾನಿಗಳ ದಿನಾಚರಣೆ” ಅಂಗವಾಗಿ ಜಿಲ್ಲಾ ಗೃಹರಕ್ಷಕದಳ, ದ.ಕ.ಜಿಲ್ಲೆ ಇದರ ವತಿಯಿಂದ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆಯಿತು. ಸುಮಾರು 20ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಹಿರಿಯ ಮಹಿಳಾ ಗೃಹರಕ್ಷಕಿ ಪುಷ್ಪಲತಾ ಇವರಿಗೆ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನ ಮಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪುಷ್ಪಲತಾ ಅವರು ನಿಷ್ಕಾಮ ಸೇವೆ ಸಲ್ಲಿಸುವ ಗೃಹರಕ್ಷಕಿಯರಿಗೆ ರಕ್ತದಾನ ಮಾಡಿದಾಗ ಮತ್ತಷ್ಟು ಸಂತೃಪ್ತಿ ಮತ್ತು ನೆಮ್ಮದಿ ಸಿಗುತ್ತದೆ. ಇದರ ಜೊತೆಗೆ ಜೀವ ಉಳಿಸಿದ ಪುಣ್ಯ ಬರುತ್ತದೆ. ಪ್ರತಿಯೊಬ್ಬ ಗೃಹರಕ್ಷಕರು ವರ್ಷಕ್ಕೊಮ್ಮೆಯಾದರೂ ರಕ್ತದಾನ ಮಾಡಿ ಎಂದು ಕರೆ ನೀಡಿದರು.

ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡುತ್ತಾ ರಕ್ತಕ್ಕೆ ಬೇರೆ ಪರ್ಯಾಯವಾದ ವಸ್ತುವಿಲ್ಲದ ಕಾರಣದಿಂದ ದಾನಿಗಳಿಂದಲೇ ರಕ್ತ ದಾನ ಪಡೆಯಬೇಕಾದ ಅನಿವಾರ್ಯತೆ ಇದೆ. ಯಾವುದೇ ಜಾತಿ, ಮತ, ಧರ್ಮದ ಭೇದವಿಲ್ಲದೆ. ಬಡವ-ಬಲ್ಲಿದ ಎಂಬುದರ ಪರಿವೆ ಇಲ್ಲದೆ ರಕ್ತದಾನ ಮಾಡುವುದರಿಂದ ಸಾಮಾಜಿಕ ಸಾಮರಸ್ಯ ಉಂಟಾಗಿ ಭಾತೃತ್ವದ ಭಾವನೆಯನ್ನು ಹೆಚ್ಚಿಸುತ್ತದೆ. ಮತ್ತು ಹೃದಯಗಳನ್ನು ಬೆಸೆಯುತ್ತದೆ ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಉಪಸಮಾದೇಷ್ಟರಾದ ರಮೇಶ್, ಘಟಕಾಧಿಕಾರಿ ಮಾರ್ಕ್‍ಶೇರಾ, ಹಿರಿಯ ಗೃಹರಕ್ಷಕರಾದ ಸುರೇಶ್ ಶೇಟ್, ರಮೇಶ್ ಭಂಡಾರಿ ಮತ್ತು ಹಿರಿಯ ಗೃಹರಕ್ಷಕಿ ಲೀಲಾ ಕುಕ್ಯಾನ್ ಮುಂತಾದವರು ಉಪಸ್ಥಿತರಿದ್ದರು.


Spread the love