ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯ ವೃದ್ಧಿ  – ಜಯಪ್ರಕಾಶ್ ಹೆಗ್ಡೆ

Spread the love

ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯ ವೃದ್ಧಿ  – ಜಯಪ್ರಕಾಶ್ ಹೆಗ್ಡೆ

ಉಡುಪಿ: ಆರೋಗ್ಯವಂತರು ರಕ್ತ ನೀಡುವುದರಿಂದ ಅವರ ಆರೋಗ್ಯ ಇನ್ನೂ ಹೆಚ್ಚಾಗುತ್ತದೆ ಎಂದು ಮಾಜಿ ಸಂಸದರಾದ ಕೆ ಜಯಪ್ರಕಾಶ್ ಹೆಗ್ಡೆ ಹೇಳಿದರು.

ಅವರು ಭಾನುವಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಹಾಗೂ ಜಿಲ್ಲಾಸ್ಪತ್ರೆಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ರಕ್ತದಾನದ ವಿಷಯದಲ್ಲಿ ಜನರಲ್ಲಿ ಆತಂಕಗಳಿವೆ ಆದರೆ ರಕ್ತದಾನದಿಂದ ಯಾವ ಸಮಸ್ಯೆಯೂ ಉಂಟಾಗುವುದಿಲ್ಲ. ರಕ್ತದಾನ ಎಲ್ಲಾ ದಾನಗಳಿಗಿಂತಲೂ ಶ್ರೇಷ್ಠ ದಾನವಾಗಿದೆ. ರಕ್ತದಾನದಂತೆಯೇ ನಮ್ಮ ಕಾಲದ ನಂತರ ದೇಹದಾನ, ಕಣ್ಣುಗಳನ್ನು ದಾನ ಮಾಡುವುದರ ಮೂಲಕ ಒಳ್ಳೆಯ ಕಾರ್ಯಗಳಲ್ಲಿ ಕೈಜೋಡಿಸಬೇಕು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ತಮ್ಮ ಹುಟ್ಟುಹಬ್ಬವನ್ನು ರಕ್ತದಾನ ಶಿಬಿರದ ಮೂಲಕ ವಿಶಿಷ್ಠವಾಗಿ ಆಚರಿಸಿರುವುದು ಇತರರಿಗೆ ಮಾದರಿ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್ ಮಾತನಾಡಿ ನಾಲ್ಕನೇ ವರ್ಷದ ರಕ್ತದಾನ ಇಂದು ನಡೆಯಿತ್ತಿದೆ. ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಹಲವಾರು ಬಡ ರೋಗಿಗಳು ಆಗಮಿಸುತ್ತಿದ್ದು ಅಲ್ಲಿಯೂ ರಕ್ತದ ಕೊರತೆ ಇದ್ದು ಈ ಮೂಲಕ ಸಹಾಯ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದರು.

ರಕ್ತದಾನ ಕಾರ್ಯಕ್ರಮದಲ್ಲಿ ಸುಮಾರು 148 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ನಾಯಕರಾದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಎಮ್ ಎ ಗಫೂರ್, ವೆರೋನಿಕಾ ಕರ್ನೆಲಿಯೋ, ಸೌರಭ್ ಬಲ್ಲಾಳ್, ಜ್ಯೋತಿ ಹೆಬ್ಬಾರ್, ಚಂದ್ರಿಕಾ ಶೆಟ್ಟಿ, ಯತೀಶ್ ಕರ್ಕೆರಾ, ಪ್ರಶಾಂತ್ ಪೂಜಾರಿ, ಶರತ್ ಶೆಟ್ಟಿ, ಗಣೇಶ್ ನೆರ್ಗೀ, ರೋಶನ್ ಶೆಟ್ಟಿ, ಮಹಾಬಲ ಕುಂದರ್, ಕೇಶವ ಕೋಟ್ಯಾನ್, ವಂ. ವಿಲಿಯಂ ಮಾರ್ಟಿ್ಸ್, ಅಣ್ಣಯ್ಯ ಶೇರಿಗಾರ್, ಭಾಸ್ಕರ್ ರಾವ್ ಕಿದಿಯೂರು, ಪ್ರಸಾದ್ ರಾಜ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ, ಆನಂದ್ ಪೂಜಾರಿ, ಚಂದ್ರಮೋಹನ್, ವಿಜಯ್ ಪೂಜಾರಿ, ಸತೀಶ್ ಪುತ್ರನ್, ಯುವರಾಜ್, ಸಜ್ಜನ್ ಶೆಟ್ಟಿ, ಕುಶಲ್ ಶೆಟ್ಟಿ, ದಿನಾಕರ್ ಹೇರೂರು, ಪ್ರಶಾಂತ್ ಸುವರ್ಣ, ಉದಯ್ ಆಚಾರ್ಯ, ಮಮತಾ ಶೆಟ್ಟಿ, ಕುಸುಮಾ, ವತ್ಸಲಾ, ಸಂಧ್ಯಾ ತಿಲಕ್‌ರಾಜ್, ಅರ್ಚನಾ, ಭರತ್, ಆಶಾ ಚಂದ್ರಶೇಖರ್, ವಿಶ್ವಾಸ್ ಅಮೀನ್, ಸತೀಶ್ ಕೊಡವೂರು ಹಾಗೂ ಇತರರು ಉಪಸ್ಥಿತರಿದ್ದರು


Spread the love
Subscribe
Notify of

0 Comments
Inline Feedbacks
View all comments