ರಕ್ಷಣೆಗಾಗಿ ದುಬೈ ಪೋಲಿಸರಿಂದ ಹಾರುವ ಬೈಕ್ ಉಪಯೋಗ!
ದುಬೈ: ವಿಶ್ವದಾದ್ಯಂತ ಪೋಲಿಸರು ಕಾನೂನು ಬಂದೋಬಸ್ತು ಸೇವೆಗೆ ಕಾರು ಜೀಪ್ ಬೈಕುಗಳನ್ನು ಉಪಯೋಗಿಸುವುದನ್ನು ನೋಡಿದ್ದೇವೆ ಆದರೆ ಈಗ ದುಬೈ ಪೋಲಿಸರು ಇದಕ್ಕೆಲ್ಲಾ ಭಿನ್ನವಾಗಿ ಹಾರುವ ಮೋಟಾರ್ ಬೈಕ್ ಉಪಯೋಗಿಸಿ ಸುತ್ತಾಡುವ ಮೂಲಕ ಗಮನ ಸೆಳೆದಿದ್ದಾರೆ.
ಹೋವರ್ ಸರ್ಫ್ ಕಂಪೆನಿಯು ತಯಾರಿಸಿದ ಹೋವರ್ ಬೈಕಿನಲ್ಲಿ ಪೋಲಿಸ್ ಸಿಬಂದಿಯೊಬ್ಬರು ಸುತ್ತುವ ವೀಡಿಯೊವೊಂದು ಸಕತ್ ವೈರಲ್ ಆಗುತ್ತಿದೆ. ರಷ್ಯಾದ ಹೋವರ್ ಸರ್ಫ್ ಕಂಪೆನಿ ತಯಾರಿಸಿರುವ ಈ ಹಾರುವ ಬೈಕ್ ನೆಲದಿಂದ 16 ಅಡಿ ಎತ್ತರಕ್ಕೆ ಹಾರಲಿದ್ದು, ಸುಮಾರು 25 ನಿಮಿಷಗಳ ಕಾಲ ಹಾರಾಟ ನಡೆಸುವ ಸಾಮರ್ಥ್ಯ ಈ ಬೈಕ್ ಹೊಂದಿದೆ ಎನ್ನಲಾಗುತ್ತಿದ್ದು, ಕ್ರೀಪ್ರ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ವಿಶೇಷ ಬೈಕುಗಳನ್ನು ಬಳಸಲಾಗುತ್ತದೆ.