ರಚನಾ ಪ್ರಶಸ್ತಿ 2023-25 ಅರ್ಜಿ/ ನಾಮಪತ್ರ ಆಹ್ವಾನ
ಮಂಗಳೂರು: ರಚನಾ ಕ್ಯಾಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ, ಮಂಗಳೂರು ಮೂಲದ ವಿವಿಧೆಡೆಗಳಲ್ಲಿ ಹಬ್ಬಿಕೊಂಡಿರುವ ಕ್ಯಾಥೊಲಿಕ್ ಕ್ರೈಸ್ತ ಸಮುದಾಯದ, ತಂತಮ್ಮ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗಳನ್ನು ಮಾಡಿರುವ ಗಣ್ಯರನ್ನು ಪರಿಗಣಿಸಿ, ಆಯ್ದು ‘ರಚನಾ’ ಪ್ರಶಸ್ತಿಯನ್ನು ನೀಡುವ ಮೂಲಕ ಪುರಸ್ಕರಿಸುತ್ತಿದೆ. 2023-25ನೇ ಸಾಲಿನ ಈ ಕೆಳಗಿನ ಪ್ರಶಸ್ತಿಗಳಿಗಾಗಿ ನಾಮಪತ್ರಗಳನ್ನು ಆಹ್ವಾನಿಸಲಾಗಿದೆ.
1. ರಚನಾ ಕೃಷಿಕ
2. ರಚನಾ ವೃತ್ತಿಪರ (ವೈದ್ಯರು, ವಕೀಲರು, ಇಂಜಿನಿಯರ್ಸ್, ಚಾಟರ್ಡ್ ಎಕೌಂಟೆಂಟ್ಸ್)
3. ರಚನಾ ಉದ್ಯಮಿ
4. ರಚನಾ ಅನಿವಾಸಿ ಉದ್ಯಮಿ/ ವೃತ್ತಿಪರ
5. ರಚನಾ ವಿಶೇಷ ಮಹಿಳಾ ಸಾಧಕಿ (ಉದ್ಯಮಿ, ವೃತ್ತಿಪರ, ಕೃಷಿಕ)
ಪ್ರಶಸ್ತಿಯು ಬಿರುದು, ಸನ್ಮಾನ ಪತ್ರ, ಸ್ಮಾರಕ, ಸಾರ್ವಜನಿಕ ಸನ್ಮಾನವನ್ನೊಳಗೊಂಡಿರುವುದು. ಅರ್ಜಿ / ನಾಮಪತ್ರಗಳನ್ನು ಭಾವಚಿತ್ರದೊಂದಿಗೆ ಅಧ್ಯಕ್ಷರು, ರಚನಾ, ಮೊದಲ ಮಹಡಿ, ಪಿಯೊ ಮಾಲ್, ಜೈಲ್ ರಸ್ತೆ, ಮಂಗಳೂರು 575 004. ಇಮೇಯ್ಲ್: rachanamangalore@gmail.com, ಈ ವಿಳಾಸಕ್ಕೆ ದಿನಾಂಕ 31.05.2025 ಕ್ಕೂ ಮುಂಚಿತವಾಗಿ ತಲುಪುವಂತೆ ಕಳುಹಿಸಲು ಕೋರಲಾಗಿದೆ.
25 ಮಂದಿ ಜ್ಯೂರಿ ಸದಸ್ಯರ ತಂಡವು ನಾಮಪತ್ರ ಅರ್ಜಿಗಳನ್ನು ಸೂಕ್ತವಾಗಿ ಪರಿಶೀಲಿಸಿ ಪ್ರಶಸ್ತಿಗಳಿಗಾಗಿ ಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡುವರು.
ಪ್ರಶಸ್ತಿ ಪ್ರದಾನ ಕಾರ‍್ಯಕ್ರಮವು, 2025ರ ಅಕ್ಟೋಬರ್ 05, ಭಾನುವಾರದಂದು ಸಂಜೆ 6.00ಕ್ಕೆ ಮಿಲಾಗ್ರಿಸ್ ಜ್ಯುಬಿಲಿ ಸಭಾಭವನ ಮಂಗಳೂರು, ಇಲ್ಲಿ ಮಂಗಳೂರಿನ ಬಿಷಪ್ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಇವರ ಅಧ್ಯಕ್ಷತೆಯಲ್ಲಿ ಹಾಗೂ ಇತರ ಪ್ರಮುಖ ಗಣ್ಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನಡೆಯಲಿರುವುದು.
‘ರಚನಾ ಪ್ರಶಸ್ತಿ’ ಬಗ್ಗೆ ಹೆಚ್ಚಿನ ವಿವರ ಹಾಗೂ ಮಾಹಿತಿಗಾಗಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ರಚನಾ ಕಛೇರಿಯ ದೂರವಾಣಿ ಸಂಖ್ಯೆ: 83106 42093 / 99720 17484 ಸಂಪರ್ಕಿಸಲು ಕೋರಲಾಗಿದೆ.