Home Mangalorean News Kannada News ರಫೇಲ್ ಒಪ್ಪಂದ ಬಿಜೆಪಿಯ ಭ್ರಷ್ಟಾಚಾರದ ದುರ್ಗಂದ ಪಸರಿಸುತ್ತಿದೆ – ಶ್ರೀ ಜೈವೀರ್ ಶೇರ್ಗಿಲ್

ರಫೇಲ್ ಒಪ್ಪಂದ ಬಿಜೆಪಿಯ ಭ್ರಷ್ಟಾಚಾರದ ದುರ್ಗಂದ ಪಸರಿಸುತ್ತಿದೆ – ಶ್ರೀ ಜೈವೀರ್ ಶೇರ್ಗಿಲ್

Spread the love

ರಫೇಲ್ ಒಪ್ಪಂದ ಬಿಜೆಪಿಯ ಭ್ರಷ್ಟಾಚಾರದ ದುರ್ಗಂದ ಪಸರಿಸುತ್ತಿದೆ – ಶ್ರೀ ಜೈವೀರ್ ಶೇರ್ಗಿಲ್

ಬಿಜೆಪಿಯ ರಫೇಲ್ ಒಪ್ಪಂದ ಪಾರದರ್ಶಕತೆಯನ್ನು, ಭಾರತದಲ್ಲಿ ತಯಾರಿಸಿ (ಮೇಕ್ ಇನ್ ಇಂಡಿಯ), ತಾಂತ್ರಿಕತೆಯ ಹಸ್ತಾಂತರವನ್ನು ಇಲ್ಲವಾಗಿಸಿದೆ ಎಂದು ಶ್ರೀ ಜೈವೀರ್ ಶೇರ್ಗಿಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ವಕ್ತಾರರು ಇಂದು ಕಾಂಗ್ರೆಸ್ ಕಛೇರಿಯಲ್ಲಿ ಹೇಳಿದರು.
ರಫೇಲ್ ಹಗರಣವು ರಾಷ್ಟ್ರೀಯ ಹಿತಾಸಕ್ತಿಯನ್ನು ನಾಶ ಮಾಡಿದ ದೊಡ್ಡ ನಿದರ್ಶನ, ಸಕಾರದ ಬೊಕ್ಕಸಕ್ಕೆ ನಷ್ಟ ಮತ್ತು ಆಪ್ತ ಬಂಡವಾಳಶಾಹಿ ಸ್ನೇಹಿತರಿಗೆ ಉತ್ತೇಜನವನ್ನು ಸಾರ್ವಜನಿಕ ಕ್ಷೇತ್ರದ ಉದ್ದಿಮೆಯನ್ನು ಬೆಲೆತೆತ್ತು ನೀಡಲಾಗಿದೆ. ಸ್ವತಂತ್ರ ಭಾರತದ ಅತಿ ದೊಡ್ಡ ರಕ್ಷಣಾವಲಯದ ಒಪ್ಪಂದದಲ್ಲಿ “ಭಾರತವನ್ನು ವಂಚಿಸುವ ಕಲೆ’ ಮೋದಿ ಸರ್ಕಾರದ ಮಂತ್ರವಾಗಿದೆ  ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡಿರುವ ಮೋದಿ ಸರ್ಕಾರ ನಾಚಿಕೆಗೆಟ್ಟ ಮುಚ್ಚಿಹಾಕುವ ಕಸರತ್ತಿನಲ್ಲಿ ತೊಡಗಿಕೊಂಡಿದೆ.
1.  ರಫೇಲ್ ಹಗರಣ, ರೂ.41205 ಕೋಟಿ ಸಾರ್ವಜನಿಕ ಹಣ ನಷ್ಟ; ರೂ.526 ಕೋಟಿಯ ವಿಮಾನವನ್ನು ರೂ1670 ಕೋಟಿಗೆ ಖರೀದಿಸುವುದರಿಂದ
ಯುಪಿಎ ಕಾಂಗ್ರೆಸ್ ಸಕಾರದ ಅವಧಿಯಲ್ಲಿ ದಿನಾಂಕ 12ನೇ ಡಿಸೆಂಬರ್ 2012ರಲ್ಲಿ ತೆರೆಯಲಾದ ಅಂತರಾಷ್ಟ್ರೀಯ ಬಿಡ್ ಪ್ರಕಾರ 126 ವಿಮಾನಗಳ ಪೈಕಿ ಪ್ರತಿ ವಿಮಾನಕ್ಕೆ ರೂ.526.1  ಕೋಟಿ, 18 ವಿಮಾನಗಳು ಹಾರಲು ಯೋಗ್ಯ ಸ್ಥಿತಿಯಲ್ಲಿ ಬರುವುದು, 108 ವಿಮಾನಗಳು ಸಾರ್ವಜನಿಕ ವಲಯದ ಎಚ್.ಎ.ಎಲ್ ನಲ್ಲಿ ಫ್ರಾನ್ಸ್ ನಿಂದ ತಾಂತ್ರಿಕತೆಯ ಹಾಸ್ತಾಂತರ ಮುಖಾಂತರ ತಯಾರಾಗುವುದು ಎನ್ನಲಾಗಿತ್ತು. ಈ ಬೆಲೆಯಲ್ಲಿ 36 ವಿಮಾನಗಳ ಬೆಲೆ ರೂ.18940 ಕೋಟಿಯಾಗುತ್ತದೆ.
10ನೇ ಏಪ್ರಿಲ್ 2015 ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ಯಾರಿಸ್ನಲ್ಲಿ ಹಾರಾಟ ಯೋಗ್ಯ 36 ವಿಮಾನಗಳ ಖರೀದಿಯನ್ನು ಘೋಷಿಸಿದರು. ಡಸ್ಸೌಲ್ಟ್ ಏವಿಯೇಷನ್ ಆನುಯಲ್ ರಿಪೋರ್ಟ್ ಪ್ರಕಾರ ರೂ.1670.7 ಕೋಟಿ ಪ್ರತಿ ವಿಮಾನದ ಬೆಲೆ (ಅನುಬಂದ ಎ1) ಮತ್ತು ರಿಲಾಯನ್ಸ್ ಡಿಫೆನ್ಸ್ ಲಿಮಿಟೆಡ್ ಪತ್ರಿಕಾ ಹೇಳಿಕೆಯ ಪ್ರಕಾರ (ಅನುಬಂದ ಎ2). ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ರೂ 41,205 ಕೋಟಿ ಸಾರ್ವಜನಿಕರ ಹಣವನ್ನು ಹೆಚ್ಚುವರಿಯಾಗಿ ಕೊಡುತ್ತಿರುವುದೇಕೆ ಎಂದು ವಿವರಣೆ ಕೊಡುವರೆ?
2. ಖರೀದಿ ಬೆಲೆಯನ್ನು ಬಹಿರಂಗಗೊಳಿಸಲು ‘ಗೌಪ್ಯತೆ ಇಲ್ಲ’; ಸಂಸತ್ತಿನಲ್ಲಿ ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡ ಪ್ರಧಾನಿ
ಪ್ರಧಾನಮಂತ್ರಿ ಮತ್ತು ರಕ್ಷಣಾ ಮಂತ್ರಿಗಳು 36 ರಫೇಲ್ ವಿಮಾನಗಳ ಬೆಲೆ ಏರಿಕೆಯ ಕಾರಣವನ್ನು ಹೇಳಲು ಸಾಧ್ಯವಿಲ್ಲವೆಂದೂ ಭಾರತ ಮತ್ತು ಫ್ರಾನ್ಸ್ ನ ಒಪ್ಪಂದದ ಸೀಕ್ರೆಟ್ ಕ್ಲಾಸ್ ಕಾರಣವೆನ್ನುತ್ತಾರೆ, ಆದರೆ ಖರೀದೆ ಬೆಲೆ ಬಹಿರಂಗಗೊಳಿಸಬಾರದೆನ್ನುವ ಯಾವುದೇ ಕ್ಲಾಸ್ ಇಲ್ಲ (ಅನುಬಂದ ಎ3). ಬೆಲೆ ಡಸ್ಸೌಲ್ಟ್ ಏವಿಯೇಷನ್ ಮತ್ತು ರಿಲಾಯನ್ಸ್ ಡಿಫೆನ್ಸ್ ಲಿಮಿಟೆಡ್ (ಅನುಬಂದ ಎ1 ಮತ್ತು ಎ2) ಪ್ರಕಾರ ಬಹಿರಂಗಗೊಂಡಿದೆ. ಕಾಂಗ್ರೆಸ್ ಯುಪಿಎ ಸರ್ಕಾರದ ಸಮಯದಲ್ಲಿ ರಕ್ಷಣಾ ವಲಯದ ಒಪ್ಪಂದದ ಬೆಲೆಗಳನ್ನು ಸಂಸತ್ತಿನಲ್ಲೇ ಬಹಿರಂಗಗೊಳಿಸಲಾಗಿತ್ತು ಡಸ್ಸೌಲ್ಟ್ ಏವಿಯೇಷನ್ ತಯಾರಿಕೆಯ ಮಿರಾಜ್ ವಿಮಾನ, ಹಾಗೆಯೇ ಸುಖೋಯ್ ವಿಮಾನ ಮತ್ತು ಇನ್ನಿತರ ಖರೀದಿಗಳು. ಪ್ರಧಾನಮಂತ್ರಿ ಮತ್ತು ರಕ್ಷಣಾ ಮಂತ್ರಿಗಳು ಮುಚ್ಚಿಡುತ್ತಿರುವುದೇನು? ಖರೀದಿ ಬೆಲೆ ತಿಳಿಸಲು ತಿರಸ್ಕರಿಸುತ್ತಿರುವುದು ಹಗರಣದ ದುರ್ಗಂದವನ್ನು ಇದು ಸೂಸುತ್ತಿಲ್ಲವೇನು?
ಭಾರತದ ವಾಯು ಸೇನೆಗೆ ಅಗತ್ಯವಿದ್ದ 126 ಯುದ್ದ ವಿಮಾನಗಳ ಖರೀದಿಯನ್ನು 36 ವಿಮಾನಗಳಿಗೆ ಮೋದಿಯವರು ಇಳಿಸಿದ್ದೇಕೆ?
36 ರಫೇಲ್ ವಿಮಾನಗಳ ಪೈಕಿ ಮೊದಲನೆಯದು ಸೆಪ್ಟೆಂಬರ್ 2019 ರಲ್ಲೂ ಕೊನೆಯದು 2022 ರಲ್ಲೂ ಬರಲಿದೆ, ಅಂದರೆ ಖರೀದಿ ತೀರ್ಮಾನಿಸಿದ ಏಪ್ರಿಲ್ 2015 ರಿಂದ 8 ವರ್ಷಗಳ ಅಂತರ. ಚೀನಾ ಮತ್ತು ಪಾಕಿಸ್ತಾನಗಳಿಂದಿರುವ ಅಪಾಯ ಕಡೆಗಣಿಸಿ ರಾಷ್ಟ್ರೀಯ ಭದ್ರತೆಯಲ್ಲಿ ರಾಜಿಮಾಡಿಕೊಂಡ ಹಾಗೆ ಆಗುವುದಿಲ್ಲವೇ, ತುರ್ತು ಖರೀದಿಯ ವಾದದ ಸೋಲಾಗುವುದಿಲ್ಲವೇ?
3. ಸಿಸಿಎಸ್ ಕಡೆಗಣನೆ, ಡಿಫೆನ್ಸ್ ಪ್ರೊಕ್ಯೂರ್ ಮೆಂಟ್ ಪ್ರೊಸೀಜರ್ ಉಲ್ಲಂಘನೆ, ತಾಂತ್ರಿಕತೆ ಹಸ್ತಾಂತರದ ಶರಣಾಗತಿ
10ನೇ ಏಪ್ರಿಲ್ 2015 ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 36 ವಿಮಾನಗಳ ಖರೀದಿ ಘೋಷಿಸಿದಾಗ:
(1) ರಕ್ಷಣಾ ಸಂಪುಟ ಸಮಿತಿಯ ಕಡ್ಡಾಯ ಪೂರ್ವಅನುಮೋದನೆ ಪಡೆದಿರಲಿಲ್ಲ.
(2) ಕಡ್ಡಾಯವಾದ ಅಗತ್ಯವಿರುವ ಡಿಫೆನ್ಸ್ ಪ್ರೊಕ್ಯೂರ್ ಮೆಂಟ್ ಪ್ರೊಸೀಜರ್ ನ ಬೆಲೆ ನಿರ್ಧರಿಸುವ ಸಮಿತಿಗಳಾದ “ಒಪ್ಪಂದ ಸಮಾಲೋಚನ ಸಮಿತಿ (ಸಿಎನ್‍ಸಿ) ಮತ್ತು ಬೆಲೆ ಸಮಾಲೋಚನ ಸಮಿತಿ (ಪಿಎನ್‍ಸಿ) ಗಳನ್ನು ಪ್ರಧಾನಿಗಳು ಅನುಸರಿಸಿಲ್ಲ
(3) ಸಾರ್ವಜನಿಕ ವಲಯದ ಎಚ್.ಎ.ಎಲ್ ಗೆ ತಾಂತ್ರಿಕತೆಯ ಹಸ್ತಾಂತರದಿಂದ ರಫೇಲ್ ವಿಮಾನ ಭಾರತದಲ್ಲಿ ತಯಾರಾಗುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಬಲಿ ಕೊಟ್ಟಿದ್ದಾರೆ.
4. ರೂ.30,000 ಕೋಟಿಯ ಆಫ್‍ಸೆಟ್ ಗುತ್ತಿಗೆಯನ್ನು ಸಾರ್ವಜನಿಕ ವಲಯದ ಎಚ್.ಎ.ಎಲ್ ಕಿತ್ತುಕೊಳ್ಳಲಾಗಿದೆ.
ರೂ.30,000 ಕೋಟಿಯ ಆಫ್‍ಸೆಟ್ ಗುತ್ತಿಗೆಯನ್ನು ರಿಲಾಯನ್ಸ್ ಪಡೆಯಿತು ಮತ್ತು ರೂ.1,00,000 ಕೋಟಿಯ ಲೈಫ್ ಸೈಕಲ್ ಗುತ್ತಿಗೆಯನ್ನೂ ಪಡೆಯಿತು.
ಯುಪಿಎ ಕಾಂಗ್ರೆಸ್ ಸಕಾರದ ಅವಧಿಯಲ್ಲಿ ದಿನಾಂಕ 13.03.2014ರಲ್ಲಿ  ಸಾರ್ವಜನಿಕ ವಲಯದ ಎಚ್.ಎ.ಎಲ್ ಮತ್ತು ಡಸ್ಸೌಲ್ಟ್ ಏವಿಯೇಷನ್ ಕೆಲಸ ಹಂಚಿಕೆಯ  ರೂ.36,000 ಕೋಟಿಯ ಆಫ್‍ಸೆಟ್ ಗುತ್ತಿಗೆಯ ಒಪ್ಪಂದಕ್ಕೆ ಬಂದಿದ್ದವು.
ಏಕಪಕ್ಷೀಯವಾಗಿ 10ನೇ ಏಪ್ರಿಲ್ 2015 ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 36 ವಿಮಾನಗಳ ಖರೀದಿ ಘೋಷಿಸಿದಾಗ ಸಾರ್ವಜನಿಕ ವಲಯದ ಎಚ್.ಎ.ಎಲ್ ಕಡೆಗಣಿಸಲಾಯಿತು. ಆಪ್ತ ಬಂಡವಾಳಶಾಹಿ ಸ್ನೇಹಿತರಿಗೆ ಉತ್ತೇಜನನೀಡುವ ಅತಿ ದೊಡ್ಡ ನಿದರ್ಶನ, ರೂ.30,000 ಕೋಟಿಯ ಆಫ್‍ಸೆಟ್ ಗುತ್ತಿಗೆಯನ್ನು ಖಾಸಗಿ ಕಂಪನಿ ರಿಲಾಯನ್ಸ್ ಡಿಫೆನ್ಸ್ ಲಿಮಿಟೆಡ್ ಗೆ ನೀಡಲಾಯಿತು. {ಗಮನಿಸಿ: ಡಸ್ಸೌಲ್ಟ್ ಏವಿಯೇಷನ್ ಆನುಯಲ್ ರಿಪೋರ್ಟ್ (ಅನುಬಂದ ಎ1), ರಿಲಾಯನ್ಸ್ ಡಿಫೆನ್ಸ್ ಲಿಮಿಟೆಡ್ (ಅನುಬಂದ ಎ2) ಮತ್ತು ಆರ್ ಇನ್‍ರ್ಫಾದ ಹೂಡಿಕೆದಾರರ ನಿರೂಪಣೆ (ಅನುಬಂದ 5)}
ವಿಮಾನ ತಯಾರಿಕೆಯ ಯಾವುದೇ ಅನುಭವ ಇಲ್ಲದ ಖಾಸಗಿ ಕಂಪನಿಗೆ ರೂ.30,000 ಕೋಟಿಯ ಆಫ್‍ಸೆಟ್ ಗುತ್ತಿಗೆಯನ್ನು ನೀಡಲು ಮಾನ್ಯ ಮೋದಿಯವರು ಅನುವು ಮಾಡಿಕೊಟ್ಟಿರುವುದು ಏಕೆ? ವಿಮಾನಗಳ ತಯಾರಿಕೆಯಲ್ಲಿ ದಶಕಗಳ ಅನುಭವವಿರುವ ಎಚ್ ಎ ಎಲ್ ಅನ್ನು ಕಡೆಗಣಿಸಲು ಅನುವು ಮಾಡಿಕೊಟ್ಟಿರುವುದೇಕೆ?
ಆರ್ ಇನ್‍ರ್ಫಾ ಮತ್ತು ರಿಲಾಯನ್ಸ್ ಡಿಫೆನ್ಸ್ ಲಿಮಿಟೆಡ್ ರೂ.30,000 ಕೋಟಿಯ ಆಫ್‍ಸೆಟ್ ಗುತ್ತಿಗೆ ಜೊತೆಗೆ ರೂ.1,00,000 ಕೋಟಿಯ ಲೈಫ್ ಸೈಕಲ್ ಗುತ್ತಿಗೆಯನ್ನೂ ಪಡೆದಿರುವುದಾಗಿ ಹೇಳಿಕೊಂಡಿದೆ, ನ್‍ರ್ಫಾದ ಹೂಡಿಕೆದಾರರ ನಿರೂಪಣೆ (ಅನುಬಂದ 5).
ಸಾರ್ವಜನಿಕ ವಲಯದ ಎಚ್.ಎ.ಎಲ್ ಕಡೆಗಣಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ರೂ.1,30,000 ಕೋಟಿಯ ವ್ಯವಹಾರವನ್ನು ಖಾಸಗಿ ಕಂಪನಿಗೆ ದೊರಕುವಂತೆ ಮಾಡಿದ್ದೇಕೆ?
5. ಕಾವಲುಗಾರ ಪಾಲುದಾರ ಆಗಿರುವನೇ? ರೂ.1,30,000 ಕೋಟಿಯ ಗುತ್ತಿಗೆಯನ್ನು 12 ದಿನದ ಕಂಪನಿಗೆ ಕೊಡಲಾಗಿದ್ದು ಹೇಗೆ? ರಿಲಾಯನ್ಸ್ ಡಿಫೆನ್ಸ್ ಲಿಮಿಟೆಡ್ 28ನೇ ಮಾರ್ಚ್ 2015 ರಲ್ಲಿ ನಿಗಮಿತಗೊಳಿಸಲಾಗಿದೆ ಅಂದರೆ 10ನೇ ಏಪ್ರಿಲ್ 2015 ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 36 ವಿಮಾನಗಳ ಖರೀದಿ ಘೋಷಿಸುವ 12 ದಿನ ಮೊದಲು (ಅನುಬಂದ ಎ6). ಮತ್ತು ರೂ.1,00,000 ಕೋಟಿಯ ಲೈಫ್ ಸೈಕಲ್ ಗುತ್ತಿಗೆಯನ್ನೂ ಪಡೆದಿರುವುದಾಗಿ ಹೇಳಿಕೊಂಡಿದೆ (ಅನುಬಂದ 5).
ಅನುಮಾನಾಸ್ಪದವಾದ ಈ ವ್ಯವಹಾರ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಬಂಡವಾಳಶಾಹಿ ಸ್ನೇಹಿತರಿಗೆ ಉತ್ತೇಜನ ಕೊಡುವ ವಿಶಿಷ್ಟ ಪ್ರಕರಣವಾಗಿದೆ.
6. ರಕ್ಷಣಾ ಮಂತ್ರಿಗಳು ರೂ.30,000 ಕೋಟಿಯ ಆಫ್‍ಸೆಟ್ ಗುತ್ತಿಗೆ ಬಗ್ಗೆ ಸುಳ್ಳು ಹೇಳಿದ್ದೇಕೆ?
12ನೇ ಫೆಬ್ರವರಿ 2018 (ಅನುಬಂದ ಎ7) ರಕ್ಷಣಾ ಮಂತ್ರಿಗಳು ಪತ್ರಿಕಾ ಹೇಳಿಕೆ ಮೂಲಕ ‘ಆಫ್‍ಸೆಟ್ ಗುತ್ತಿಗೆಯನ್ನು ನೀಡಲಾಗಿಲ್ಲ” ಎಂದು ಹೇಳಿದ್ದರು. ಇದು ಸುಳ್ಳೆಂದು ರಿಲಾಯನ್ಸ್ ಡಿಫೆನ್ಸ್ ಲಿಮಿಟೆಡ್ (ಅನುಬಂದ ಎ2) ಮತ್ತು ಆರ್ ಇನ್‍ರ್ಫಾದ ಹೂಡಿಕೆದಾರರ ನಿರೂಪಣೆ (ಅನುಬಂದ 5) ನಿರೂಪಿಸುತ್ತವೆ.
ರಕ್ಷಣಾ ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ದೊಡ್ಡ ಸುಳ್ಳು ‘ಆಫ್‍ಸೆಟ್ ಗುತ್ತಿಗೆಯನ್ನು ನೀಡಲಾಗಿಲ್ಲ” ಎಂಬುದನ್ನು ಫ್ರಾನ್ಸ್‍ನ ರಕ್ಷಣಾ ಮಂತ್ರಿಯವರೇ ಬಯಲುಮಾಡಿದ್ದಾರೆ. 27ನೇ ಅಕ್ಟೋಬರ್ 2017 ರಂದು  ಫ್ರಾನ್ಸ್‍ನ ರಕ್ಷಣಾ ಮಂತ್ರಿಯವರು ರಕ್ಷಣಾ ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಅದೇ ದಿನ ಆಫ್‍ಸೆಟ್ ಗುತ್ತಿಗೆಯನ್ನು ಜಾರಿಗೊಳಿಸಲು ರಿಲಾಯನ್ಸ್ ಕಾರ್ಖಾನೆಗೆ ಶಂಕುಸ್ಥಾಪನೆಯನ್ನು ನಾಗಪುರದಲ್ಲಿ ಶ್ರೀ ನಿತಿನ್ ಗಡ್ಕರಿ, ಶ್ರೀ ದೇವೇಂದ್ರ ಫಡ್ನವೀಸ್, ಶ್ರೀ ಅನಿಲ್ ಅಂಬಾನಿ ( ಫ್ರಾನ್ಸ್ ಸರ್ಕಾರದ ಅಧಿಕೃತ ಹೇಳಿಕೆಯ ಪ್ರತಿ, ಅನುಬಂದ ಎ8).
 ಮೋದಿಯವರು ರೂ.30,000 ಕೋಟಿಯ ಆಫ್‍ಸೆಟ್ ಗುತ್ತಿಗೆ ನೀಡಲು ಯಾವುದನ್ನು ಮರೆಮಾಚುತ್ತಿದ್ದಾರೆ?
7. ಪ್ರಧಾನಮಂತ್ರಿ ಮತ್ತು ರಕ್ಷಣಾ ಮಂತ್ರಿಗಳು ಉದ್ದೇಶಪೂರ್ವಕವಾಗಿ 20% ಬೆಲೆ ರಿಯಾಯಿತಿ ಅವಕಾಶವನ್ನು ಕಡೆಗಣಿಸಿದ್ದಾರೆ, ಅತಿ ಕಡಿಮೆ ಬೆಲೆ ಅವಕಾಶದ ಹೊಸ ಬಿಡ್ಡಿಂಗ್ ಸಾಧ್ಯತೆಯನ್ನು ತಿರಸ್ಕರಿಸಿದ್ದಾರೆ.
ಮೂಲ ಟೆಂಡರ್ ಪ್ರಕ್ರಿಯೆ ಸಮಯದಲ್ಲಿ 2 ವಿಮಾನಗಳು ತಾಂತ್ರಿಕತೆಯಲ್ಲಿ ಸಮನಾಗಿದ್ದವು ರಫೇಲ್ ಮತ್ತು ಯೂರೊಫೈಟರ್ ಟೈಫೂನ್. ಫೈನಾನ್ಸಿಯಲ್ ಬಿಡ್‍ನಲ್ಲಿ ರಫೇಲ್ ಎಲ್1 ಆಯಿತು. ಯೂರೊಫೈಟರ್ ಟೈಫೂನ್ 4ನೇ ಜುಲೈ 2014 ಆಗಿನ ರಕ್ಷಣಾ ಸಚಿವರಿಗೆ ಪತ್ರ ಬರೆದು 20% ಕಡಿಮೆ ಬೆಲೆ ನೀಡುವ ಪ್ರಸ್ತಾವನೆ ಮಾಡಿತು (ಅನುಬಂದ ಎ9). ಹೊಸದಾಗಿ ಖರೀದಿ ಮಾಡಲು ತೀರ್ಮಾನಿಸಿದ ಪ್ರಧಾನಿಗಳು ಕಡಿಮೆ ಬೆಲೆಯ ಯಾವುದೇ ಅವಕಾಶಗಳನ್ನು ಪರಿಗಣಿಸದೇ, ಹೊಸದಾಗಿ ಬಿಡ್ ಮಾಡಲು ಕಂಪನಿಗಳನ್ನು ಆಹ್ವಾನಿಸದೇ ಅಂತರ ಸರ್ಕಾರಿ ಒಪ್ಪಂದಗಳ ಮೂಲಕ ಮಾಡಬಹುದಾದನ್ನು ಪರಿಗಣಿಸದೆ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದೇಕೆ?  ಪ್ರಧಾನಿಯವರೇಕೆ ದೇಶದ ಹಿತವನ್ನು ಬದಿಗೊತ್ತಿ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ?

Spread the love

Exit mobile version