ರಮಾನಾಥ ರೈ ಹೆಸರು ಕೆಡಿಸಲು ಬಿಜೆಪಿ ಮತ್ತು ಪಿ.ಎಫ್.ಐ. ಒಳ ಒಪ್ಪಂದ ಮಾಡಿಕೊಂಡಿವೆ – ವಿನಯ್ ರಾಜ್ ಆರೋಪ

Spread the love

ರಮಾನಾಥ ರೈ ಹೆಸರು ಕೆಡಿಸಲು ಬಿಜೆಪಿ ಮತ್ತು ಪಿ.ಎಫ್.ಐ. ಒಳ ಒಪ್ಪಂದ ಮಾಡಿಕೊಂಡಿವೆ – ವಿನಯ್ ರಾಜ್ ಆರೋಪ

ಮಂಗಳೂರು: ಕಾಂಗ್ರೆಸ್ ಒಂದು ಜಾತ್ಯಾತೀತ ನಿಲುವಿನ ಪಕ್ಷವಾಗಿದ್ದು ಪ್ರತಿಯೊಬ್ಬರು ಸಮಾನವಾಗಿ ಕಾಣುವುದು ಅದರ ಧರ್ಮ. ಅದರಂತೆ ಜಿಲ್ಲಾ ಉಸ್ತುವಾರಿ ಸಚಿವರೂ ಕೂಡ ಒರ್ವ ಜಾತ್ಯಾತೀತ ಮನೋಭಾವದ ವ್ಯಕ್ತಿಯಾಗಿದ್ದು, 6 ಬಾರಿ ಚುನಾವಣೆಯನ್ನು ಎದುರಿಸಿದ್ದು ಎಂದಿಗೂ ಕೂಡ ತಾರತಮ್ಯ ನಡೆಸಿಲ್ಲ ಆದರೆ ಬಿಜೆಪಿ ಪಕ್ಷವು ಪಿಎಫ್ ಐ ಒಳ ಒಪ್ಪಂದ ಮಾಡಿಕೊಂಡು ರೈ ಹೆಸರು ಹಾಳು ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಉಸ್ತುವಾರಿ ನ್ಯಾಯವಾದಿ ವಿನಯ್ ರಾಜ್ ಆರೋಪಿಸಿದರು.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ದೀಪಕ್ ರಾವ್ ಅವರ ಹತ್ಯೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಮಾನವ ಹತ್ಯೆಯನ್ನು ಯಾರೇ ಮಾಡಿದರೂ ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಕಾಂಗ್ರೆಸ್ ಪಕ್ಷ ಭಾರತದ ಸಂವಿಧಾನದ ತತ್ವ ಸಿದ್ದಾಂತದ ಅಡಿಯಲ್ಲಿ ಎಲ್ಲಾ ಜಾತಿ ಎಲ್ಲಾ ಧರ್ಮದವರಿಗೆ ಸಮಪಾಲು ಸಮಬಾಳು ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುವ ದೇಶದ ಏಕೈಕ ದೊಡ್ಡ ಜಾತ್ಯಾತೀತ ಪಕ್ಷವಾಗಿರುತ್ತದೆ.

ದಕ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕರಾಗಿರುವ ರಮಾನಾಥ ರೈ ಒಬ್ಬ ಜಾತ್ಯಾತೀತ ನಿಲುವಿನ ಎಲ್ಲಾ ವರ್ಗದವರನ್ನು ಸಮಾನವಾಗಿ ಪ್ರೀತಿಸುವ ಒಬ್ಬ ನಾಯಕರಾಗಿರುತ್ತಾರೆ. ಬಂಟ್ವಾಳ ತಾಲೂಕಿನಿಂದ ಸುಮಾರು ಏಳು ಬಾರಿ ಚುನಾವಣೆ ಸ್ಪರ್ಧಿಸಿದ್ದು, ಆರು ಬಾರಿ ಚುನಾಯಿತರಾಗಿ ಕರ್ನಾಟಕ ಸರಕಾದಲ್ಲಿ ಗೃಹಮಂತ್ರಿ, ಸಾರಿಗೆ ಸಚಿವರಾಗ, ಪ್ರಸ್ತುತ ಅರಣ್ಯ ಸಚಿವರಾಗಿ ತನ್ನ ಜವಾಬ್ದಾರಿಯನ್ನು ಅರಿತು ಅವರ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸಾಮಾಜಿಕ ಜೀವನದಲ್ಲಿರುವ ನಾಯಕರಾಗಿರುತ್ತಾರೆ. ಅವರ ನಾಯಕತ್ವದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠಗೊಂಡಿದ್ದು ಹೆಚ್ಚಿನ ಸಂಖ್ಯೆಯ ಶಾಸಕರುಗಳನ್ನು ವಿಧಾನಸಭೆಗೆ ಕಳುಹಿಸುವುದರಲ್ಲಿ ಅವರ ಪಾತ್ರ ಮುಖ್ಯವಾಗಿತ್ತು. ಇದನ್ನರಿತ ಬಿಜೆಪಿ ಮತ್ತು ಸಂಘ ಪರಿವಾರ ಸಂಘಟಿತರಾಗಿ ರೈ ಅವರ ವಿರುದ್ದ ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಒಳಸಂಚನ್ನು ರೂಪಿಸುತ್ತದೆ. ಇದರ ಭಾಗವಾಗಿ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರುಗಳು, ಪಿ ಎಫ್ ಐ ಸಂಘಟನೆ ಹಾಗೂ ಬಿಜೆಪಿ ಶಾಸಕರುಗಳು ಮತ್ತು ಸಂಸದರುಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದ್ವೇಶವನ್ನು ಬಿತ್ತಿ ಕೋಮು ಗಲಭೆಯನ್ನು ಎಬ್ಬಿಸಿ ಜಿಲ್ಲೆಯ ಶಾಮತಿಯನ್ನು ಕದಡಿ ಅವರ ಹೆಸರಿಗೆ ಕಳಂಕ ತರಲು ಅನೇಕ ಸಲ ವಿಫಲ ಯತ್ನವನ್ನು ಮಾಡುತ್ತಿದ್ದಾರೆ. ದಕ ಜಿಲ್ಲೆಯಲ್ಲಿ ನಡೆಯುವ ಯಾವುದೇ ಕೊಲೆ ಪ್ರಕರಣದಲ್ಲಿ ಮೃತಪಟ್ಟವರು ಹಿಂದೂ ಸಂಘಟನೆಯ ಕಾರ್ಯಕರ್ತರು ಎಂದು ಬಿಂಬಿಂಬಿಸಿ ಶವದ ಮೇಲೆ ಬಿಜೆಪಿ ಮತ್ತು ಸಂಘ ಪರಿವಾರ ರಾಜಕೀಯ ಮಾಡುತ್ತಿದ್ದರೆ, ಮುಸ್ಲಿಂ ಸಂಘಟನೆಯಾದ ಪಿಎಫ್ ಐ ಕೂಡ ಜಿಲ್ಲೆಯಲ್ಲಿ ನಡೆದ ಮುಸ್ಲಿಂ ಯುವಕರ ಹತ್ಯೆಗೆ ರೈ ಅವರು ಕಾರಣರು ಎಂದು ಆರೋಪ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕದಡುವ ಬಿಜೆಪಿ ಮತ್ತು ಈ ಸಂಘಟನೆಗಳು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಚಿವ ರಮಾನಾಥ್ ರೈ ಅವರು ವಿಫಲರಾಗಿದ್ದಾರೆ ಎಂದು ಆರೋಪ ಮಾಡುವುದು ಹಾಸ್ಯಾಸ್ಪದ. ಈ ಎರಡೂ ಧರ್ಮದ ಸಂಘಟನೆಗಳು ವಿನಾ ಕಾರಣ ರೈ ವಿರುದ್ದ ಅವರ ಚಾರಿತ್ಯಹರಣ ಮಾಡಲು ಹಗಲಿರುಳು ಶ್ರಮಿಸುತ್ತಿದೆ.

ಪಿಎಫ್ ಐ ಸಂಘಟನೆ ಕಳೆದ ಮೂರು ಚುನಾವಣೆಗಳಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ರೈ ವಿರುದ್ದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅವರನ್ನು ಸೋಲಿಸಲು ಪ್ರಯತ್ನ ಪಟ್ಟಿದ್ದಾರೆ. ಅದೇ ರೀತಿ ಮಂಗಳೂರು ಮತ್ತು ಮಂಗಳೂರು ವಿಧಾನಸಭಾ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕೂಡ ಪಿಎಫ್ ಐ ಸಂಘಟನೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ವಿರುದ್ದ ಕಣಕ್ಕಿಳಿಸಿ ಮುಸ್ಲಿಂರ ಮತಗಳನ್ನು ಹಾಳು ಮಾಡಲು ಪ್ರಯತ್ನ ಪಟ್ಟಿದೆ. ಈ ಸಂಘಟನೆಗೆ ಆರ್ಥಿಕ ಬೆಂಬಲವನ್ನು ನೀಡಿದವರು ಬಿಜೆಪಿ ಮತ್ತು ಸಂಘಪರಿವಾರದವರು ಎಂಬ ಆರೋಪ ಬಿಜೆಪಿ ಮತ್ತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಬಿಜೆಪಿ ಮತ್ತು ಪಿಎಫ್ ಐ ನಡುವೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಅಲ್ಪಸಂಖ್ಯಾತರ ಮತವನ್ನು ಪಿಎಫ್ ಐ ಹಾಳು ಮಾಡಿದ್ದಲ್ಲಿ ಬಿಜೆಪಿ ಅಭ್ಯರ್ಥಿಗಳು ಸುಲಭದಲ್ಲಿ ಗೆಲ್ಲುತ್ತಾರೆಂಬ ಆತ್ಮವಿಶ್ವಾಸದೊಂದಿ ಆರ್ಥಿಕ ಬೆಂಬಲವನ್ನು ಬಿಜೆಪಿ ನೀಡುವುದಾಗಿದೆ. ಬಿಜೆಪಿ ಪಕ್ಷವನ್ನು ನಂಬಿಕೊಂಡೆ ಪಿಎಫ್ ಐ ಅಭ್ಯರ್ಥಿಗಳನ್ನು ಕಾಂಗ್ರೆಸ್ ವಿರುದ್ದ ಇಳಿಸುವುದಾಗಿರುತ್ತದೆ. ಸಚಿವ ರೈ ಪಿಎಫ್ ಐ ಸಂಘಟನೆಯನ್ನಿ ಕಡಾಖಂಡಿತವಾಗಿ ಎದುರಿಸಿಕೊಂಡು ಬರುವವರಾಗಿದ್ದಾರೆ.

ರೈಗಳು ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಿ ಶಾಂತಿಯನ್ನು ಕದಡುವ ಹತ್ಯೆಗಳನ್ನು ಮಾಡುವ ಬಜರಂಗದಳ ಮತ್ತು ಪಿಎಫ್ ಐ ಸಂಘಟನೆಗಣ್ನು ಹಿಂದಿನಿಂದಲೂ ವಿರೋಧಿಸಿಕೊಂಡು ಬಂದಿದ್ದಾರೆ. ಬಿಜೆಪಿ ಮತ್ತು ಸಂಘಪರಿವಾರ ಪಿಎಫ್ ಐ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕೆಂದು ಆಗ್ರಹಿಸುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ. ಪಿಎಫ್ ಐ ಸಂಘಟನೆಯನ್ನು ರಾಜ್ಯದಲ್ಲಿ ನಿಷೇದಿಸಬೇಕೆಂದು ಹೇಳುವ ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ಪಲಾಯನಾ ಮಾಡುವ ಶೋಭಾ ಕರಂದ್ಲಾಜೆ ಮತ್ತು ನಳಿನ್ ಕುಮಾರ್ ಕಟೀಲ್ ಯಾಕೆ ಕೇಮದ್ರ ಸರಕಾರದ ಮೇಲೆ ಒತ್ತಡ ತರುತ್ತಿಲ್ಲ. ಪಿಎಫ್ ಐ ಸಂಘಟನೆ ದೇಶದಾದ್ಯಂತ ಇರುವ ಸಂಘಟನೆಯಾಗಿದ್ದು ದೇಶದ ಆಂತರಿಕ ಭದ್ರತೆಗೆ ಪಿಎಫ್ ಐ ಸಂಘಟನೆ ಕಂಟಕವಾಗಿದ್ದಲ್ಲಿ ಕೆಂದ್ರ ಸರ್ಕಾರ ಈ ಸಂಘಟನೆಯನ್ನು ನಿಷೇಧ ಮಾಡಲೇ ಬೇಕಾಗಿರುತ್ತದೆ. ಈಗಾಗಲೇ ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ್, ಕಾಶ್ಮೀರ ಮುಂತಾದ ರಾಝ್ಯದಲ್ಲಿ ಈ ಸಂಘಟನೆಗಳು ಸಕ್ರೀಯವಾಗಿದ್ದು ಅಲ್ಲಿ ಬಿಜೆಪಿ ಪಕ್ಷದ ಆಡಳಿತದ ಸರಕಾರ ಇರುತ್ತದೆ. ಅಲ್ಲಿ ಯಾಕೆ ಅವರು ನಿಷೇಧ ಮಾಡಿಲ್ಲ ಅಥವಾ ಕೇಂದ್ರ ಸರಕಾರ ಯಾಕೆ ಈ ಸಂಘಟನೆಯ ಕಾರ್ಯ ಚಟುವಟಿಕೆಯ ಬಗ್ಗೆ ಕಣ್ಣುಮುಚ್ಚಿಕೊಂಡಿರುತ್ತದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ. ಇದರಿಂದ ಬಿಜೆಪಿ ಮತ್ತು ಸಂಘಪರಿವಾರದ ಒಳಸಂಚು ಜನರಿಗೆ ಅರ್ಥವಾಗಿದೆ.

ಚುನಾವಣೆ ಹತ್ತಿರ ಬಂದಾಗ ಜಿಲ್ಲೆಯಲ್ಲಿ ಬಿಜೆಪಿ ಸಂಘ ಪರಿವಾರ ಮತ್ತು ಪಿಎಫ್ ಐ ಒಳಸಂಚನ್ನು ರೂಪಿಸಿ ಜಿಲ್ಲೆಯಲ್ಲಿ ಕೋಮುಗಲಭೆಯನ್ನು ಸೃಷ್ಟಿಸಿ ಕಾಂಗ್ರೆಸ್ ಪಕ್ಷದಿಂದ ಹಿಂದೂಗಳನ್ನು ಹಾಗೂ ಮುಸ್ಲಿಂ ಸಮುದಾಯವನ್ನು ದೂರು ಇಡುವಂತಹ ಒಳಸಂಚಿನ ಕೆಲಸವನ್ನು ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಹಿಂದುಗಳನ್ನು ಅಲ್ಪಸಖ್ಯಾತರನ್ನು ಸಮಾನವಾಗಿ ಪ್ರೀತಿಸುವ ಪಕ್ಷವಾಗಿದೆ ಆದರೆ ಈ ಎರಡೂ ಧರ್ಮಗಳ ಕೋಮುವಾದಿಗಳಿಂದ ಕಾಂಗ್ರೆಸ್ ಮತ್ತು ರಮಾನಾಥ ರೈ ಅವರು ಸಮಾನ ಅಂತರವನ್ನು ಕಾಯ್ದುಕೊಂಡು ಬಂದಿದ್ದಾರೆ. ದೇಶದ ಯಾವುದೇ ಒಂದು ಉಗ್ರವಾದದ ಪ್ರಕರಣಗಳಲ್ಲಿ ಅಥವಾ ಕೊಲೆ ಪ್ರಕರಣಗಳಲ್ಲಿ ಕಾಂಗ್ರೆಸ್ ಪಕ್ಷದ ಕೈವಾಡವಿಲ್ಲ ಎಂದರು.


Spread the love