ರಸ್ತೆಯಲ್ಲಿ ಅನಾಥವಾಗಿ ಬಿದ್ದ ವ್ಯಕ್ತಿಯನ್ನು ಉಪಚರಿಸಿ ಮಾನವೀಯತೆ ಮೆರೆದ ಉಳ್ಳಾಲ ಪೊಲೀಸ್ ಸಿಬಂದಿ
ಮಂಗಳೂರು: ರಸ್ತೆಯಲ್ಲಿ ಅನಾಥವಾಗಿ ಬಿದ್ದ ವ್ಯಕ್ತಿಯೋರ್ವರನ್ನು ಉಳ್ಳಾಲ ಪೊಲೀಸ್ ಸಿಬಂದಿ ಉಪಚರಿಸಿ ಆಸ್ಪತ್ರೆಗೆ ಸೇರಿಸಿದ ಘಟನೆ ಭಾನುವಾರ ಕೋಟೆಕಾರ್ ಬಳಿ ಸಂಭವಿಸಿದೆ.
ಉಳ್ಳಾಲ ಪೊಲೀಸ್ ಸಿಬಂದಿ ರಂಜಿತ್
ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬೀರಿ ಜಂಕ್ಷನ್ ಪರಿಸರದಲ್ಲಿ ಗದಗ ಮೂಲದ ವ್ಯಕ್ತಿಯೊಬ್ಬರು ದಾರಿ ಬದಿಯಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಯಿಂದ ಆದಿತ್ಯವಾರ ಬೆಳಿಗ್ಗೆವರೆಗೆ ಅನಾಥವಾಗಿ ಬಿದ್ದುಕೊಂಡಿದ್ದರು.
ಆದಿತ್ಯವಾರ ಬೆಳಿಗ್ಗೆ ದಾರಿ ಬದಿಯಲ್ಲಿ ನಡುಗುತ್ತಾ ಬಿದ್ದುಕೊಂಡಿದ್ದ ವ್ಯಕ್ತಿಯನ್ನು ಕೊರೋನಾ ಕಾರಣದಿಂದ ಹತ್ತಿರ ಯಾರೂ ಸುಳಿದಿರಲಿಲ್ಲ.
ಇದನ್ನು ಗಮನಿಸಿದ ಉಳ್ಳಾಲ ಪೊಲೀಸ್ ಠಾಣಾ ಸಿಬ್ಬಂದಿ ರಂಜಿತ್ ಮತ್ತು ಬೈಕ್ ಆಂಬುಲೆನ್ಸ್ ಸವಾರ ಮಹಂತೇಶ್ ನೀರು ಕುಡಿಸಿ, ಪ್ರಥಮ ಚಿಕಿತ್ಸೆ ಒದಗಿಸಿ ವ್ಯಕ್ತಿಯನ್ನು ಉಪಚರಿಸಿದರು. ಬಳಿಕ ಆಂಬ್ಯುಲೆನ್ಸ್ ಮೂಲಕ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತು.