ರಸ್ತೆ ಬದಿಯಲ್ಲಿ ಕೋಳಿ ತ್ಯಾಜ್ಯ ಎಸೆದ ಐವರ ಬಂಧನ
ಮಂಗಳೂರು: ಕೋಳಿ ತ್ಯಾಜ್ಯವನ್ನು ರಸ್ತೆಯ ಬದಿಯಲ್ಲಿ ಎಸೆದ ಆರೋಪಿಗಳನ್ನು ವಿಟ್ಲ ಪೋಲಿಸರು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತರನ್ನು ಪುತ್ತೂರು ನಿವಾಸಿ ಮಹಮ್ಮದ್ ರಫೀಕ್ (30), ಕೋಯಿಕೋಡ್ ನಿವಾಸಿ ಅಹಮ್ಮದ್ ಗಜನಿ (34), ಸೌಫಿ (30), ಮಸೂದ್ (25), ಮಹಮ್ಮದ್ ಜಿಯಾವುಲ್ ಅನ್ಸಾರಿ (20) ಎಂದು ಗುರುತಿಸಲಾಗಿದೆ.
ಜುಲೈ 12 ರಂದು ಅಳಿಕೆ ಗ್ರಾಮ ಪಂಚಾಯತ್ ಪಿಡಿಒ ಜಿನ್ನಪ್ಪ ಗೌಡ ಠಾಣೆಗೆ ಹಾಜರಾಗಿ ಜುಲೈ 9ರಂದು ರಾತ್ರಿ ಸಮಯದಲ್ಲಿ ಒಂದು ಲಾರಿಯಷ್ಟು ಕೋಳಿ ತ್ಯಾಜ್ಯವನ್ನು ಅಳಿಕೆ ಗ್ರಾಮ ಪಂಚಾಯತ್ ನ ನೆಗಳಗುಳಿ ರಸ್ತೆಯ ಬದಿಯಲ್ಲಿ ಯಾರೋ ದುಷ್ಕರ್ಮಿಗಳು ಎಸೆದಿದ್ದು ಈ ಕುರಿತು ದೂರು ದಾಖಲಿಸಿದ್ದರು.
ಜುಲೈ 12 ರಂದು ಬಂದ ಮಾಹಿತಿಯಂತೆ ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರ ಪ್ರಭಾರ ಕರ್ತವ್ಯದಲ್ಲಿದ್ದ ಎಎಸ್ಐ ಧನಂಜಯ ಹಾಗೂ ಪಿಸಿ 1040 ರಮೇಶ್ ರವರು ಸಾರಡ್ಕ ಚೆಕ್ ಪಾಯಿಂಟ್ ನಲ್ಲಿ ವಾಹನ ತಪಾಸಣೆ ಮಾಡುತ್ತಿರುವ ಸಮಯ ವಿಟ್ಲ ಕಡೆಯಿಂದ ಕೆರಳ ಕಡೆಗೆ ಬರುತ್ತಿರುವ ಕೆಎಲ್ 65 ಜೆ 3561 ನೇ ಗೂಡ್ಸ್ ಟೇಂಪೋ ಮತ್ತು ಕೋಳಿಯ ತ್ಯಾಜ್ಯ ಇದ್ದು ಹಾಗೂ ಕೆಎ 21 ಎಮ್ 5646 ನೇ ಕಾರನ್ನು ಸ್ವಾಧೀನ ಪಡಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.