ರಾಜಕೀಯ ಲಾಭಕ್ಕಾಗಿ ದೇಶದಲ್ಲಿ ಮುಸ್ಲಿಂ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ : ಯಾಸಿನ್ ಮಲ್ಪೆ

Spread the love

ರಾಜಕೀಯ ಲಾಭಕ್ಕಾಗಿ ದೇಶದಲ್ಲಿ ಮುಸ್ಲಿಂ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ : ಯಾಸಿನ್ ಮಲ್ಪೆ

ಉಡುಪಿ: ಸ್ವಾತಂತ್ರ ಹೋರಾಟದಲ್ಲಿ ಸರ್ವಸ್ವವನ್ನು ತ್ಯಾಗ ಮಾಡಿದ ಮುಸ್ಲಿಮರ  ಬಳಿ  ರಕ್ತ ಮೆತ್ತಿದ್ದ ಕೈಗಳು ದೇಶ ಪ್ರೇಮದ ಪ್ರಮಾಣಪತ್ರವನ್ನು ಕೇಳುತ್ತಿದ್ದಾರೆ ದೇಶದ ಅಭಿವೃದ್ಧಿಯಲ್ಲಿ ಇಸ್ಲಾಂ ಹಾಗೂ ಮುಸ್ಲಿಮ್‌ರ ಪ್ರಮುಖ ಪಾತ್ರವಹಿಸಿದರೂ, ರಾಜಕೀಯ ಲಾಭಕ್ಕಾಗಿ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ’ ಉಡುಪಿ ಜಿಲ್ಲಾ ಮುಸ್ಲಿಮ್‌ ಒಕ್ಕೂಟದ ಅಧ್ಯಕ್ಷ ಮಹಮ್ಮದ್‌ ಯಾಸೀನ್‌ ಮಲ್ಪೆ  ಹೇಳಿದರು.

ಅವರು ಭಾನುವಾರ ಉಡುಪಿ ಬೀಡಿನಗುಡ್ಡೆಯ ಮಹಾತ್ಮಗಾಂಧಿ ಬಯಲು ರಂಗ ಮಂಟಪದಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದಿಂದ ಆಯೋಜಿಸಿದ ಏಕತಾ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು.

ಭಾರತ ದೇಶ ಕೇವಲ ಒಂದು ಸಮುದಾಯದ ದೇಶವಲ್ಲ. ಈ ದೇಶಕ್ಕಾಗಿ  ಅನೇಕರು ಪ್ರಾಣವನ್ನು  ತ್ಯಾಗ ಮಾಡಿದ್ದಾರೆ.  ಆದರೆ  ಇಂದು ದೇಶದ ಸ್ವಾತಂತ್ರ ಹೋರಾಟದಲ್ಲಿ ಯಾವುದೇ ಪಾತ್ರ ವಹಿಸದವರು ದೇಶದ ಆಡಳಿತ ನಡೆಸುತ್ತಿದ್ದಾರೆ.

ರಾಜಕೀಯ ವ್ಯಕ್ತಿಗಳು ದೇಶ ರಚಾನತ್ಮಕ ನಿರ್ಮಾಣಕ್ಕಾಗಿ ಭಾವನೆಗಳನ್ನು ಕೆರಳಿಸುವುದು, ಉದ್ರೇಕಕಾರಿ ಭಾಷಣ ಮಾಡುವುದು ಬಿಟ್ಟರೆ ಯಾವುದೇ ಯೋಚನೆಗಳು ಅವರ ಬಳಿ ಇಲ್ಲ.  ಜಾತಿ ಧರ್ಮದ ಹೆಸರಿನಲ್ಲಿ  ಸಮುದಾಯಗಳನ್ನು ವಿಭಜಿಸಿ ಪರಸ್ಪರ ಧ್ವೇಷ ಹಿಂಸೆಯ ಬುನಾದಿಯ ಮೇಲೆ ದೇಶವನ್ನು ಕಟ್ಟು ತ್ತಿದ್ದಾರೆ ಎಂದು ಆರೋಪಿಸಿದರು.

ಸಮಾಜದಲ್ಲಿ ಸಮುದಾಯದ ಅಭಿವೃದ್ಧಿಗೆ  ಶ್ರಮಿಸುತ್ತಿರುವ ಮುಸ್ಲಿಮ್‌ ಸಂಘಟನೆಗಳಿಗೆ ಲವ್‌ ಜಿಹಾದ್‌, ಮತಂತಾರ ಹಾಗೂ ಭಯೋತ್ಪಾದನೆ  ಹೆಸರಿನಲ್ಲಿ  ಸದೆ ಬಡಿಯಾಗುತ್ತಿದೆ ನಡೆಸಲಾಗುತ್ತಿದೆ. ಇಗಾಗಲೇ ಸಂಘಟನೆಯನ್ನು ನಿಷೇಧಿಸುವ ಹುನ್ನಾರ ನಡೆಯುತ್ತಿದೆ.  ಇವರ ನೀತಿಯಿಂದಾಗಿ ದೇಶದ ಅಲ್ಪಸಂಖ್ಯಾತರು, ದಲಿತರು, ಬಡವರು, ಕಾರ್ಮಿಕರು, ರೈತರು, ಸಣ್ಣ ವ್ಯಾಪಾರಿಗಳು, ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆ ಸಂಕಷ್ಟದಲ್ಲಿ ದೊಡ್ಡ ಪಾಲು ಮುಸ್ಲಿಮರಿಗೆ ಸಿಕ್ಕಿದೆ ಎಂದು ಹೇಳಿದರು.

ಬಡವರ ಶ್ರಮದ ಹಣವನ್ನು ವಿವಿಧ ನೆಪದಲ್ಲಿ ಕಸಿದುಕೊಂಡು ಬಂಡವಾಳ ಶಾಹಿಗಳಿಗೆ ಬೊಕ್ಕಸಗಳಿಗೆ ತುಂಬಿಸುವ ಮೂಲಕ ದೇಶವನ್ನು ಆರ್ಥಿಕ ದಿವಾಳಿ ತನದತ್ತ ಕೊಂಡೊಯ್ಯಲಾಗುತ್ತದೆ. ಈ ದೇಶವನ್ನು ದುಸ್ಥಿತಿಯಿಂದ ರಕ್ಷಿಸಿ ಕಲ್ಯಾಣ ರಾಷ್ಟ್ರ ಮಾಡಲು ನಾವು ಅಬೂಬಕ್ಕರ್ ಉಮರ್‌ಗಳಾಗಿ ಬೇಕಾಗಿದೆ ಎಂದು ಕರೆ ನೀಡಿದರು.

ದುರ್ಬಲ ಹಾಗೂ ತನ್ನ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿರುವ ಒಂದು ಸಮುದಾಯದಿಂದ ದೇಶದ ನಿರ್ಮಾಣದ ಕೆಲಸ ಸಾಧ್ಯವಿಲ್ಲ. ಆದುದರಿಂದ ನಾವು ನಮ್ಮನ್ನು ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲೀಕರಿಸುವ ಅಗತ್ಯ ಇದೆ. ಜನರಲ್ಲಿ ಸಮುದಾಯದ ಮೇಲಿರುವ ದೇಷ ಭಾವನೆಯನ್ನು ಕಿತ್ತು, ಪ್ರೀತಿ ಭಾವನೆಯನ್ನು ಬೆಳೆಸುವ ಮೂಲಕ ನಾವೆಲ್ಲ ಒಂದೇ ಎನ್ನು ತತ್ವವನ್ನು ಜಗತ್ತಿಗೆ ಸಾರ ಬೇಕಾಗಿದೆ ಎಂದರು.

ರಾಜ್ಯ ಅಲ್ಪಸಂಖ್ಯಾ ನಿಗಮದ ಅಧ್ಯಕ್ಷ ಎಂ.ಎ. ಗಫೂರ್‌, ಇತ್ತಿಹಾದೆ ಮಿಲ್ಲತ್ ಕೌನ್ಸಿಲ್‌ ಅಧ್ಯಕ್ಷ ಮೌಲಾನಾ ತೌಖೀರ್ ರಝಾ ಖಾನ್,  ಮಂಗಳೂರು  ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್,ಚಿಶ್ತಿ ದರ್ಗಾ ದಿವಾನ ಹಝ್ರತ್ ಸೈಯದ್ ಝೈನಲ್ ಅಬದೀನ್, ತಬ್ಲೀಗ್ ಜಮಾತ್್ ಮುಖ್ಯಸ್ಥ ಮೌಲಾನಾ ಸಜ್ಜಾದ್ ನೋಮಾನಿ, ಜಮಾತೆ ಇಸ್ಲಾಮಿಕ್ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಸೈಯದ್ ಸಾದತುಲ್ಲಾ ಹುಸೈನಿ, ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ, ಮಂಗಳೂರು ಮಾಜಿ ಮೇಯರ್ ಕೆ.ಕೆ. ಶಾಹುಲ್ ಹಮಿದ್ , ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ  ಉಪಾಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಧ್ಯಕ್ಷ ನಿಸಾರ್ ಅಹ್ಮದ್, ಮುಸ್ಲಿಮ್  ರಾಜಕೀಯ ವೇದಿಕೆ ಸಂಚಾಲಕ ಹಬೀಬ್ ಆಲಿ ಉಪಸ್ಥಿತರಿದ್ದರು.


Spread the love