Home Mangalorean News Kannada News ರಾಜಸ್ಥಾನದಲ್ಲಿ ಅಪಹರಣಕ್ಕೋಳಗಾದ ಮಂಗಳೂರು ಯುವಕನನ್ನು ರಕ್ಷಿಸಿದ ಪೋಲಿಸರು

ರಾಜಸ್ಥಾನದಲ್ಲಿ ಅಪಹರಣಕ್ಕೋಳಗಾದ ಮಂಗಳೂರು ಯುವಕನನ್ನು ರಕ್ಷಿಸಿದ ಪೋಲಿಸರು

Spread the love

ರಾಜಸ್ಥಾನದಲ್ಲಿ ಅಪಹರಣಕ್ಕೋಳಗಾದ ಮಂಗಳೂರು ಯುವಕನನ್ನು ರಕ್ಷಿಸಿದ ಪೋಲಿಸರು

ಮಂಗಳೂರು: ದುಷ್ಕರ್ಮಿಗಳಿಂದ ಅಪಹರಣಕ್ಕೆ ಒಳಗಾದ ಮಂಗಳೂರಿನ ಯುವಕನನ್ನು ರಾಜಸ್ಥಾನದ ಭರತ್ ಪುರದಿಂದ ರಕ್ಷಿಸುವಲ್ಲಿ ಮಂಗಳೂರು ಪೋಲಿಸರು ಯಶಸ್ವಿಯಾಗಿದ್ದಾರೆ ಎಂದು ನಗರ ಪೋಲಿಸ್ ಆಯುಕ್ತ ಚಂದ್ರಶೇಖರ್ ಹೇಳಿದರು.

ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜಸ್ಥಾನದ ಭರತ್ ಪುರದಲ್ಲಿ ಕಡಿಮೆ ಹಣಕ್ಕೆ 4 ಜನರೇಟರ್ ಇದೆ ಎಂದು ಮಂಗಳೂರಿನ ಅರುಣ್ ಡಿಸೋಜಾರಿಗೆ ಅಪರಿಚಿತ ವ್ಯಕ್ತಿಯೊಬ್ಬರಿಂದ ಕರೆ ಬಂದಿತ್ತು. ಇದನ್ನು ನಂಬಿದ ಅರುಣ್ ಜುಲೈ 28 ರಂದು ರಿಚ್ಚರ್ಡ್ ಮೇರಿಯನ್ ಎಂಬವರಿಗೆ ಹಣ ನೀಡದೆ ಜನರೇಟರನ್ನು ನೋಡಿ ಬರುವಂತೆ ರಾಜಸ್ಥಾನಕ್ಕೆ ಕಳುಹಿಸಿದ್ದರು. ಜುಲೈ 30 ರಂದು ರಾಜಸ್ಥಾನ ತಲುಪಿದ ರಿಚ್ಚರ್ಡ್ ಅವರನ್ನು ವ್ಯಕ್ತಿಯೊಬ್ಬ ಜನರೇಟರ್ ಕೊಡುವುದಾಗಿ ಹೇಳಿ ಭರತ್ ಪುರದಿಂದ ವಾಹನದಲ್ಲಿ ಕರೆದುಕೊಂಡು ಹೋಗಿ ಅರುಣ್ ಅವಿಗೆ ಫೋನ್ ಮಾಡಿ ಅಪರಿಚಿತ ವ್ಯಕ್ತಿ ಮತ್ತು ಆತನ ತಂಡ ರಿಚರ್ಡ್ ಅವರನ್ನು ಜೀವಂತ ಬಿಡಬೇಕಾದರೆ 10 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿತ್ತು.

most-wanted-mangalore-20160803-01

ಈ ಬಗ್ಗೆ ಅರುಣ್ ಅವರು ಪೋಲಿಸ್ ಆಯುಕ್ತ ಚಂದ್ರಶೇಕರ್ ಅವರನ್ನು ಭೇಟಿಯಾಗಿ ಅಪಹರಣದ ಬಗ್ಗೆ ಮಾಹಿತಿ ನೀಡಿದ್ದು ಅದರಂತೆ ಆಯುಕ್ತರು ಮಂಗಳೂರು ನಗರ ಡಿಸಿಪಿ ಕಾನೂನು ಸುವ್ಯವಸ್ಥೆ ಃಆಗೂ ಡಿಸಿಪಿ ಅಪರಾಧ ಅವರಿಗೆ ತಕ್ಷಣ ಕಾರ್ಯಪ್ರವೃತ್ತರಾಗುವಂತೆ ನೀರ್ದೇಶನ ನೀಡಿ ಪ್ರಕರಣ ದಾಖಲಿಸಿ ತಂಡವನ್ನು ರಾಜಸ್ಥಾನಕ್ಕೆ ಕಳುಹಿಸಿಕೊಡುವಂತೆ ಸೂಚಿಸಿದರು. ಈ ಬಗ್ಗೆ ರಾಜಸ್ಥಾನದ ಐಜಿಪಿ ಆಲೋಕ್ ವಶಿಷ್ಟ ಹಾಗೂ ಎಸ್ಪಿ ಕೈಲಾಶ್ ಅವರಿಂದ ಸಹಾಯ ಕೋರಿ, ಉಳ್ಳಾಲ ಠಾಣಾ ಎಎಸ್ಐ ವಿಜಯರಾಜ್, ಕಂಕನಾಡಿ ಠಾಣಾ ಹೆಡ್ ಕಾನ್ಸ್ ಟೇಬಲ್ ಮೋಹನ್ ಎಲ್, ಪ್ರಕಾಶ್ ಪಿಂಟೊ ಹಾಗೂ ಪವನ್ ರಾಜ್ ಜೊತೆ ಭರತ್ ಪುರಕ್ಕೆ ತೆರಳಿ ಅಲ್ಲಿಂದ ಡಿಗ್ ಪ್ರಾಂತ್ಯದ ಪೋಲಿಸರ ಸಹಾಯದೊಂದಿಗೆ ರಿಚ್ಚರ್ಡ್ ಇರುವಿಕೆಯ ಮಾಹಿತಿಯನ್ನು ಕಲೆ ಹಾಕಲಾಯಿತು. ಅಲ್ಲಿನ ಪೋಲಿಸರ ಸಹಾಯದೊಂದಿಗೆ ಕೊನೆಗೂ ರಿಚ್ಚರ್ಡ್ ಅವರನ್ನು ರಕ್ಷಿಸುವಲ್ಲಿ ಪೋಲಿಸರು ಯಶಸ್ವಿಯಾದರು.

ರಕ್ಷಣೆಗೆ ಒಳಗಾದ ರಿಚ್ಚರ್ಡ್ ಮತ್ತು ಮಂಗಳೂರು ಪೋಲಿಸರು ಭರತ್ ಪುರದಲ್ಲಿ ಮೊಕ್ಕಾಂ ಹೂಡಿದ್ದು ಆರೋಪಿಗಳ ಬಗ್ಗೆ ಮಾಹಿತಿ ಲಭಿಸಿದ್ದು ಶೀಘ್ರದಲ್ಲಿ ಬಂಧಿಸಲಾಗುವುದು ಎಂದರು.


Spread the love

Exit mobile version