Home Mangalorean News Kannada News ರಾಜೀವ್‍ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಆರ್ಟಿಸ್ಟ್ ಸಹಯೋಗ-   ಆರೋಗ್ಯ ಸೇವಾಕಾರ್ಯಕರ್ತರಿಗೆ ತರಬೇತಿ

ರಾಜೀವ್‍ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಆರ್ಟಿಸ್ಟ್ ಸಹಯೋಗ-   ಆರೋಗ್ಯ ಸೇವಾಕಾರ್ಯಕರ್ತರಿಗೆ ತರಬೇತಿ

Spread the love

ರಾಜೀವ್‍ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಆರ್ಟಿಸ್ಟ್ ಸಹಯೋಗ-   ಆರೋಗ್ಯ ಸೇವಾಕಾರ್ಯಕರ್ತರಿಗೆ ತರಬೇತಿ

ಮಂಗಳೂರು: ಅತ್ಯಂತ ಪ್ರಮುಖ ಆರೋಗ್ಯದ ಕಂಟಕವಾಗಿ ಹರಡುತ್ತಿರುವ ಕೋವಿಡ್-19 ಹಿನ್ನೆಲೆಯಲ್ಲಿ ರಾಜೀವ್‍ಗಾಂದಿ üಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಬೆಂಗಳೂರಿನ ಆರ್ಟಿಸ್ಟ್(ಏಷ್ಯನ್‍ರೀಸರ್ಚ್‍ಅಂಡ್‍ಟ್ರೈನಿಂಗ್‍ಇನ್ಸ್‍ಟಿಟ್ಯೂಟ್ ಫಾರ್ ಸ್ಕಿಲ್ ಟ್ರಾನ್ಸ್‍ಫರ್-ಂಖಖಿISಖಿ)ನೊಂದಿಗೆ ಕರ್ನಾಟಕದಾದ್ಯಂತ ತಾಯಿ ಮತ್ತು ಮಗುವಿನ ಆರೋಗ್ಯಸೇವೆಯಲ್ಲಿ ತೊಡಗಿರುವ ಸೇವಾ ಕಾರ್ಯಕರ್ತರಿಗೆ, ಸ್ತ್ರೀರೋಗ ಮತ್ತು ಪ್ರಸೂತಿತಜ್ಞರು, ಶುಶ್ರೂಷಕ ಸಿಬ್ಬಂದಿ ಮತ್ತು ಸಹಾಯಕ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮವನ್ನು ಸಂಘಟಿಸುತ್ತಿದೆ.

ಈ ತರಬೇತಿ ಕಾರ್ಯಕ್ರಮವನ್ನು ವಿಡಿಯೋ ಪ್ರಾತ್ಯಕ್ಷಿಕೆ ಮೂಲಕ ರಾಜ್ಯದಲಿ ್ಲ ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ಸಂಸ್ಥೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಇದು ಸರ್ಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸಂಬಂಧಿಸಿದಂತೆ ಎಲ್ಲ ಆಯಾಮಗಳನ್ನೂ ಒಳಗೊಂಡಿದ್ದು ಅದರಲ್ಲಿ ರೋಗಿಗಳ ಪರೀಕ್ಷೆ ಮತ್ತು ಪ್ರವೇಶದ್ವಾರದಲ್ಲಿ ಭೇಟಿ ನೀಡುವವರ ವಿವರ, ರೋಗದ ಮುನ್ಸೂಚನೆ,ರೋಗಿಗಳನ್ನು ಪ್ರತ್ಯೇಕವಾಗಿ ಸಂಘಟಿಸುವುದು, ಸ್ವಚ್ಛತೆಯ ನಿಯಮಗಳು, ಪಿಪಿಇ ಕಿಟ ಬಳಸುವ ರೀತಿ, ಪ್ರಸೂತಿ ಗೃಹಮತ್ತುಶಸ್ತ್ರಚಿಕಿತ್ಸಾಕೊಠಡಿಯ ನಿರ್ವಹಣೆಯ ಮಾನದಂಡಗಳು, ವಿಭಾಗಗಳ ನಿರ್ವಹಣೆ, ಬಿಡುಗಡೆ ಮತ್ತು ಫಾಲೋ-ಅಪ್ ಸಾರಾಂಶ, ಭೇಟಿಯಅವಧಿ ಮತ್ತುದೂರ ಸಂವಹನಗಳನ್ನು ವಿಡಿಯೋ ಪ್ರಾತ್ಯಕ್ಷಿಕೆ ಮೂಲಕ ಒದಗಿಸಲಾಗುತ್ತದೆ.

ಈ ಕುರಿತು ರಾಜೀವ್‍ಗಾಂದಿ üಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಸಚ್ಚಿದಾನಂದ ರವರು ,”ಎಲ್ಲ ಆಸ್ಪತ್ರೆಗಳೂ ಕೋವಿಡ್-19 ಪ್ರೊಟೊಕಾಲ್ ಆಧರಿತ ಶಿಫಾರಸು ಮಾಡಲಾದ ಮಾನದಂಡಗಳನ್ನು ಅನುಸರಿಸಬೇಕು ಮತ್ತು ಈ ಕಾರ್ಯಕ್ರಮವು ರಾಜ್ಯದಾದ್ಯಂತ ಆರೋಗ್ಯಸೇವಾಕಾರ್ಯಕರ್ತರಿಗೆತರಬೇತಿ ನೀಡುವಉದ್ದೇಶ ಹೊಂದಿದೆ. ಈ ತರಬೇತಿಯ ವಿಷಯವನ್ನು ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಇಂಡಿಯನ್‍ಕೌನ್ಸಿಲ್‍ಆಫ್ ಮೆಡಿಕಲ್‍ರೀಸರ್ಚ್ ಮತ್ತು ವಿಶ್ವಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‍ಒ)ಯ ಮಾರ್ಗದರ್ಶಿ ಸೂತ್ರಗಳ ಅನ್ವಯ ಅಭಿವೃದ್ಧಿಪಡಿಸಲಾಗಿದೆ. ಈ ತರಬೇತಿ ಕಾರ್ಯಕ್ರಮವು ಆರೋಗ್ಯಸೇವಾಕಾರ್ಯಕರ್ತರಲ್ಲಿಅರಿವನ್ನು ಮೂಡಿಸುವಲ್ಲಿ ಬಹುದೂರ ಸಾಗಲಿದ್ದು ಉದ್ಯೋಗಿಗಳ ವಿಶ್ವಾಸ ಹೆಚ್ಚಿಸುವುದಲ್ಲದೆ ಆಸ್ಪತ್ರೆಯ ಸನ್ನದ್ಧತೆಯನ್ನು ಸುಧಾರಿಸುತ್ತದೆ”ಎಂದರು.

ಆರ್ಟಿಸ್ಟ್‍ತಂಡದಿಂದ ಪ್ರತಿನಿತ್ಯಆನ್‍ಲೈನ್‍ತರಬೇತಿ ಕೋರ್ಸ್‍ಗಳನ್ನು ನಡೆಸಲಾಗುತ್ತದೆ, ಇದರ ನೇತೃತ್ವವನ್ನುಆರೋಗ್ಯಸೇವಾಕ್ಷೇತ್ರದ ಮುಂಚೂಣಿಯಲ್ಲಿರುವ ಹಾಗೂ ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಹೇಮಾ ದಿವಾಕರ್ ವಹಿಸಿಕೊಂಡಿದ್ದಾರೆ. ಅವರು, “ಕೋವಿಡ್-19 ಜನರ ಮೇಲೆ ಊಹಿಸಲಾಗದಂತಹ ಪರಿಣಾಮ ಬೀರಿದೆ. ನಾವೆಲ್ಲರೂ ಚೆನ್ನಾಗಿ ಸಿದ್ಧರಾಗಿರಬೇಕಾದ ಅಗತ್ಯವಿದೆ. ಆದಾಗ್ಯೂ, ಬಹಳಷ್ಟು ಆರೋಗ್ಯಸೇವಾಕಾರ್ಯಕರ್ತರು ಪ್ರಸವಪೂರ್ವಆರೈಕೆ, ಸುರಕ್ಷಿತ ಹೆರಿಗೆ, ನವಜಾತ ಶಿಶು ಆರೈಕೆ, ಪ್ರತಿರಕ್ಷಣೆ ಮತ್ತುಆಸ್ಪತ್ರೆ ನಿರ್ವಹಣೆಕುರಿತು, ಕೋವಿಡ್-19 ಸಮಯ ಶಿಫಾರಸು ಮಾಡಲಾದ ಕ್ರಮಗಳ ಕುರಿತು ಅರಿವನ್ನು ಹೊಂದಿಲ್ಲ. ಆದ್ದರಿಂದ ನಾವು, ತಾಯಿ ಮತ್ತು ಮಗುವಿನ ಆರೈಕೆಯಲ್ಲಿತೊಡಗಿರುವ ಪ್ರಸೂತಿತಜ್ಞರು, ಸ್ತ್ರೀರೋಗ ತಜ್ಞರು, ಶುಶ್ರೂಷಕ ಸಿಬ್ಬಂದಿ, ಸಹಾಯಕ ವೈದ್ಯಕೀಯ ಸಿಬ್ಬಂದಿ ಮತ್ತು ಸ್ವಚ್ಛತೆಯ ಸಿಬ್ಬಂದಿಗೆ ಪರಿಣಾಮಕಾರಿ ಜ್ಞಾನ ಹಂಚಿಕೆ ಮತ್ತುಕೌಶಲ್ಯ ವರ್ಗಾವಣೆ ಕುರಿತ ಈ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ”ಎಂದರು.

ಈ ತರಬೇತಿಯನ್ನು ಕರ್ನಾಟಕರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ಸಂಸ್ಥೆ(ಕೆಎಸ್‍ಒಜಿಎ) ಮೂಲಕ ನಿರ್ವಹಿಸಲಾಗುತ್ತಿದೆ. ಕರ್ನಾಟಕದ ಮತ್ತು ಇತರೆ ರಾಜ್ಯಗಳಲ್ಲಿ ಆಯ್ಕೆ ಮಾಡಲಾದ ಆಸ್ಪತ್ರೆಗಳಲ್ಲಿ ವಿಡಿಯೋಕಾನ್ಫರೆನ್ಸಿಂಗ್ ಮೂಲಕ ಸಿಬ್ಬಂದಿಗೆ ಪ್ರತಿನಿತ್ಯತರಬೇತಿ ನೀಡಲಾಗುತ್ತದೆ. ಇಲ್ಲಿಯವರೆಗೆ ಈ ತರಬೇತಿಯು ರಾಜ್ಯದ ವಿಜಯಪುರ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಹಾಸನ, ಚನ್ನರಾಯಪಟ್ಟಣ, ಗದಗ, ಕೊಪ್ಪಳ, ಕಲ್ಬುರ್ಗಿ ಮತ್ತು ಮಂಡ್ಯಗಳಲ್ಲಿ ಪೂರ್ಣಗೊಳಿಸಲಾಗಿದೆ. ಮುಂದಿನ 12 ದಿನಗಳಲ್ಲಿ ಬಾಗಲಕೋಟೆ, ಉಡುಪಿ, ಬಳ್ಳಾರಿ, ಮಂಗಳೂರು ಚಿಕ್ಕಮಗಳೂರು, ಮೈಸೂರು, ಬೆಂಗಳೂರು, ಚಿತ್ರದುರ್ಗ, ತುಮಕೂರು, ರಾಯಚೂರು, ಶಿವಮೊಗ್ಗ, ದಾವಣಗೆರೆ ಮತ್ತು ಬೀದರ್ ಜಿಲ್ಲೆಗಳಲ್ಲಿ ತರಬೇತಿ ನಡೆಸಲಿದೆ.

ಈ ಕುರಿತು ಕೆಎಸ್‍ಒಜಿಎ ಅಧ್ಯಕ್ಷೆ ಡಾ.ಶೋಭನಾ ಪಟ್ಟೆದ್,“ಕರ್ನಾಟಕದಾದ್ಯಂತ ಈ ಕಾರ್ಯಕ್ರಮಕ್ಕೆ ಆಸ್ಪತ್ರೆಗಳಿಂದ ದೊರೆತ ಅಭೂತಪೂರ್ವ ಪ್ರತಿಕ್ರಿಯೆಯಿಂದ ನಾವು ಬಹಳ ಸಂತೋಷಗೊಂಡಿದ್ದೇವೆ ಭಾಗವಹಿಸಿದವರಿಂದ ನಾವು ಉತ್ತಮ ಫೀಡ್‍ಬ್ಯಾಕ್ ಪಡೆದಿದ್ದೇವೆ ಎಂದರು.

ಪಿಎನ್‍ಸಿಡಿಸಿ(ಪ್ರೆಗ್ನೆನ್ಸಿಅಂಡ್ ನಾನ್-ಕಮ್ಯುನಿಕಬಲ್ ಡಿಸೀಸಸ್ ಕಮಿಟಿ)- ಫಿಗೊ(ಇಂಟರ್‍ನ್ಯಾಷನಲ್ ಫೆಡರೇಷನ್‍ಆಫ್‍ಗೈನಕಾಲಜಿಅಂಡ್‍ಅಬ್‍ಸ್ಟೆಟ್ರಿಕ್ಸ್)ಉಪಾಧ್ಯಕ್ಷೆ, ಫೊಗ್ಸಿಯ (ಫೆಡರೇಷನ್‍ ಆಪ್‍ ಅಬ್‍ಸ್ಟೆಟ್ರಿಕ್‍ ಅಂಡ್‍ಗೈನ ಕಾಲಜಿಕಲ್ ಸೊಸೈಟೀಸ್‍ ಆಫ್‍ ಇಂಡಿಯಾದ) ರಾಷ್ಟ್ರೀಯ ಸಂಯೋಜಕಿಡಾ.ಹೇಮಾ,“ಈ ತರಬೇತಿಯಅಂತ್ಯದಲ್ಲಿ ಅವರು ಏನು ಕಲಿತಿದ್ದಾರೆ ಎನ್ನುವುದನ್ನು ತೋರಿಸಲು ಸೂಚಿಸುತ್ತೇವೆ ಮತ್ತುಒಂದು ವಾರ ಮೇಲ್ಪಟ್ಟು ವಿಡಿಯೋ ತುಣಕುಗಳಿಂದ ಇದನ್ನು ದೃಢಪಡಿಸಿಕೊಳ್ಳುತ್ತೇವೆ”ಎಂದರು.

ಆರ್ಟಿಸ್ಟ್ ಮಹಾರಾಷ್ಟ್ರ, ರಾಜಾಸ್ಥಾನ ಮತ್ತುಉತ್ತರ ಪ್ರದೇಶ ರಾಜ್ಯಗಳಲ್ಲೂ ಆರೋಗ್ಯಸೇವಾಕಾರ್ಯಕರ್ತರಿಗೆತರಬೇತಿಯನ್ನು ನಿರ್ವಹಿಸುತ್ತಿದ್ದು ಅವರನ್ನು ಮಾನ್ಯತಾ ತರಬೇತಿಗಳ ಮೂಲಕ ಸುರಕ್ಷಿತ ಹೆರಿಗೆಗಳನ್ನು ನಡೆಸಲು ಸನ್ನದ್ಧರಾಗಲು ನೆರವಾಗುತ್ತಿದೆ. ಆರ್ಟಿಸ್ಟ್ ಈಗ ಕೋವಿಡ್ ಪ್ರಿಪೇರ್ಡ್‍ನೆಸ್ ಮಾಡ್ಯೂಲ್‍ಅನ್ನು ಸೇರ್ಪಡೆ ಮಾಡಿದ್ದು,ಇದರಿಂದ ಆಸ್ಪತ್ರೆ ಉನ್ನತಿಕರಿಸಲು ಮತ್ತು ಆಸ್ಪತ್ರೆಯ ಸನ್ನದ್ಧತೆಯನ್ನು ಸುಧಾರಿಸುತ್ತದೆ” ಎಂದರು.


Spread the love

Exit mobile version