ರಾಜೀವ ಗಾಂಧಿಯವರ ಮಾಹಿತಿ ತಂತ್ರಜ್ಞಾನದ ಕೊಡುಗೆಯಿಂದ ದೇಶ ಇಂದು ಪ್ರಗತಿ : ಪ್ರಮೋದ್

Spread the love

ರಾಜೀವ ಗಾಂಧಿಯವರು ಈ ದೇಶದ ಅಭಿವೃದ್ಧಿಗೆ ಮಹಾನ್ ಕೊಡುಗೆ ನೀಡಿದವರಲ್ಲಿ ಒಬ್ಬರು. ಯುವ ಜನತೆ ದೇಶವನ್ನು ಮುನ್ನಡೆಸಬೇಕು ಎಂಬ ಹಂಬಲ ಹೊತ್ತು 18 ವರ್ಷದ ಯುವಕರಿಗೆ ಮತದಾನದ ಹಕ್ಕನ್ನು ನೀಡುವಲ್ಲಿ ರಾಜೀವ ಗಾಂಧಿಯವರ ಪಾತ್ರ ಪ್ರಮುಖವಾಗಿದೆ.

cong

ರಾಜೀವ ಗಾಂಧಿಯವರು ಮಾಹಿತಿ ತಂತ್ರಜ್ಞಾನವನ್ನು ದೇಶಾದ್ಯಂತ ಅನುಷ್ಠಾನಗೊಳಿಸಿದ್ದರಿಂದ ದೇಶ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ, ಪಕ್ಷಕ್ಕೆ ಪುನಶ್ಚೇತನವನ್ನು ಕೊಟ್ಟ ಹಿರಿಮೆ ರಾಜೀವ ಗಾಂಧಿಯವರದು ಎನ್ನುವುದನ್ನು ನಾವು ಇಂದು ನೆನಪಿಸಿಕೊಳ್ಳಬೇಕಾಗಿದೆ ಎಂದು ಕಾಂಗ್ರೆಸ್ ಭವನದಲ್ಲಿ ನಡೆದ ರಾಜೀವ ಗಾಂಧಿಯವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಶಾಸಕ ಪ್ರಮೋದ್ ಮಧ್ವರಾಜ್ ಅವರು ರಾಜೀವ ಗಾಂಧಿಯವರ ಸಾಧನೆ ಹಾಗೂ ಕ್ರೀಯಾಶೀಲತೆಯನ್ನು ನೆನಪಿಸಿಕೊಂಡರು.

ಈ ಸಂದರ್ಭದಲ್ಲಿ ಕೇಶವ ಎಂ. ಕೋಟ್ಯಾನ್, ಬಿ. ನರಸಿಂಹಮೂರ್ತಿ, ಪಿ. ಯುವರಾಜ್, ಗೋಪಾಲ್ ಎಲ್‍ಐಸಿ, ಅಮೃತಾ ಕೃಷ್ಣಮೂರ್ತಿ ಆಚಾರ್ಯ, ಗಣೇಶ್ ನೆರ್ಗಿ, ಮೀನಾಕ್ಷಿ ಮಾಧವ ಬನ್ನಂಜೆ, ಸುಜಯ ಪೂಜಾರಿ, ಪ್ರಖ್ಯಾತ್ ಶೆಟ್ಟಿ, ಗೋಪಾಲಕೃಷ್ಣ ಶೆಟ್ಟಿ, ಪೃಥ್ವಿರಾಜ್ ಶೆಟ್ಟಿ, ಅಶೋಕ್ ಶೆಟ್ಟಿ, ಯತೀಶ್ ಕರ್ಕೇರಾ, ಸಂಪತ್, ವ್ಯಾಸ ರಘುಪತಿ ಮಲ್ಯ, ಗಣಪತಿ ಶೆಟ್ಟಿಗಾರ್, ನಾರಾಯಣ ಕುಂದರ್, ನಾರಾಯಣ ಅಂಚನ್, ಮನೋಜ್ ಕರ್ಕೇರಾ, ವಸಂತ್ ಪೂಜಾರಿ, ಪ್ರಭಾಕರ ಅಂಚನ್, ಪ್ರಕಾಶ್ ಅಂದ್ರಾದೆ ಮೊದಲಾದವರು ಉಪಸ್ಥಿತರಿದ್ದರು. ಕೆ. ಜನಾರ್ದನ ಭಂಡಾರ್ಕರ್ ಸ್ವಾಗತಿಸಿ, ಭಾಸ್ಕರ್ ರಾವ್ ಕಿದಿಯೂರು ವಂದಿಸಿದರು.


Spread the love