ರಾಜ್ಯಕ್ಕೆ ವಿನಯ್ ಕುಮಾರ್ ಸೊರಕೆ ಬಹು ದೊಡ್ಡ ಆಸ್ತಿ: ಡಿ ಕೆ ಶಿವಕುಮಾರ್
ಕಾಪು: ರಾಜ್ಯಕ್ಕೆ ವಿನಯ್ ಕುಮಾರ್ ಕುಮಾರ್ ಸೊರಕೆ ಬಹು ದೊಡ್ಡ ಆಸ್ತಿ. ರಾಜ್ಯದಲ್ಲಿ ಇನ್ನೊಬ್ಬ ವಿನಯ್ ಕುಮಾರ್ ಸೊರಕೆ ಯನ್ನು ತಯಾರಿ ಮಾಡಬೇಕಾದರೆ ಇನ್ನು 25 ವರ್ಷ ಬೇಕಾಗಬಹುದು. ಅಭಿವೃದ್ಧಿಯ ಹರಕಾರರಾದ ವಿನಯ್ ಕುಮಾರ್ ಸೊರಕೆಯವರನ್ನು ಉಳಿಸಿಕೊಳ್ಳುವುದು ಕಾಪು ಕ್ಷೇತ್ರದ ಜನತೆಯ ಬಹುದೊಡ್ಡ ಕರ್ತವ್ಯ ಅಂತಾ ರಾಜ್ಯ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಅವರು ಬುಧವಾರ ಕಾಪು ರಾಜೀವ ಭವನದಲ್ಲಿ ನಡೆದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಿರಿಯ ರಾಜಕಾರಣಿ ಜನಾರ್ಧನ ಪೂಜಾರಿಯವರ ನಂತರದ ಸ್ಥಾನವನ್ನು ವಿನಯ್ ಕುಮಾರ್ ಸೊರಕೆ ಸಮರ್ಥವಾಗಿ ತುಂಬಿದ್ದಾರೆ. ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರಿಗೆ ಅವಕಾಶ ಮಾಡಿಕೊಡುವುದಕ್ಕಾಗಿ ಮಂತ್ರಿ ಸ್ಥಾನವನ್ನೇ ತ್ಯಾಗ ಮಾಡಿದ ಸೊರಕೆಯವರನ್ನು ಈ ಬಾರಿ ಭಾರಿ ಅಂತರದಿಂದ ಗೆಲ್ಲಿಸಿ ಮತ್ತೊಮ್ಮೆ ವಿಧಾನ ಸೌಧಧ ಪಡಸಾಲೆಗೆ ಕಳುಹಿಸಿಬೇಕಾಗಿದೆ ಅಂತಾ ಶಿವಕುಮಾರ್ ಹೇಳಿದ್ರು. ಮೋದಿ ಉಡುಪಿ ಸಮಾವೇಶದ ಬಗ್ಗೆ ಮಾತನಾಡಿದ ಡಿಕೆಶಿ ದೇವೆಗೌಡ ರನ್ನು ಹಾಡಿ ಹೊಗಳಿದ ಮೋದಿ ಬಣ್ಣ ಬಯಲಾಗಿದ್ದು ಚುನಾವಣಾ ಸಂದರ್ಭದಲ್ಲಿ ವೈರಿಯನ್ನು ಹೊಗಳಿದ್ದು ಬಿಜೆಪಿ ಎಷ್ಟು ವೀಕ್ ಆಗಿದೆ ಅನ್ನೊದಕ್ಕೆ ಇದೇ ದೊಡ್ಡ ಉದಾಹರಣೆ ಅಂತಾ ಬಿಜೆಪಿ ಪಕ್ಷದ ಅಸಲಿಯತ್ತನ್ನು ಬಯಲು ಮಾಡಿದರು.
ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ವಿನಯ್ ಕುಮಾರ್ ಸೊರಕೆ ಮಾತನಾಡಿ ಯುಪಿಸಿ ಎಲ್ ನ ಬಹುದೊಡ್ಡ ಸಮಸ್ಯೆ ಇತ್ಯರ್ಥ ಮಾಡಬೇಕಾದರೆ ಡಿ. ಕ.. ಶಿವಕುಮಾರ್ ಅವರೇ ಬರಬೇಕಾಯಿತು. ಉಷ್ಣ ವಿದ್ಯುತ್ ಸ್ಥಾವರ ಇದ್ದ ಕಡೆ 24 ಗಂಟೆ ವಿದ್ಯುತ್ ನೀಡಬೇಕೆಂಬ ಕಾನೂನಿದ್ದರೂ ಯುಪಿಸಿಎಲ್ ಕಂಪೆನಿ ಇದನ್ನು ಪಾಲನೇ ಮಾಡ್ತಾ ಇರಲಿಲ್ಲ. 24 ಗಂಟೆ ವಿದ್ಯುತ್ ಕನಸು ಶಿವಕುಮಾರ್ ಅವಧಿಯಲ್ಲಿ ನನಸಾಗಿದೆ ಅಂತಾ ತಿಳಿಸಿದರು.
ಚಿತ್ರ ನಟ ಸಾಧು ಕೋಕಿಲ ಮಾತನಾಡಿ ಬಡವರ ಅಭಿವೃದ್ಧಿಯಲ್ಲಿ ಮಹತ್ವದ ಕೆಲಸವನ್ನು ಮಾಡಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ಶ್ರಮಿಸಬೇಕಾಗಿದೆ ಅಂತಾ ತಿಳಿಸಿದರು.
ಕಾಂಗ್ರೆಸ್ ಮುಖಂಡರಾದ ನವೀನ್ ಚಂದ್ರ ಶೆಟ್ಟಿ, ಯು. ಆರ್ ಸಭಾಪತಿ, ರಾಜಶೇಖರ್ ಕೋಟ್ಯಾನ್,ಜನಾರ್ಧನ ತೋನ್ಸೆ, ಅಶೋಕ್ ಕುಮಾರ್ ಕೊಡವೂರು, ದಿವಾಕರ ಶೆಟ್ಟಿ, ದಿನೇಶ್ ಕೋಟ್ಯಾನ್, ಮೆಲ್ವಿನ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.