ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ – ಬಿ ವೈ ವಿಜಯೇಂದ್ರ

Spread the love

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ – ಬಿ ವೈ ವಿಜಯೇಂದ್ರ

ಉಡುಪಿ: ರಾಜ್ಯದಲ್ಲಿ ಕಾನೂನು ಸು ವ್ಯವಸ್ಥೆ ಹದಗೆಟ್ಟಿದ್ದು ನೇಹಾ ಹತ್ಯೆ ಪ್ರಕರಣ, ಚನ್ನಗಿರಿ, ಗದಗ ಪ್ರಕರಣವನ್ನು ರಾಜ್ಯ ಸರ್ಕಾರ ಹಗುರವಾಗಿ ತೆಗೆದುಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿ ಧಾರವಾಡ ಘಟನೆ ಬಗ್ಗೆ ವೈಯಕ್ತಿಕ ಕಾರಣಕ್ಕೆ ಆಗಿದೆ ಎನ್ನುತ್ತಿರುವ ಸರಕಾರ ಇದು ಅಲ್ಪಸಂಖ್ಯಾತರ ತುಷ್ಟಿಕರಣ ರಾಜಕಾರಣ ಮಾಡುತ್ತಿದೆ. ರಾಜ್ಯದ ಜನತೆಯ ರಕ್ಷಣೆ ವಿಚಾರ ಇವರಿಗೆ ಬೇಕಾಗಿಲ್ಲ. ಇಂದು ರಾಜ್ಯದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆ ಎದ್ದಿದ್ದು, ನೇಹಾ ಹತ್ಯೆ ಪ್ರಕರಣ ಪ್ರತಿಯೊಬ್ಬ ಮಹಿಳೆ ರಕ್ಷಣೆ ಇಲ್ಲ ಎಂದು ಯೋಚಿಸುತ್ತಿದ್ದಾರೆ, ಅತಿ ಶೀಘ್ರದಲ್ಲಿ ನೇಹಾ ಪ್ರಕರಣದ ಬಗ್ಗೆ ನಾವು ಹೋರಾಟ ಕೈಗೊಳ್ಳುತ್ತೇವೆ ಎಂದರು.

ಕಾಂಗ್ರೆಸ್ ಜಾಹೀರಾತು ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ನವರು ಹತಾಶ ಭಾವನೆಯಿಂದ ಈ ರೀತಿ ನಡೆದುಕೊಂಡಿದ್ದಾರೆ ಗ್ಯಾರೆಂಟಿ ಯೋಜನೆಗಳ ವೈಫಲ್ಯತೆಯಿಂದ ಕಾಂಗ್ರೆಸ್ಸಿಗೆ ಜ್ಞಾನೋದಯವಾಗಿದೆ. ಗೆಲ್ಲುವುದಿಲ್ಲ ಎಂದು ಗ್ಯಾರಂಟಿ ಆದ ನಂತರ ಹತಾಶೆಯಿಂದ ಜಾಹೀರಾತು ನೀಡುತ್ತಿದ್ದಾರೆ ಜನರೇ ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ ಎಂದರು.

ಈಶ್ವರಪ್ಪನವರ ವಿಚಾರ ರಾಷ್ಟ್ರೀಯ ನಾಯಕರ ಗಮನದಲ್ಲಿದ್ದು, ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಅವರ ಸ್ಪರ್ಧೆಯಿಂದ ಪರಿಣಾಮ ಏನು ಕೂಡ ಆಗಲ್ಲ, ರಾಘವೇಂದ್ರ ಜನಪ್ರಿಯ ಸಂಸದರಾಗಿದ್ದು, ಮೋದಿಯ ಜನಪ್ರಿಯತೆ ಮತ್ತು ರಾಘವೇಂದ್ರ ಅಭಿವೃದ್ಧಿ ಕೆಲಸದಿಂದ ಎರಡು ಲಕ್ಷ ಕ್ಕೂ ಅಧಿಕ ಅಂತರದಲ್ಲಿ ಗೆಲ್ಲುತ್ತಾರೆ

ಚುನಾವಣೆ ನಂತರ ಬಿಜೆಪಿಯವರು ಜೆಡಿಎಸ್ ಮೈತ್ರಿ ಕಡೆದುಕೊಳ್ಳುತ್ತಾರೆ ಡಿಕೆಶಿ ಹೇಳಿಕೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು ಚುನಾವಣೆ ನಂತರ ಮೈತ್ರಿ ಹೇಗೆ ಹೋಗುತ್ತೆ ಅನ್ನೋದನ್ನ ಅವರೇ ನೋಡಲಿದ್ದಾರೆ, ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪರವಾಗಿ ವಾತಾವರಣ ಇದೆ. ಚುನಾವಣೆ ನಂತರ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ತರುತ್ತಾರೆ ಎಂದರು.

ರಾಜ್ಯದಲ್ಲಿ ವಾತಾವರಣ ನಮಗೆ ಪೂರಕವಾಗಿದೆ, ಮೋದಿ ಪ್ರಧಾನಿ ಆಗಬೇಕೆನ್ನುವುದು ಸಹಜ ಅಭಿಪ್ರಾಯವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರತಿದಿನ ಉತ್ಸಾಹ ಕುಸಿಯುತ್ತಿದೆ ಮೋದಿ ಜನಪ್ರಿಯ ಕಾರಣಕ್ಕೆ ರಾಜ್ಯದ ಯಾವುದೇ ಸಚಿವರು ಸ್ಪರ್ಧೆ ಮಾಡಿಲ್ಲ ಎಂದು ಹೇಳಿದರು

ಸುದ್ದಿಗೋಷ್ಠಿಗೂ ಮುನ್ನ ಯುವ ಸಮಾವೇಶದಲ್ಲಿ ಮಾತನಾಡಿದ ಅವರು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರ ಬೆಂಗಳೂರು ಪ್ರವಾಸ ಮಾಡುತ್ತಿದ್ದು, ಮೂರು ಬಾರಿ ಕಾರಣಾಂತರದಿಂದ ಉಡುಪಿಗೆ ಬರಲು ಸಾಧ್ಯವಾಗಿರಲಿಲ್ಲ ಪ್ರಧಾನಿ ಮಂತ್ರಿ ಕಚೇರಿಯಿಂದ ಅನುಮತಿ ಪಡೆದು ಉಡುಪಿ ಬಂದಿದ್ದೇನೆ ಎಂದರು.

ಕರಾವಳಿ ಜನರ ರಕ್ತದಲ್ಲಿ ಹಿಂದುತ್ವ ಇದ್ದು, ಮೋದಿಯ 10 ವರ್ಷದ ಆಡಳಿತವನ್ನು ಜಗತ್ತು ಕೊಂಡಾಡಿದೆ. ಎಲ್ಲಾ ಅಸಾಧ್ಯಗಳನ್ನು ಪ್ರಧಾನಿ ಮೋದಿ ಸಾಧ್ಯ ಮಾಡಿದ್ದಾರೆ ಇಡೀ ದೇಶದ ಜನರಲ್ಲಿ ವಿಶ್ವಾಸ -ಭರವಸೆ ಮೂಡಿಸಿದ್ದು ಮೋದಿ. ರಾಮಮಂದಿರ, ಆರ್ಟಿಕಲ್ 370 ರದ್ಧು, ಅಭಿವೃದ್ಧಿ ಎಲ್ಲವೂ ಮೋದಿ ಕಾಲದಲ್ಲಿ ಆಗಿದೆ.

ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತೆ ನಾವು ರಕ್ಷಣೆ ಮಾಡ್ತೇವೆ ಎಂದು ಖರ್ಗೆ ಹೇಳ್ತಾರೆ ಮೋದಿ ಮತ್ತೆ ಪ್ರಧಾನಿ ಆಗಬಾರದು ಅಂತ ಖರ್ಗೆ ಕರೆ ಕೊಡ್ತಾರೆ ಆದರೆ ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಬದುಕಿದ್ದಾಗಲೇ ಕಗ್ಗೊಲೆ ಮಾಡಿದೆ. ಅಂಬೇಡ್ಕರ್ ರನ್ನು ಸೋಲಿಸಿದ್ದು ಕಾಂಗ್ರೆಸ್ ಪಕ್ಷವಾಗಿದ್ದು ಬಾಬಾ ಸಾಹೇಬರ ಅಂತ್ಯ ಸಂಸ್ಕಾರಕ್ಕೂ ಅವಕಾಶ ಕೊಟ್ಟಿಲ್ಲ. ಅಂಬೇಡ್ಕರ್ ರ ಪಂಚ ತೀರ್ಥಕ್ಷೇತ್ರ ಅಭಿವೃದ್ಧಿ ಮಾಡಿದ್ದು ಮೋದಿ- ಬಿಜೆಪಿ ಸರಕಾರ ಆದರೂ ಕೂಡ ಬಿಜೆಪಿಯನ್ನು ಸಂವಿಧಾನ ವಿರೋಧಿ ಎಂದು ಬಿಂಬಿಸಲಾಗುತ್ತಿದೆ

ಕಾಂಗ್ರೆಸ್ ಪಕ್ಷ ಮಹಾನ್ ನಾಯಕ ರಾಹುಲ್ ವೈನಾಡ್ ನಲ್ಲಿ ರಕ್ಷಣೆ ಪಡೆದಿದ್ದಾರೆ ಅಲ್ಪಸಂಖ್ಯಾತ ರು ಹೆಚ್ಚಿರುವ ವೈನಾಡಲ್ಲಿ ಸ್ಪರ್ಧೆ ಮಾಡುವ ಪರಿಸ್ಥಿತಿ ರಾಗಾ ಗೆ ಬಂದಿದೆ ಕುಕ್ಕರ್ ಸ್ಪೋಟ, ಪಾಕ್ ಜಿಂದಾಬಾದ್ ಘೋಷಣೆ ಕೂಗಿದವರಿಗೆ ರಕ್ಷಣೆ ನೀಡಲಾಗಿದೆ ಎಂದರು.


Spread the love