Home Mangalorean News Kannada News ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಸ್ವಾಮೀಜಿಗಳ ನೆರವು ಕೋರಿದ ಅಮಿತ್ ಶಾ

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಸ್ವಾಮೀಜಿಗಳ ನೆರವು ಕೋರಿದ ಅಮಿತ್ ಶಾ

Spread the love

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಸ್ವಾಮೀಜಿಗಳ ನೆರವು ಕೋರಿದ ಅಮಿತ್ ಶಾ

ಉಡುಪಿ: ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮಠಾಧೀಶರ ಬೆಂಬಲ ಯಾಚಿಸಿದ್ದಾರೆ.

ಮಂಗಳವಾರ ರಾತ್ರಿ ಉಡುಪಿ ಪೇಜಾವರ ಮಠದಲ್ಲಿ ಉಭಯ ಜಿಲ್ಲೆಗಳ ಮಠಾಧೀಶರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಪ್ರಥಮ ಬಾರಿಗೆ ಬಿಜೆಪಿ ಕೇಂದ್ರದಲ್ಲಿ ಸಂಪೂರ್ಣ ಬಹುಮತ ಗಳಿಸಿದೆ. ಇದು ದೇಶ ದೇಶದ ಜನರು ಪರಿವರ್ತನೆ ಬಯಸುತ್ತಿರುವುದರ ಸಂಕೇತವಾಗಿದೆ. ಪ್ರಧಾನಿ ಮೋದಿ ಅವರು ಭಾರತವನ್ನು ವಿಶ್ವದ ಶ್ರೇಷ್ಟ ದೇಶವನ್ನಾಗಿ ಮಾಡುವ ಸಂಕಲ್ಪವನ್ನು ಹೊಂದಿದ್ದು ಇದು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ಆದ್ದರಿಂದ ಇಡೀ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾಗಿದೆ. ಇದಕ್ಕೆ ಮಠಾಧೀಶರ ಬೆಂಬಲ ಆಶೀರ್ವಾದ ಬೇಕು ಎಂದು ಅವರು ಆಶಿಸಿದರು.

ಕೇಂದ್ರ ಸರ್ಕಾರ ಹಿಂದೂಗಳ ಹಿತರಕ್ಷಣೆಗೆ ಬದ್ಧವಾಗಿದೆ ಭಾರತದಲ್ಲಿರುವ ಬಾಂಗ್ಲಾ ದೇಶಿಯರ ಗುರುತಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದ ಷಾ ವಿದೇಶದಲ್ಲಿರುವ ಹಿಂದೂಗಳಿಗೆ ನಮ್ಮ ಪರಂಪರೆಯನ್ನು ಪರಿಚಯಿಸುವ ಕೆಲಸ ಕೇಂದ್ರ ಸರ್ಕಾರ ವಿದೇಶಿ ಮಂತ್ರಾಲಯದ ಮೂಲಕ ನಡೆಸುವ ಯೋಜನೆ ಇದೆ ಎಂದು ಹೇಳಿದರು.

ಸಭೆಯ ಮುನ್ನ ಪೇಜಾವರ ಮಠದ ಹಿರಿಯ ಸ್ವಾಮೀಜಿಗಳಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರನ್ನು ಭೇಟಿಯಾದ ಅಮಿತ್ ಷಾ ಅವರು ಸ್ವಾಮೀಜಿಯವರ ಆರೋಗ್ಯ ವಿಚಾರಿಸಿದರು.

ಮಠಾಧೀಶರುಗಳ ಸಭೆಯಲ್ಲಿ ಪರ್ಯಾಯ ಪಲಿಮಾರು ಸ್ವಾಮೀಜಿ ಸೇರಿದಂತೆ ಪುತ್ತಿಗೆ, ರಾಮಚಂದ್ರಾಪುರ ಮಠ, ಕೇಮಾರು ಸಾಂದೀಪಿನಿ ಮಠ, ಗುರುಪುರ ವಜ್ರದೇಹಿ ಮಠ, ಸುಬ್ರಹ್ಮಣ್ಯ ಸ್ವಾಮೀಜಿ ಸೇರಿದಂತೆ ಹಲವಾರು ಸ್ವಾಮೀಜಿಗಳು ಪಾಲ್ಗೊಂಡಿದ್ದರು.


Spread the love

Exit mobile version