ರಾಜ್ಯದಲ್ಲೇ ಲಾಕ್ ಡೌನ್ ಆದೇಶ ಇದ್ರೂ ಕ್ಯಾರೇ ಅನ್ನುತ್ತಿಲ್ಲಾ ಮಲ್ಪೆ ಮೀನುಗಾರಿಕಾ ಬಂದರು!
ಉಡುಪಿ: ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಮಾ.31ರವರೆಗೆ ರಾಜ್ಯಾದ್ಯಂತ ಲಾಕ್ಡೌನ್ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು ಏಷ್ಯಾದ ನಂಬರ್ ವನ್ ಮೀನುಗಾರಿಕಾ ಬಂದರು ಮಲ್ಪೆಯಲ್ಲಿ ಅದರ ಬಿಸಿ ತಟ್ಟಿಲ್ಲ.
ರಾಜ್ಯದಾದ್ಯಂತ ಲಾಕ್ ಡೌನ್ ಮಾಡಿ ಸರಕಾರ ಆದೇಶ ಹೊರಡಿಸಿದ್ದು ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ತಮಗೆ ಏನೂ ಸಂಬಂಧವೇ ಇಲ್ಲ ಎಂಬಂತೆ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿದೆ.
ಜಿಲ್ಲೆಯ ಜಿಲ್ಲಾಧಿಕಾರಿಗಳು ಲಾಕ್ ಡೌನ್ ಕುರಿತು ಹಲವಾರು ಬಾರಿ ಎಚ್ಚರಿಕೆ ನೀಡಿದರೂ ಕೂಡ ಅವರ ಆದೇಶಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ಮೀನುಗಾರಿಕ ವ್ಯಾಪಾರ ,ವ್ಯವಹಾರ ಜೋರಾಗಿಯೇ ನಡೆಯುತ್ತಿದೆ.
ಎಂದಿನಂತೆ ಮೀನು ಹಾರಾಜು, ಸಾಗಾಟ, ವಿತರಣೆ ಎಂದಿನಂತೆ ನಡೆಯುತ್ತಿದೆ.ಮಾಮೂಲು ನಂತೆ ಮೀನು ಲೋಡ್ ಅಗಿ ಬೇರೆ ಊರುಗಳಿಗೆ ಸಾಗಾಟ ನಿರಾಂತಕವಾಗಿ ನಡೆಯುತ್ತಿದೆ.ಸಾವಿರಾರು ಜನ ಗುಂಪು ಗುಂಪಾಗಿ ಕೆಲಸ ಬಿಜಿಯಾಗಿದ್ರು ಕೊರೊನಾ ಸೋಂಕಿನ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮಗಳು ಕಂಡು ಬಂದಿಲ್ಲ.
ಜಿಲ್ಲಾಡಳಿತ ಕೂಡ ಮೀನುಗಾರಿಕೆ ಮೇಲೆ ಹತೋಟಿ ಸಾಧಿಸುವಲ್ಲಿ ವಿಫಲವಾಗಿದೆ. ಮೀನುಗಾರಿಕೆ ಕೆಲಸದಲ್ಲಿ ತೋಡಗಿರುವ ಕಾರ್ಮಿಕ ಗೆ ಅರಿವು ಮೂಡಿಸುವ ಕಡೆಗೆ ಅಗಲಿಇನ್ನೂ ಗಮನ ಹರಿಸಿಲ್ಲ. ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಸೋಂಕು ಹರಡದಂತೆ ತಡೆಗಟ್ಟುವ ಕಡೆಗೆ ಜಿಲ್ಲಾ ಆಡಳಿತ ಗಮನ ಹರಿಸಬೇಕಿದೆ.