Home Mangalorean News Kannada News “ರಾಜ್ಯದ ಉನ್ನತ ಶಿಕ್ಷಣವನ್ನು ಉಳಿಸಿ” ಎಬಿವಿಪಿ ವತಿಯಿಂದ ಮನವಿ

“ರಾಜ್ಯದ ಉನ್ನತ ಶಿಕ್ಷಣವನ್ನು ಉಳಿಸಿ” ಎಬಿವಿಪಿ ವತಿಯಿಂದ ಮನವಿ

Spread the love

“ರಾಜ್ಯದ ಉನ್ನತ ಶಿಕ್ಷಣವನ್ನು ಉಳಿಸಿ” ಎಬಿವಿಪಿ ವತಿಯಿಂದ ಮನವಿ

ಶಿಕ್ಷಣ ಎಂಬುದು ಮಾರಾಟದ ವಸ್ತುವಲ್ಲ, ಅದು ಸರ್ವರಿಗೂ ಸಿಗುವಂತಾಗಬೇಕೆಂಬ ಶ್ರೇಷ್ಠ ಕಲ್ಪನೆ ಹೊಂದಿರುವ ಹೆಮ್ಮೆಯ ಸಂಸ್ಕೃತಿ ನಮ್ಮದು. ವಿಶೇಷವಾಗಿ ಕರ್ನಾಟಕ ರಾಜ್ಯವು ಭಾರತದ ಶಿಕ್ಷಣದ ರಾಜಧಾನಿ ಎಂಬಂತೆ ಶೈಕ್ಷಣಿಕವಾಗಿ ಬಹಳ ಪ್ರಗತಿ ಕಂಡಿರುವ ರಾಜ್ಯ. ಆದರೆ ಇತ್ತೀಚಿನ ದಿನಗಳಲ್ಲಿ ರಾಜ್ಯದ ಉನ್ನತ ಶಿಕ್ಷಣದ ಗುಣಮಟ್ಟ, ದಿನಕ್ಕೊಂದು ಹೇಳಿಕೆಯನ್ನು ಕೊಡುತ್ತಿರುವ ಶಿಕ್ಷಣ ಸಚಿವರು, ತರಾತುರಿಯಲ್ಲಿ ಸಾಕಷ್ಟು ಗೊಂದಲಗಳಿಂದ ಕೂಡಿದ ಮಸೂದೆಯನ್ನು ತಂದಿರುವುದು ಉನ್ನತ ಶಿಕ್ಷಣವನ್ನು ಅದಃಪತನಗೊಯ್ಯುತ್ತಿದೆ. ಇದನ್ನು ಖಂಡಿಸಿ ಎಬಿವಿಪಿ ಉನ್ನತ ಶಿಕ್ಷಣವನ್ನು ಉಳಿಸಲು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ.

2017ರ ವಿಶ್ವವಿದ್ಯಾಲಯಗಳ ಕಾಯ್ದೆಯನ್ನು ವಾಪಸ್ಸು ತೆಗೆದುಕೊಳ್ಳಲು ಸರ್ಕಾರಕ್ಕೆ ಎಬಿವಿಪಿ ಆಗ್ರಹ.

ಸರ್ಕಾರ ಶಿಕ್ಷಣ ತಜ್ಞರ ಜೊತೆ, ಚಿಂತಕರ ಜೊತೆ, Sಣಚಿಞe ಊoಟಜeಡಿs ಜೊತೆ ಚರ್ಚಿಸದೆ ತರಾತುರಿಯಲ್ಲಿ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ-2017ನ್ನು ಮಂಡಿಸಿರುವುದು ವಿಶ್ವವಿದ್ಯಾಲಯಗಳ ಸ್ಥಾಪನೆಯ ಉದ್ದೇಶ ಹಾಗೂ ಯುಜಿಸಿ ನಿಯಮಾವಳಿಗಳಿಗೆ ವಿರುದ್ಧವಾಗಿದೆ. ಸರ್ಕಾರ ರಾಜಕೀಯ ಕಪಿಮುಷ್ಠಿಯಲ್ಲಿಟ್ಟುಕೊಳ್ಳುವ ಉದ್ದೇಶದಿಂದ ಈ ಮಸೂದೆ ಜಾರಿಯಾಗಿದೆ. ಹಾಗಾಗಿ 2017ರ ವಿಶ್ವವಿದ್ಯಾಲಯ ಕಾಯ್ದೆಯನ್ನು ವಾಪಸ್ ಪಡೆಯಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸರ್ಕಾರವನ್ನು ಆಗ್ರಹಿಸುತ್ತದೆ.

 ರಾಜ್ಯದಲ್ಲಿ ಸಮಗ್ರ ಶಿಕ್ಷಣ ನೀತಿಗೆ ಎಬಿವಿಪಿ ಆಗ್ರಹ.

2017ರ ವಿಶ್ವವಿದ್ಯಾಲಯಗಳ ಕಾಯ್ದೆ ಸಾಕಷ್ಟು ಗೊಂದಲಗಳಿಂದ ಕೂಡಿದ್ದು, ಶಿಕ್ಷಣ ತಜ್ಞರು, ಚಿಂತಕರು ಸೇರಿದಂತೆ ಸಮಗ್ರವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಿಕ್ಷಣಕ್ಕೋಸ್ಕರ, ಉನ್ನತ ಶಿಕ್ಷಣಕ್ಕೋಸ್ಕರ ಸಮಗ್ರ ಶಿಕ್ಷಣ ನೀತಿಯನ್ನು ರೂಪಿಸಬೇಕೆಂದು ಶಿಕ್ಷಣ ಸಚಿವರನ್ನು ಹಾಗೂ ಸರ್ಕಾರವನ್ನು ಎಬಿವಿಪಿ ಆಗ್ರಹಿಸುತ್ತದೆ

ರಾಜ್ಯಪಾಲರು ಮಧ್ಯಪ್ರವೇಶಿಸಬೇಕೆಂದು ಎಬಿವಿಪಿ ಮನವಿ ಮಾಡುತ್ತದೆ.

2017ರ ವಿಶ್ವವಿದ್ಯಾಲಯಗಳ ಕಾಯ್ದೆ ಅನೇಕ ಗೊಂದಲಗಳಿಂದ ಕೂಡಿದ್ದು, ಈ ಕಾಯ್ದೆಗೆ ಮಾನ್ಯ ರಾಜ್ಯಪಾಲರು ಒಪ್ಪಿಗೆ ಕೊಡದೇ ಮಧ್ಯಪ್ರವೇಶಿಸಿ ತಿರಸ್ಕರಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿನಂತಿ ಮಾಡುತ್ತದೆ.

ನಮ್ಮ ಬೇಡಿಕೆಗಳು

  1. 2017ರ ವಿಶ್ವವಿದ್ಯಾಲಯಗಳ ಕಾಯ್ದೆ ಸಾಕಷ್ಟು ಗೊಂದಲಗಳಿಂದ ಕೂಡಿರುವುದರಿಂದ ಸರ್ಕಾರ ಈ ಕಾಯ್ದೆಯನ್ನು ವಾಪಸ್ಸು ತೆಗೆದುಕೊಳ್ಳಬೇಕು.
  2. ಶಿಕ್ಷಣ ಸಚಿವರು ದಿನಕ್ಕೊಂದು ಹೇಳಿಕೆ ನೀಡದೆ ನಮ್ಮ ರಾಜ್ಯಕ್ಕೆ ಸಮಗ್ರ ಶಿಕ್ಷಣ ನೀತಿಯನ್ನು ತರುವಲ್ಲಿ ಪ್ರಯತ್ನ ಮಾಡಬೇಕು ಹಾಗೂ ಶಿಕ್ಷಣ, ಉನ್ನತ ಶಿಕ್ಷಣಕ್ಕೋಸ್ಕರ ಸಾಮಾಜಿಕ ಅಭಿಪ್ರಾಯವನ್ನು ರೂಪಿಸಬೇಕು.
  3. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಮಹಾವಿದ್ಯಾಲಯಗಳಲ್ಲಿ ಶೇ 50ರಷ್ಟು ಖಾಲಿ ಇರುವ ಅಧ್ಯಾಪಕ ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಬೇಕು.
  4. ಗೌರವಾನ್ವಿತ ರಾಜ್ಯಪಾಲರು ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ 2017ನ್ನು ಒಪ್ಪಿಗೆ ಕೊಡದೇ ತಿರಸ್ಕಾರ ಮಾಡಬೇಕೆಂದು ಮಾನ್ಯ ರಾಜ್ಯಪಾಲರಲ್ಲಿ ವಿನಂತಿ ಮಾಡುತ್ತದೆ.

Spread the love

Exit mobile version