Home Mangalorean News Kannada News ರಾಜ್ಯದ ಜಾತ್ಯಾತಿತ ತತ್ವದ ಜನಪರ ಆದೇಶಕ್ಕೆ ಗೆಲುವು -ಸುಶೀಲ್ ನೊರೊನ್ಹ

ರಾಜ್ಯದ ಜಾತ್ಯಾತಿತ ತತ್ವದ ಜನಪರ ಆದೇಶಕ್ಕೆ ಗೆಲುವು -ಸುಶೀಲ್ ನೊರೊನ್ಹ

Spread the love

ರಾಜ್ಯದ ಜಾತ್ಯಾತಿತ ತತ್ವದ ಜನಪರ ಆದೇಶಕ್ಕೆ ಗೆಲುವು -ಸುಶೀಲ್ ನೊರೊನ್ಹ

ಕರ್ನಾಟಕದ ಇತಿಹಾಸದಲ್ಲಿ ಮುಖ್ಯಮಂತ್ರಿಯಾಗಿ ತನ್ನ ಹೆಸರಿನಲ್ಲಿಯೇ ಇದ್ದ 7 ದಿನಗಳ ಆಡಳಿತದ ದಾಖಲೆಯನ್ನು ಮುರಿದು 3 ದಿನಗಳ ಮುಖ್ಯಮಂತ್ರಿಯಾಗಿ ಮಾಜಿ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪ ನೂತನ ದಾಖಲೆಯನ್ನು ಸ್ರಷ್ಟಿಸಿದ್ದಾರೆ.

ಬಹುಶ ಮಾಜಿ ಮುಖ್ಯಮಂತ್ರಿಗಳು 2001ರಲ್ಲಿ ಬಿಡುಗಡೆಯಾದ ನಾಯಕ್ ಹಿಂದಿ ಚಿತ್ರದಲ್ಲಿ ಅನಿಲ್ ಕುಮಾರ್ ನಟಿಸಿದ ಒಂದು ದಿನದ ಮುಖ್ಯಮಂತ್ರಿಯಾಗಿ ಕಂಡ ಯಶ್ವಸಿಯನ್ನು ತನ್ನ ನಿಜ ಜೀವನದಲ್ಲಿ ಅಳವಡಿಸಲು ಮುಂದಾದರು. ಏಕಾಏಕಿ ಬಹುಮತವಿಲ್ಲದೆ ಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ತನ್ನ ಯೋಜನೆಯನ್ನು ಜ್ಯಾರಿಗೊಳಿಸಲು ಮುಂದಾದಗ ಅಲ್ಲಿಯೂ ಹೊಡೆತ ಬಿದ್ದು ಕೇವಲ ಒಂದು ದಿನ ಮುಖ್ಯಮಂತ್ರಿ ಆಸನದಲ್ಲಿ ಕೂತು ಏನು ಮಾಡಲಾಗದೆ ರಾಜ್ಯದ ಬೊಕ್ಕಸಕ್ಕೆ ನಷ್ಟವನ್ನು ಉಂಟು ಮಾಡಿದರು.

ಹಗಲು ಕಂಡ ಬಾವಿಯಲ್ಲಿ ರಾತ್ರಿ ಬಿದ್ದಾಗೆ ತನಗೆ ಗೊತ್ತಿದ್ದು ಗೊತ್ತಿಲ್ಲದಾಗೆ ಮಾಡಿ ತನ್ನ ಜೀವನದಲ್ಲಿ ದೊಡ್ಡ ಕಪ್ಪು ಚುಕ್ಕೆಯನ್ನು ಡಕೊಂಡಿದ್ದು ದುರದ್ರಷ್ಟಕರ. ಕರ್ನಾಟಕದ ಜಾತ್ಯತಿತ ತತ್ವದ ಚುನಾಯಿತ ಶಾಸಕರು ಯಾವುದೇ ಅಮಿಶಕ್ಕೆ ಬಲಿಯಾಗದೆ ತಮ್ಮ ಪಕ್ಷದ ಹೈಕಮಾಂಡ್ ನಿಲುವಿಗೆ ಬದ್ದರಾಗಿರುವುದು ಇಡೀ ರಾಷ್ಟ್ರ ರಾಜ್ಯಾಕಾರಣಿಗಳಿಗೆ ಮಾದರಿಯಾಗಿದ್ದಾರೆ.

ಇನ್ನು ಮುಂದೆ ಮಾನ್ಯ ಎಚ್.ಡಿ.ಕುಮಾರಸ್ವಾಮಿ ನಾಯಕತ್ವದಲ್ಲಿ ರಾಜ್ಯಕ್ಕೆ ಉತ್ತಮ ಜನಪರ ದೀನದಲಿತರಿಗೆ ಉತ್ತಮ ಆಡಳಿತ ದೊರಕುವುದರಲ್ಲಿ ಸಂಶಯವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತಿತ ಜನತಾದಳದ ವಕ್ತಾರ ಸುಶೀಲ್ ನೊರೊನ್ಹ ತಿಳಿಸಿದ್ದಾರೆ.


Spread the love

Exit mobile version