ರಾಜ್ಯದ ಮುಜರಾಯಿ ಇಲಾಖೆಗೆ ಸೇರಿದ 34 ಸಾವಿರ ದೇಗುಲದಲ್ಲಿ ವಿಶೇಷ ಪೂಜೆ ~ ಸಚಿವ ರಾಮಲಿಂಗಾ ರೆಡ್ಡಿ
ಉಡುಪಿ: ವಡಭಾಂಡೇಶ್ವರ ದೇಗುಲ ಜೀರ್ಣೋದ್ಧಾರಕ್ಕೆ ಗರಿಷ್ಠ ಅನುದಾನ. ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಭರವಸೆ. ವಡಭಾಂಡೇಶ್ವರ ದೇಗುಲ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು. ಮಲ್ಪೆಯಲ್ಲಿರುವ ಪುರಾಣ ಪ್ರಸಿದ್ಧ ವಡಭಾಂಡೇಶ್ವರ ಬಲರಾಮನ ದೇಗುಲಕ್ಕೆ ಭಾನುವಾರ ಭೇಟಿ ನೀಡಿ, ಜೀರ್ಣೋದ್ಧಾರ ಕಾಮಗಾರಿ ಅವ ಲೋಕಿಸಿ ಮಾತನಾಡಿದರು.
ಆಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾ ಮಹೋತ್ಸವದ ಹಿನ್ನೆಯಲ್ಲಿ ರಾಜ್ಯದ ಮುಜರಾಯಿ ಇಲಾಖೆಗೆ ಸೇರಿದ 34 ಸಾವಿರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲು 15 ದಿನದ ಹಿಂದೆಯೇ ಆದೇಶ ಹೊರಡಿಸಿದ್ದೇನೆ. ರಾಜ್ಯ ಸರ್ಕಾರ ಸಿ ದರ್ಜೆಯ ಎಲ್ಲ ದೇಗುಲವನ್ನು ಅಭಿವೃದ್ಧಿ ಮಾಡಬೇಕಿದೆ. ಆದರೆ, ಗ್ರಾಮಾಂತರ ಪ್ರದೇಶದ ದೇಗುಲಗಳಲ್ಲಿ ಕಡಿಮೆ ಆದಾಯ ಇದ್ದರೂ ಅವುಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಆದ್ಯತೆ ನೀಡುತ್ತೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕ್ರಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ಅಭಿವೃದ್ದಿ ಸಮಿತಿ ಅಧ್ಯಕ್ಷ ನಾಗರಾಜ ಮೂಲಿಗಾರ್, ಕಾರ್ಯದರ್ಶಿ ಶಶಿಧರ ಎಂ. ಅಮೀನ್, ಬೃಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ದೇವಸ್ಥಾನದ ಪ್ರಧಾನ ತಂತ್ರಿ ವೇ ಮೂ ಸುಬ್ರಹ್ಮಣ್ಯ ತಂತ್ರಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ, ದೇವಸ್ಥಾನದ ಮೊಕ್ತೇಸರ ಟಿ ಶ್ರೀನಿವಾಸ್ ಭಟ್, ಅಭಿವೃದ್ಧಿ ಟ್ರಸ್ಟ್ ಗೌರಾವಾಧ್ಯಕ್ಷ ಶ್ರೀಶ ಕಡೆಕಾರ್, ಪ್ರಮುಖರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ನಗರಸಭಾ ಸದಸ್ಯ ಶ್ರೀಶ ಭಟ್, ಕಿಶನ್ ಹೆಗ್ಡೆ ಕೊಳ್ಳೆಬೈಲು, ಪ್ರಖ್ಯಾತ್ ಶೆಟ್ಟಿ, ಗಣೇಶ್ ನೆರ್ಗಿ, ಮೀನಾಕ್ಷಿ ಎಂ., ಸಂಧ್ಯಾ ತಿಲಕ್, ಸದಾನಂದ ಸಾಲ್ಯಾನ್, ಬಾಲಕೃಷ್ಣ, ಅಶೋಕ್ ಕೋಟ್ಯಾನ್, ಮಧು ಚೇತನ್, ವಿನೋದ ಸುವರ್ಣ, ಸುಭಾಸ್ ಮೆಂಡನ್, ಶರತ್ ಬೈಲಕೆರೆ, ಜನಾರ್ದನ್ ಕೊಡವೂರ್ ಇತರರಿದ್ದರು.
ಮಾಧವ ಬನ್ನಂಜೆ ಸ್ವಾಗತಿಸಿದರು. ಬ್ರಹ್ಮ ಕಲಶೋತ್ಸವ ಸಮಿತಿ ಕಾರ್ಯದರ್ಶಿ ಪ್ರಕಾಶ್ ಜಿ. ಕೊಡವೂರು ಕಾಯ೯ಕ್ರಮ ನಿರೂಪಿಸಿದರು.