ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕ ಬಜೆಟ್ – ಪ್ರಸಾದ್ ರಾಜ್ ಕಾಂಚನ್
ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಹೇಳಿದ್ದಾರೆ.
ಬಜೆಟ್ ನಲ್ಲಿ ಸಿದ್ದರಾಮಯ್ಯ ನವರ ನೇತೃತ್ವದ ಕರ್ನಾಟಕ ಸರಕಾರ 409549ಲಕ್ಷ ರೂಪಾಯಿ ಘೊಷಿಸಿರುವುದು ಸ್ವಾಗತಾರ್ಹ. ಮೀನುಗಾರಿಕಾ ಕ್ಷೇತ್ರಕ್ಕೆ ರೂ 3977 ಕೋಟಿ ಘೋಷಿಸಿದ್ದು ಮುಂದಿನ ಪೀಳಿಗೆಗಳಿಗೆ ಕೈಗಾರಿಕೆಗಳ ಸ್ಥಾಪನೆ ಅವಶ್ಯವಾಗಿರುವ 4.0 lab ಸ್ಥಾಪಿಸುವ ಮೂಲಕ ಕೈಗಾರಿಕಾ ಕ್ರಾಂತಿಗೆ ಚಾಲನೆ ನೀಡಿದ್ದಾರೆ.
ಸ್ಥಳೀಯ ಮಟ್ಟದಲ್ಲಿ ನಾವೀನ್ಯತೆ ಮತ್ತು ಉದ್ಯಮ ಶೀಲತೆಯನ್ನು ಉತ್ತೇಜಿಸಲು ವರ್ಷಕ್ಕೆ 200ಕೋಟಿ ರೂಪಾಯಿ ಅನುದಾನದಿಂದ 5ಲಕ್ಷ ಹೊಸ ಉದ್ಯೋಗ ಸೃಷ್ಟಿಸಲು ದೂರ ದೃಷ್ಟಿಯಲ್ಲಿ ಆಲೋಚಿಸಿದ ಸರಕಾರದ ಯೋಜನೆಗೆ ಕಾಂಚನ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.