ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದಾಖಲೆ ಮಾಡಿದ ಮಂಗಳೂರಿನ ವಿ ಒನ್ ಆಕ್ವಾ ಸೆಂಟರ ನ ಆಲಿಸ್ಟರ್ ಸಾಮುಯಲ್ ರೇಗೋ

Spread the love

ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದಾಖಲೆ ಮಾಡಿದ ಮಂಗಳೂರಿನ ವಿ ಒನ್ ಆಕ್ವಾ ಸೆಂಟರ ನ ಆಲಿಸ್ಟರ್ ಸಾಮುಯಲ್ ರೇಗೋ

ಮಂಗಳೂರು: ಕರ್ನಾಟಕ ರಾಜ್ಯ ಈಜು ಸಂಸ್ಥೆಯ ಆಶ್ರಯದಲ್ಲಿ ಉಡುಪಿಯಲ್ಲಿ ಜರುಗುತ್ತಿರುವ ರಾಜ್ಯಮಟ್ಟದ ಶಾರ್ಟ್ ಕೋರ್ಸ್ ಈಜು ಸ್ಪರ್ಧೆಯಲ್ಲಿ ಡಿಸೆಂಬರ್ 6 ರಿಂದ ಆರಂಭಗೊಂಡು ಡಿಸೆಂಬರ್ 10ರ ತನಕ ಜರಗಲಿದೆ.

ಈ ಸ್ಪರ್ಧೆಯ ಮೂರನೇ ದಿನದ ಗುಂಪು 1ರ 200 ಮೀಟರ್ ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ ಮಂಗಳೂರಿನ ಸೇಂಟ್ ಎಲೋಷಿಯಸ್ ಕಾಲೇಜಿನ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿರುವ ಈಜುಪಟು ಅಲಿಸ್ಟರ್ ಸಾಮುಯ್ಯಲ್ ರೇಗೋ ಇವರು ಡಾಲ್ಫಿನ್ ಆಕ್ವಾಟಿಕ್ ತಂಡವನ್ನು ಪ್ರತಿನಿಧಿಸಿ ನೂತನ ದಾಖಲೆಯನ್ನು ನಿರ್ಮಿಸಿದ್ದಾರೆ ಇವರು 2019ರಲ್ಲಿ ಮಂಡ್ಯದಲ್ಲಿ ಜರಗಿದ ಈಜು ಸ್ಪರ್ಧೆಯಲ್ಲಿ, ಬಸವನಗುಡಿ ಈಜು ಸಂಸ್ಥೆಯ ಈಜು ಪಟು ಮೋಹಿತ್ ವೆಂಕಟೇಶ್ ಇವರು ನಿರ್ಮಿಸಿದ್ದ ದಾಖಲೆಯನ್ನು ಮುರಿದರು.

ಬೆಂಗಳೂರಿನ ಡಾಲ್ಫಿನ್ ಅಕ್ವಟಿಕ್ ತಂಡದ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ನಿಹಾರ್ ಅಮೀನ್ ಹಾಗೂ ಮಧು ಕುಮಾರ್ ಇವರ ಮಾರ್ಗದರ್ಶನದಲ್ಲಿ ಮುಖ್ಯ ತರಬೇತುದಾರ ಲೋಕರಾಜ್ ವಿ ಎಸ್ ವಿಟ್ಲ ಹಾಗೂ ಸ್ಯಾಂಜೋ ಕೆ ಪಿ ಇವರಲ್ಲಿ ಮಂಗಳೂರಿನ ಸಂತ ಎಲೋಷಿಯಸ್ ಕಾಲೇಜಿನ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಇವರು ಶರ್ಲಿ ರೇಗೂ ಹಾಗೂ ವಿಕ್ಟರ್ ರೇಗೋ ದಂಪತಿಗಳ ಪುತ್ರ. ಪ್ರಸ್ತುತ ಸೇಂಟ್ ಎಲೋಷಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ

ಈ ಸಾಧನೆಯನ್ನ ಸಂತ ಎಲೋಷಿಯಸ್ ಸಮೂಹ ಸಂಸ್ಥೆಗಳ ರೆಕ್ಟರ್ ಫಾದರ್ ಮೆಲ್ವಿನ್ ಪಿಂಟೋ ಹಾಗೂ ವಿವನ್ ಎಕ್ವ ಸೆಂಟರ್ ನ ಡೈರೆಕ್ಟರ್ ನವೀನ್ ಹಾಗೂ ರೂಪ ಇವರು ಅಭಿನಂದಿಸಿದ್ದಾರೆ


Spread the love