Home Mangalorean News Kannada News ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ: ಮೇಲುಗೈ ಸಾಧಿಸುತ್ತಿರುವ ದಕ  ವಿದ್ಯಾರ್ಥಿಗಳು

ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ: ಮೇಲುಗೈ ಸಾಧಿಸುತ್ತಿರುವ ದಕ  ವಿದ್ಯಾರ್ಥಿಗಳು

Spread the love

ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ: ಮೇಲುಗೈ ಸಾಧಿಸುತ್ತಿರುವ ದಕ  ವಿದ್ಯಾರ್ಥಿಗಳು

ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರದ ಎಸ್.ಎಂ.ಎಸ್ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕ್ರೀಡಾಕೂಟದ ಎರಡನೇ ದಿನವೂ ದಕ್ಷಿಣಕನ್ನಡ ವಿದ್ಯಾರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

5ಕಿ.ಮೀ ನಡಿಗೆಯಲ್ಲಿ ಬಾಲಕರ ವಿಭಾಗದಲ್ಲಿ ಮಂಡ್ದ ಚಂದನ್ ಗೌಡ ಎಚ್ ಪ್ರಥಮ, ಚಿಕ್ಕೋಡಿಯ ಲಕ್ಷ್ಮಣ ಕುಗಾತೋಲಿ ದ್ವಿತೀಯ ಮತ್ತು ಮೈಸೂರಿನ ಮದನ್ ಕುಮಾರ್ ಎಸ್ ಎಂ ತೃತೀಯ ಸ್ಥಾನ ಪಡೆದರೆ, ಬಾಲಕಿಯರ ವಿಭಾಗದ 3 ಕಿ.ಮೀ ವಿಭಾಗದಲ್ಲಿ ಬೆಂಗಳೂರು ದಕ್ಷಿಣದ ಹಿತಾಶ್ರೀ ಪ್ರಥಮ, ದಕ್ಷಿಣಕನ್ನಡದ ರಕ್ಷಿತಾ ದ್ವಿತೀಯ ಮತ್ತು ರಾಮನಗರದ ವಿನುತಾ ಶ್ರೀ ತೃತೀಯ ಸ್ಥಾನ ಪಡೆದರು. ಬಾಲಕರ ವಿಭಾಗದ ಉದ್ದಜಿಗಿತದಲ್ಲಿ ಉಡುಪಿಯ ಸುನ್ನಿ ಅಂತೋನಿ ಡಿಸೋಜಾ ಪ್ರಥಮ, ಉತ್ತರಕನ್ನಡದ ಪ್ರಮೋದ್ ಅಂಬಿಗ ದ್ವಿತೀಯ ಮತ್ತು ದ.ಕದ ಮಹಮ್ಮದ್ ಅಜ್ಮಲ್ ತೃತೀಯ ಸ್ಥಾನ ಪಡೆದರು.

ಬಾಲಕರ ಹ್ಯಾಮರ್ ಥ್ರೋ ವಿಭಾಗದಲ್ಲಿ ದ.ಕದ ರಾಹುಲ್ ರಾಮ ತೋರಾಸೆ ಪ್ರಥಮ, ದ.ಕದ ಪ್ರವೀಣ್ ದ್ವಿತೀಯ ಮತ್ತು ಬಳ್ಳಾರಿಯ ಕೆ.ವೈ ಯಶವಂತ್ ತೃತೀಯ ಸ್ಥಾನ ಪಡೆದಿರುತ್ತಾರೆ. ಬಾಲಕರ ಪೆÇೀಲ್ ವಾಲ್ಟ್‍ನಲ್ಲಿ ದ.ಕದ ಮನ್ನತ್ ಎಚ್ ಗೌಡ ಪ್ರಥಮ, ದ.ಕದ ಭವಿತ್ ಕುಮಾರ್ ದ್ವಿತೀಯ ಮತ್ತು ಉಡುಪಿಯ ಪ್ರಹ್ಲಾದ್ ತೃತೀಯ ಸ್ಥಾನ ಪಡೆದರು. ಬಾಲಕಿಯರ ಪೆÇೀಲ್ ವಾಲ್ಟ್‍ನಲ್ಲಿ ದ.ಕದ ರಚನಾ ಆರ್ ಪ್ರಥಮ,ದ.ಕದ ಸಿಂಧೂ ರಘುಪತಿ ದ್ವಿತೀಯ ಸ್ಥಾನ ಪಡೆದರು.

ಬಾಲಕಿಯರ ಗುಂಡು ಎಸೆತವಿಭಾಗದಲ್ಲಿ ಮೈಸೂರಿನ ಅಂಬಿಕಾ ವಿ ಪ್ರಥಮ, ದ.ಕ ದ ಸಾಕ್ಷಿಕುಂದಾಪುರ ದ್ವಿತೀಯ ಮತ್ತು ಉ.ಕದ ರಹಾತ್ ಸೈಯಿದ್ ತೃತೀಯ ಸ್ಥಾನ ಪಡೆದರು. ಬಾಲಕರ 110ಮೀ.ಹರ್ಡಲ್ಸ್ ನಲ್ಲಿ ದ.ಕದ ಶ್ರವಣ್ ಎಸ್ ಉಲ್ಲಾಳ್ ಪ್ರಥಮ, ದ.ಕದ ದಯಾನಂದ್ ಜಾನ್ ಪಿ.ಜೆ ದ್ವಿತೀಯ ಮತ್ತು ಉಡುಪಿಯ ಸುಶಾಂತ್ ಎಂ.ಡಿ, 3000ಮೀ.ಹರ್ಡಲ್ಸ್‍ನಲ್ಲಿ ದ.ಕದ ಮಿಲನ್ ಎಂ.ಸಿ ಪ್ರಥಮ, ಬೆಳಗಾವಿಯ ಬಸಪ್ಪ ಮಲಂಗಿ ದ್ವಿತೀಯ ಮತ್ತು ಮೈಸೂರಿನ ನೀಲೇಶ್ ತೃತೀಯ ಸ್ಥಾನ ಪಡೆದರು.

ಬಾಲಕಿಯರ 3000ಮೀ.ಓಟದಲ್ಲಿ ಬೆಂಗಳೂರು ಉತ್ತರದ ಲಿಷಾ ಆರ್ ಪ್ರಥಮ, ಹರ್ಷಿತಾ ದ್ವಿತೀಯ ಮತ್ತು ಮೈಸೂರಿನ ಪಲ್ಲವಿ ಜಿ ಅಪ್ಪನಬಾಳ್ ತೃತೀಯ ಸ್ಥಾನ ಪಡೆದರು. ಬಾಲಕರ 4×100ರಿಲೇಯಲ್ಲಿ ಉಡುಪಿ ಪ್ರಥಮ, ದ.ಕ ದ್ವಿತೀಯ ಮತ್ತು ಬಳ್ಳಾರಿ ತೃತೀಯ ಸ್ಥಾನ ಪಡೆಯಿತು.

 


Spread the love

Exit mobile version