ರಾಜ್ಯ ಸರಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಶಾಹುಲ್ ಹಮೀದ್ ನೇಮಕ

Spread the love

ರಾಜ್ಯ ಸರಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಶಾಹುಲ್ ಹಮೀದ್ ನೇಮಕ

ಮಂಗಳೂರು: ಕರ್ನಾಟಕ ಸರಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನ್ಯಾಯವಾದಿ ಶಾಹುಲ್ ಹಮೀದ್ ರೆಹಮಾನ್ ಅವರನ್ನು ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಈ ಆದೇಶವನ್ನು ಹೊರಡಿಸಿದೆ. ದಿವಂಗತ ಕೆ. ಅಬ್ದುಲ್ ರಹಿಮಾನ್ ಮತ್ತು ನೆಬಿಸಾ ದಂಪತಿಯ ಪುತ್ರನಾದ ನ್ಯಾಯವಾದಿ ಶಾಹುಲ್ ಹಮೀದ್ ರೆಹಮಾನ್, ಮಂಗಳೂರು ಎಸ್ ಡಿಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದುಕೊಂಡಿದ್ದಾರೆ.

ಶಾಹುಲ್ ಹಮೀದ್ ರೆಹಮಾನ್ ಮಾಜಿ ಅಡ್ವೊಕೇಟ್ ಜನರಲ್ ಶ್ರೀ ಬಿ.ವಿ. ಆಚಾರ್ಯ ಅವರ ಬಳಿ ವಕೀಲರಾಗಿ ಅಭ್ಯಾಸ ಮಾಡಿದ್ದರು.


Spread the love