ರಾಜ್ಯ ಸರಕಾರ ಗಲಭೆಗಳ ಮೂಲಕ ಹಿಂದೂ ಹಬ್ಬಗಳನ್ನು ನಿಯಂತ್ರಿಸಲು ಹೊರಟಿದೆ – ಸಂಸದ ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಗಲಭೆಗಳ ಮೂಲಕ ಗಣೇಶೋತ್ಸವ, ಹಿಂದುಗಳ ಹಬ್ಬವನ್ನು ಕಾಂಗ್ರೆಸ್ ನಿಯಂತ್ರಣ ಮಾಡಲು ಹೊರಟಿದೆ ಎಂದು ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಗೃಹ ಸಚಿವ ಪರಮೇಶ್ವರ ಮೇಲೆ ಹಿಂದೆ ಗೌರವ ಇತ್ತು. ಗೃಹಸಚಿವರಾಗಿ ಗಲಾಟೆ ದೊಂಬಿ ನಡೆದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ನಂಬಿದ್ದೇವು ಆದರೆ ಅದು ಸುಳ್ಳು ಎನ್ನುವುದು ಸಾಬೀತಾಗಿದೆ. ಮಂಡ್ಯದಲ್ಲಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೋರಿ ಹಿಂದೂ ಭಕ್ತರ ಅಂಗಡಿಗಳಿಗೆ ಬೆಂಕಿ ಇಡಲಾಗಿದೆ. ಗಣೇಶ ಭಕ್ತರನ್ನು ಪೊಲೀಸರು ಆರೋಪಿಗಳನ್ನಾಗಿ ಮಾಡಿದ್ದಾರೆ ಇದು ಖಂಡನೀಯ ಎಂದರು.
ಆಕಸ್ಮಿಕವಾಗಿ ಕಲ್ಲು ಹೊಡೆದಿದ್ದಾರೆ ಗಾಳಿಯಲ್ಲಿ ಕಲ್ಲು ಬಂತು ಎಂದು ಗೃಹಮಂತ್ರಿ ಹೇಳುತ್ತಾರೆ. ನಮ್ಮ ರಾಜ್ಯವನ್ನು ರಕ್ಷಣೆ ಮಾಡಲು ಯಾರಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ. ಗಣೇಶೋತ್ಸವ, ಹಿಂದುಗಳ ಹಬ್ಬವನ್ನು ಕಾಂಗ್ರೆಸ್ ನಿಯಂತ್ರಣ ಮಾಡಲು ಹೊರಟಿದೆ. ಹಿಂದುಗಳ ಹಬ್ಬದ ವಿಚಾರದಲ್ಲಿ ಅಗೋಚರವಾದ ಕಾರ್ಯತಂತ್ರ ರೂಪಿಸಲಾಗಿದೆ. ಗಣೇಶೋತ್ಸವಕ್ಕೆ ಹಲವು ನಿರ್ಬಂಧಗಳನ್ನು ಹಾಕಲಾಗಿತ್ತು. ಮೆರವಣಿಗೆ ಮತ್ತು ಧ್ವನಿವರ್ಧಕಗಳಿಗೆ ಸರ್ಕಾರ ನಿಯಂತ್ರಣ ಹಾಕಿದೆ ಎಂದರು.
ಗಲಭೆಯಲ್ಲಿ ಗಣೇಶೋತ್ಸವ ಕಾರ್ಯಕ್ರಮದ ಆಯೋಜಕ ಕಿರಣ್ ಅವರನ್ನು ಎ1 ಆರೋಪಿ ಮಾಡಲಾಗಿದೆ . ಕಲ್ಲು ಹೊಡೆದವರು ಅಮಾಯಕರು ಮತ್ತು ಅಸಹಾಯಕರು ಎಂದು ಹೇಳಲಾಗಿದೆ ಇದು ಯಾವ ನ್ಯಾಯ?
ಸರಕಾರದ ಒಂದೊಂದು ನಿಲುವು ಸಂಶಯ ಹುಟ್ಟಿಸುತ್ತಿದೆ . ಬಹುಸಂಖ್ಯಾತರಿಂದ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವನ್ನು ನಾವು ಲೋಕದಲ್ಲಿ ಕೇಳಿದ್ದೇವೆ. ಕರ್ನಾಟಕದಲ್ಲಿ ಅಲ್ಪಸಂಖ್ಯಾತರು ಬಹುಸಂಖ್ಯಾತರ ಬದುಕಲು ಆಗದ ಪರಿಸ್ಥಿತಿ ನಿರ್ಮಿಸಿದ್ದಾರೆ. ಕರ್ನಾಟಕ ಸರ್ಕಾರ ಅವರಿಗೆ ರಕ್ಷಣೆ ಕೊಡುತ್ತಿದೆ ಎಂದರು.
ಶಿಕ್ಷಕರ ಪ್ರಶಸ್ತಿ ನೀಡುವಿಕೆಯಲ್ಲಿ ಅನ್ಯಾಯ ಆಗಿದೆ ಎಂದ ಉಡುಪಿ ಶಾಸಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ. ಮಣಿಪಾಲದ ವಿದ್ಯಾರ್ಥಿನಿ ತನಗಾದ ದೌರ್ಜನ್ಯವನ್ನು ಎನ್ ಐ ಎ ತನಿಖೆ ಮಾಡಬೇಕು ಎನ್ನುತ್ತಾಳೆ. ಸರ್ಕಾರದ ಮೇಲೆ ಜನ ನಂಬಿಕೆಯನ್ನು ಕಳೆದು ಕೊಂಡ್ರೆ ನಾವು ಬೀದಿಗೆ ಇಳಿಬೇಕಾಗುತ್ತದೆ. ರಾಜ್ಯಾದ್ಯಂತ ಹೋರಾಟದ ರೂಪುರೇಷೆಯನ್ನು ಮಾಡುತ್ತೇವೆ ಎಂದರು.