Home Mangalorean News Kannada News ರಾಮಕೃಷ್ಣ ಮಿಶನ್ ವತಿಯಿಂದ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಅಭಿಯಾನ

ರಾಮಕೃಷ್ಣ ಮಿಶನ್ ವತಿಯಿಂದ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಅಭಿಯಾನ

Spread the love

ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ 40 ವಾರಗಳ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಕಾರ್ಯಕ್ರಮದ 14ನೇ ವಾರದ ಸ್ವಚ್ಚತಾ ಅಭಿಯಾನವನ್ನು ಭಾನುವಾರ ನಂದಿಗುಡ್ಡೆ ಪರಿಸರದಲ್ಲಿ ಕೈಗೊಳ್ಳಲಾಯಿತು. ಬೆಳಿಗ್ಗೆ 7-30ಕ್ಕೆ ಸರಿಯಾಗಿಕೋಟಿ ಚೆನ್ನಯ್ಯ ವೃತ್ತದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಆಶ್ರಮದ ಮುಖ್ಯಸ್ಥರಾದ ಸ್ವಾಮಿಜಿತಕಾಮಾನಂದಜಿಯವರಸಾನಿಧ್ಯದಲ್ಲಿ ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ಕಾತ್ಯಾಯಿನಿ ಮತ್ತು ನಖ್ರೆ ಸುರೇಂದ್ರ ಶೆಟ್ಟಿ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ಸ್ವಚ್ಛ ಮಂಗಳೂರು ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ಗಣೇಶ್ಕಾರ್ನಿಕ್ ಮುಂದಾಳುತನದಲ್ಲಿ ಸ್ವಯಂ ಸೇವಕರು, ರಾಮಕೃಷ್ಣ ಮಿಷನ್ ಬಾಲಕಾಶ್ರಮದ ವಿದ್ಯಾರ್ಥಿಗಳು, ಮನಪಾ ಪೌರಕಾರ್ಮಿಕರು, ಸಾರ್ವಜನಿಕರು, ಹಿತೈಷಿಗಳು ಸ್ವಚ್ಚತಾಕೈಂಕರ್ಯದಲ್ಲಿ ಭಾಗವಹಿಸಿದರು.

ramakrishna_swachbharath 02-05-2015 10-06-09

ಕೋಟಿಚೆನ್ನಯ್ಯ ವೃತ್ತದಲ್ಲಿ ಸ್ವಾಮಿಜಿತಕಾಮಾನಂದಜಿ, ಕ್ಯಾ. ಗಣೇಶ್ ಕಾರ್ಣಿಕ್ ಪೊರಕೆ ಹಿಡಿದು ಸ್ವಚ್ಛತಾಕಾರ್ಯ ನಡೆಸಿದರು. ಅಲ್ಲಿಂದ ಪ್ರಾರಂಭವಾದಅಭಿಯಾನ ನಂದಿಗುಡ್ಡೆ ಬಸ್ ತಂಗುದಾಣ ಶಾಂತಿನಗದಜೆಪ್ಪು ಬಸ್ ತಂಗುದಾಣದ ಮೂಲಕ ಮಾರ್ನಮಿಕಟ್ಟೆಯವರೆಗೆ ಸಾಗಿತು. ಅಲ್ಲಲ್ಲಿ ಹರಡಿಕೊಂಡಿದ್ದ ರಾಶಿ ರಾಶಿ ಕಸವನ್ನು ಮಹಾನಗರ ಪಾಲಿಕೆಯ ಪೌರಕಾರ್ಮಿಕರ ಸಹಾಯದಿಂದ ಶುಚಿಗೊಳಿಸಲಾಗಿದೆ. ಬಾಲಕಾಶ್ರಮದ ವಿದ್ಯಾರ್ಥಿಗಳು ಪ್ಲಾಸ್ಟಿಕ್, ಪೇಪರ್ ಹೆಕ್ಕಿದರು. ಇದೇ ವೇಳೆ ನಂದಿಗುಡ್ಡೆ ಮತ್ತು ಶಾಂತಿನಗರ ಬಸ್ನಿಲ್ದಾಣವನ್ನು ಶುಚಿಗೊಳಿಸಿ ಬಣ್ಣಬಳಿದು ಸುಂದರಗೊಳಿಸಿದರು. ಮನಪಾ ಸದಸ್ಯ ಪ್ರೇಮಾನಂದ ಶೆಟ್ಟಿ, ಸುರೇಶ್ ಶೆಟ್ಟಿ, ಸುಭೋದಯ ಆಳ್ವ, ಅಭಿಯಾನ ಸಂಯೋಜಕ ದಿಲ್ರಾಜ್ ಆಳ್ವ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.


Spread the love

Exit mobile version