Home Mangalorean News Kannada News ರಾಮಕೃಷ್ಣ ಮಿಷನ್ ಆಶ್ರಯದ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು 29ನೇ ಅಭಿಯಾನದ ವರದಿ

ರಾಮಕೃಷ್ಣ ಮಿಷನ್ ಆಶ್ರಯದ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು 29ನೇ ಅಭಿಯಾನದ ವರದಿ

Spread the love

ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದ 40ವಾರಗಳ “ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು” ಕಾರ್ಯಕ್ರಮದ 29ನೇ ಅಭಿಯಾನವನ್ನು ದಿನಾಂಕ 6-12-2015 ರಂದು ನಗರದ ನಾಗುರಿ ಪ್ರದೇಶದಲ್ಲಿ ಆಯೋಜಿಸಲಾಗಿತ್ತು. ಬೆಳಿಗ್ಗೆ 7:30 ಕ್ಕೆ ಸರಿಯಾಗಿ ಮಠದ ಅಧ್ಯಕ್ಷರಾದ ಸ್ವಾಮಿಜಿತಕಾಮಾನಂದಜಿ ಹಾಗೂ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉಪಸ್ಥಿತಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮನಪಾ ಸದಸ್ಯ ಪ್ರವೀಣಚಂದ್ರ ಆಳ್ವ ಹಾಗೂ ಗರೋಡಿ ಬಿಲ್ಲವ ಸಂಘದ ಅಧ್ಯಕ್ಷ ಶ್ರೀಮಹಾಬಲ ಇವರು 29ನೇ ಸ್ವಚ್ಛತಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.

RamaKrishnaMission-06122015 (17)

ಸ್ವಚ್ಚತೆ: ಬೆಳಿಗ್ಗೆ 7:30 ರಿಂದ 10:00 ಗಂಟೆಯವರೆಗೆ ನಾಗುರಿ ಅಕ್ಕಪಕ್ಕದ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು. ನಾಗುರಿಯ ಎರಡು ಬಸ್ ತಂಗುದಾಣಗಳು, ಕೂಡು ರಸ್ತೆಯ ಇಕ್ಕೆಲಗಳು, ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ, ಸಾಯಿ ಮಂದಿರಕ್ಕೆ ಹೋಗುವ ದಾರಿಯಲ್ಲಿ ಸ್ವಯಂ ಸೇವಕರು ಸ್ವಚ್ಛತಾ ಕಾರ್ಯ ಕೈಗೊಂಡರು. ಮೂರು ರಸ್ತೆಗಳಲ್ಲಿ ಬೆಳೆದಿದ್ದ ಹುಲ್ಲನ್ನು ಕಳೆಯನ್ನು ಕಳೆಕೊಚ್ಚುವ ಯಂತ್ರವನ್ನು ಬಳಸಿ ಕತ್ತರಿಸಲಾಗಿದೆ. ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮುಂದಾಳತ್ವದಲ್ಲಿ ನಾಗುರಿ ಬಸ್ ತಂಗುದಾಣದ ಬಳಿ ಅನೇಕ ವರ್ಷಗಳಿಂದ ಸಂಗ್ರಹವಾಗಿ ರಾಶಿ ರಾಶಿಯಾಗಿ ಬಿದ್ದಿದ್ದ ತ್ಯಾಜ್ಯ ರಾಶಿಗಳನ್ನು ಜೆಸಿಬಿ ಹಾಗೂ ಕಾರ್ಯಕರ್ತರು ಸೇರಿ ಹಸನುಗೊಳಿಸಿದ್ದಾರೆ. ಅಲ್ಲದೇ ಅಲ್ಲಿದ ಅಪಾಯಕಾರಿಯಾಗಿದ್ದ ತೆರೆದ ಚರಂಡಿಯೊಂದು ಹೊಲಸು ತುಂಬಿ ಅಸಹ್ಯ ಹುಟ್ಟಿಸುತ್ತಿತ್ತು ಅದನ್ನು ಇಂದು ಕಲ್ಲು ಚಪ್ಪಡಿಗಳನ್ನು ಬಳಸಿ ಮುಚ್ಚಲಾಗಿದೆ.

ಬಸ್ ತಂಗುದಾಣಗಳ ಸೌಂದರ್ಯೀಕರಣ :ನಗರದ ಅನೇಕ ಕಡೆಗಳಲ್ಲಿ ಈಗಾಗಲೇ ಬಸ್ ತಂಗುದಾಣಗಳನ್ನು ಶುಚಿಗೊಳಿಸಿ ಸುಣ್ಣ ಬಣ್ಣ ಹಚ್ಚಿ ಸುಂದರಗೊಳಿಸಿರುವಂತೆ ಇಂದೂ ಎರಡು ಬಸ್ ಶೆಲ್ಟರ್‍ಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಳಿದು ಅಂದಗೊಳಿಸಲಾಗಿದೆ. ಮೊದಲಿಗೆ ತಂಗುದಾಣಗಳಲ್ಲಿ ಅಂಟಿಸಿದ್ದ ಭಿತ್ತಿಚಿತ್ರಗಳನ್ನು ತೆಗೆದು ಕಸಗೂಡಿಸಿ ಶುಚಿಗೊಳಿದ ತರುವಾಯ ಮಠದ ಅಧ್ಯಕ್ಷರಾದ ಸ್ವಾಮಿಜಿತಕಾಮಾನಂದಜಿ ಸ್ವತ: ಸ್ವಯಂ ಸೇವಕರಿಗೆ ಮಾರ್ಗದರ್ಶಿಸಿ ತಾವೇ ಬಣ್ಣ ಬಳಿಯುತ್ತಿದ್ದ ದೃಶ್ಯ ಕಾರ್ಯಕರ್ತರಿಗೆ ಸ್ಫೂರ್ತಿ ತುಂಬುತ್ತಿತ್ತು.
ಕಲ್ಲುಚಪ್ಪಡಿ ಮುಕ್ತ ಸಾಯಿ ಮಂದಿರರಸ್ತೆ : ನಾಗುರಿ ಸಾಯಿ ಮಂದಿರಕ್ಕೆ ಹೋಗುವ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಬಿದ್ದಿದ್ದ ಚಪ್ಪಡಿ ಕಲ್ಲುಗಳು ರಸ್ತೆಯ ಅರ್ಧಭಾಗವನ್ನೇ ಆಕ್ರಮಿಸಿಕೊಂಡಿದ್ದವು. ತನ್ಮೂಲಕ ವಾಹನ ಸಂಚಾರ ಹಾಗೂ ದಾರಿಹೋಕರಿಗೆ ಕಷ್ಟವಾಗುವುದನ್ನು ಕಂಡು ಸ್ವಚ್ಛ ಮಂಗಳೂರು ಸ್ವಯಂ ಸೇವಕರು ಹಾಗೂ ರಥಬೀದಿ ಸರಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳು ಹಿರಿಯ ಕಾರ್ಯಕರ್ತರಾದ ಶ್ರೀ ಸುರೇಶ್ ಶೆಟ್ಟಿ ಹಾಗೂ ಸತ್ಯನಾರಾಯಣ ಕೆ ವಿ ನೇತೃತ್ವದಲ್ಲಿ ಚಪ್ಪಡಿಕಲ್ಲುಗಲನ್ನು ತೆರವುಗೊಳಿಸಿ ದಾರಿಯನ್ನು ಸ್ವಚ್ಛಗೊಳಿಸಿದರು.

ಮೂರು ಮಾರ್ಗಸೂಚಿ ಫಲಕಗಳ ನವೀಕರಣ: ಎಂದಿನಂತೆ ಮಾರ್ಗಸೂಚಿ ಫಲಕಗಳ ನವೀಕರಣ ಇಂದೂ ನಡೆಯಿತು. ನಾಗುರಿ ಪ್ರದೇಶವನ್ನು ಗುರುತಿಸುವ ರಸ್ತೆ ಬದಿಯಲ್ಲಿಯ ದೊಡ್ಡದಾದ ಫಲಕ ಅಸ್ಪಷ್ಟವಾಗಿತ್ತು. ಅದನ್ನಿಂದು ಹಳದಿ ಕಪ್ಪು ಬಣ್ಣಗಳಿಂದ ಚೆಂದದ ಅಕ್ಷರಗಳಿಂದ ಬರೆಯಿಸಲಾಗಿದೆ. ಅಲ್ಲದೇ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಮಾರ್ಗವನ್ನು ಸೂಚಿಸುವ ಫಲಕ ಮಾಸಿ ಹೋಗಿತ್ತಾದ್ದರಿಂದ ಅದನ್ನು ನೂತನವಾಗಿ ಬರೆಯಿಸಲಾಗಿದೆ. ಅಲ್ಲದೇ ಸಾಯಿ ಮಂದಿರಕ್ಕೆ ಹೋಗುವ ರಸ್ತೆಯನ್ನು ಸೂಚಿಸುವಂತೆ ನೂತನ ಮಾರ್ಗಸೂಚಿ ಫಲಕವನ್ನು ಅಳವಡಿಸಲಾಗಿದೆ.

ಸದಾಶಿವ ಕಾಮತ್ ಮುಂದಾಳುತನದಲ್ಲಿ ಆರ್ಟ್ ಆಫ್ ಲೀವಿಂಗನ ಸದಸ್ಯರು, ಗರೋಡಿ ದೇವಸ್ಥಾನದ ವ್ಯವಸ್ಥಾಪಕ ಶ್ರೀ ಕಿಶೋರ ಕುಮಾರ ನೇತೃತ್ವದಲ್ಲಿ ಅವರ ತಂಡ, ಉಪನ್ಯಾಸಕ ಮಹೇಶ್ ಕೆ ಬಿ ಹಾಗೂ ಅವರ ವಿದ್ಯಾರ್ಥಿಗಳು, ಮರೋಳಿ-ಗರೋಡಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗಾಭ್ಯಾಸಿಗಳು, ರಾಮಕೃಷ್ಣ ಮಿಷನ್‍ನ ನಿವೇದಿತ ಬಳಗ ಸ್ವಚ್ಛತಾ ಅಭಿಯಾನದಲ್ಲಿ ಕೈಜೋಡಿಸಿದರು. ಪ್ರಮುಖರಾದ ಮನಪಾ ಸದಸ್ಯೆ ಆಶಾ ಡಿಸಿಲ್ವ, ಭಾಸ್ಕರ ಚಂದ್ರ ಶೆಟ್ಟಿ, ಕೊಡಂಗೈ ಶ್ರೀಬಾಲಕೃಷ್ಣ ನಾಯಕ್, ಪೆÇ್ರೀ. ಶೇಷಪ್ಪ ಅಮೀನ್, ಹಾಗೂ ಸಹಕಾರ ಯೂನಿಯನ ಅಧ್ಯಕ್ಷ ಹರೀಶ್ ಆಚಾರ ಮತ್ತಿತರರು ಸ್ವಚ್ಛ ಮಂಗಳೂರು ಕಾರ್ಯಕ್ರಮದಲ್ಲಿ ಭಗವಹಿಸಿದ್ದರು. ಈ ಅಭಿಯಾನಕ್ಕೆ ಮಹಾಪೆÇೀಷಕರಾಗಿ ಎಂಆರ್‍ಪಿಎಲ್ ಸಂಸ್ಥೆ ತನ್ನ ಸಹಾಯ ಸಹಕಾರ ನೀಡುತ್ತಿದೆ.


Spread the love

Exit mobile version