ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಚ ಮಂಗಳೂರು ಅಭಿಯಾನದ 6ನೇ ಭಾನುವಾರದ ವರದಿ

Spread the love

ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಚ ಮಂಗಳೂರು ಅಭಿಯಾನದ 6ನೇ ಭಾನುವಾರದ ವರದಿ

ಮಂಗಳೂರು : ನಾಲ್ಕನೇ ಹಂತದ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾ£ದ 6ನೇ ವಾರದ ಸ್ವಚ್ಛತಾ ಕಾರ್ಯ 10ನೇ ಡಿಸೆಂಬರ್ 2017 ಭಾನುವಾರದಂದು ಜ್ಯೋತಿ ವೃತ್ತ ಹಾಗೂ ಬಲ್ಮಠ ಮುಖ್ಯ ರಸ್ತೆಯಲ್ಲಿ ಜರುಗಿತು. ಸ್ವಾಮಿ ಜಿತಕಾಮಾನಂದಜಿ ಸಾನಿಧ್ಯದಲ್ಲಿ ಮನಪಾ ಸದಸ್ಯ ಶ್ರೀ ವಿನಯರಾಜ್ ಹಾಗೂ ಜೆಪ್ಪು ಬಂಟರ ಸಂಘದ ಅಧ್ಯಕ್ಷ ಶ್ರೀ ಸುನಿಲ್ ಶೆಟ್ಟಿ 6 ನೇ ವಾರದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ವಿನಯರಾಜ್ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು. ವೈದ್ಯರಾದ ಡಾ. ರಾಜೇಂದ್ರ ಪ್ರಸಾದ್, ಲೆಕ್ಕ ಪರಿಶೋಧಕ ಶ್ರೀ ಶಿವಕುಮಾರ್ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು. ಕಾರ್ಯಕರ್ತರೊಂದಿಗೆ ಸ್ವತ: ಸ್ವಾಮಿಜಿಯವರು ಪೆÇರಕೆ ಹಿಡಿದು ಕಸಗುಡಿಸಿದರು. ಸುಮಾರು ಇನ್ನೂರಕ್ಕೂ ಅಧಿಕ ಜನ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

ಶ್ರಮದಾನ: ಮೊದಲಿಗೆ ಇನ್ನೂರು ಜನÀರನ್ನು 6 ತಂಡಗಳಾಗಿ ವಿಭಾಗಿಸಿಲಾಯಿತು. ಜೆಪ್ಪು ಬಂಟರ ಸಂಘದ ಸದಸ್ಯರು ಕೆ ಎಂ ಸಿ ಆಸ್ಪತ್ರೆಯಿಂದ ಕಲೆಕ್ಟರ್ಸ್ ಗೇಟ್ ವರೆಗಿನ ರಸ್ತೆ, ಪುಟ್ ಪಾಥ್ ಹಾಗೂ ಮಾರ್ಗವಿಭಾಜಕಗಳನ್ನು ಕಸಗುಡಿಸಿ ಶುಚಿಮಾಡಿದರು. ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ಪ್ರಾಧ್ಯಾಪಕಿ ಪ್ರೇಮಲತಾ ಶೆಟ್ಟಿ ಮಾರ್ಗದರ್ಶನದಲ್ಲಿ ಜ್ಯೋತಿ ವೃತ್ತದಿಂದ ಲೈಟ್ ಹೌಸ್ ಹಿಲ್ ಹೋಗುವ ರಸ್ತೆಯ ಎರಡೂ ಬದಿಗಳನ್ನು ಸ್ವಚ್ಛಗೊಳಿಸಿದರು. ಹಿರಿಯರಾದ ಶ್ರೀ ವಿಠಲದಾಸ್ ಪ್ರಭು ಹಾಗೂ ಶ್ರೀ ಶುಭೋದಯ ಆಳ್ವ ತಲಾ ಒಂದೊಂದು ಗುಂಪುಗಳನ್ನು ಮಾರ್ಗದರ್ಶಿಸಿ ಜ್ಯೋತಿ ಸರ್ಕಲ್ ನಿಂದ ಹಂಪಣಕಟ್ಟೆಯತ್ತ ಸಾಗುವ ರಸ್ತೆ ಹಾಗೂ ಅಕ್ಕಪಕ್ಕದ ಸ್ಥಳಗಳನ್ನು ಗುಡಿಸಿ ಕಸಮುಕ್ತವನ್ನಾಗಿಸಿದರು. ಬಲ್ಮಠ ರಸ್ತೆಯಲ್ಲಿದ್ದ ಮಣ್ಣಿನ ಗುಡ್ಡೆಯನ್ನು ಜೆಸಿಬಿ ಸಹಾಯದಿಂದ ತೆಗೆದು ಸಮತಟ್ಟುಗೊಳಿಸಿ ಹೆಚ್ಚಿನ ವಾºನಗಳÀ ನಿಲುಗಡೆಗೆ ಅವಕಾಶ ಮಾಡಿಕೊಡಲಾಯಿತು. ಸುಮಾರು ಮೂರು ಟಿಪ್ಪರ್ ಗಳಷ್ಟು ಮಣ್ಣು ಕಲ್ಲು, ಕಸವನ್ನು ತೆಗೆದು ಸಾಗಿಸಲಾಯಿತು.

ಸ್ವಚ್ಛತೆಯೊಂದಿಗೆ ಸೌಂದರೀಕರಣ : ಜ್ಯೋತಿ ವೃತ್ತದ ಬಳಿಯ ತ್ರಿಕೋಣಾಕೃತಿಯ ಸ್ಥಳವೊಂದು ಕೊಳೆ ಕಸ ತುಂಬಿಕೊಂಡಿತ್ತು. ಹಿಂದೂ ವಾರಿಯರ್ಸ್ ಸದಸ್ಯರು ಅಲ್ಲಿದ್ದ ಅನಗತ್ಯವಾಗಿ ಬಿದ್ದುಕೊಂಡಿದ್ದ ಕಲ್ಲುಮಣ್ಣುಗಳನ್ನು ತೆಗೆದುಹಾಕಿ ಸ್ವಚ್ಛಮಾಡಲಾಯಿತು. ಅಲ್ಲದೇ ಅಲ್ಪ ಸ್ವಲ್ಪ ದುರಸ್ತ್ತಿ ಮಾಡಲಾಗಿದೆ. ಪಾದಚಾರಿಗಳು ಇಳಿದುಹೋಗುವ ಮೆಟ್ಟಿಲುಗಳು ಶಿಥಿಲವಾಗಿದ್ದವು. ಕಾರ್ಮಿಕರನ್ನು ಬಳಸಿಕೊಂಡು ಅವನ್ನೂ ರಿಪೇರಿ ಮಾಡಲಾಗಿದೆ. ಎಂ ಆರ್ ಪಿ ಎಲ್ ಮಹಾಪ್ರಭಂದಕ ಶ್ರೀ ಬಿ ಎಚ್ ವಿ ಪ್ರಸಾದ ಸ್ವತ: ಕಲ್ಲು ಮಣ್ಣುಗಳನ್ನು ಹೊತ್ತು ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ವಿಶೇಷವಾಗಿತ್ತು. ಕಾರ್ಯಕರ್ತರು ಒಂದು ಕಡೆ ಕಸ ತೆಗೆದು ಸ್ವಚ್ಛಗೊಳಿಸುತಿದ್ದರೆ ಮೊತ್ತೊಂದೆಡೆ ಬಸ್ ತಂಗುದಾಣ ಹಾಗೂ ರಸ್ತೆ ಬದಿಯ ರೇಲಿಂಗಳಿಗೆ ಬಣ್ಣ ಬಳಿಯುತ್ತಿದ್ದರು. ಶ್ರೀ ಸುಜಿತ್ ಪ್ರತಾಪ್ ಹಾಗೂ ಕಾರ್ಯಕರ್ತರು ಕಾಲುದಾರಿ ಹಾಗೂ ಜ್ಯೋತಿ ಬಸ್ ತಂಗುದಾಣವನ್ನು ಶುಚಿಮಾಡಿ ಅಲ್ಲಿದ್ದ ರೇಲಿಂಗ್ ಗಳಿಗೆ ಬಣ್ಣ ಬಳಿದು ಸುಂದರಗೊಳಿಸಿದರು.

ಜಾಗೃತಿ ಕಾರ್ಯ: ಕಸಹೆಕ್ಕುವ ಕಾರ್ಯಕರ್ತರು ಒಂದಿಷ್ಟು ಅಂಗಡಿ ವರ್ತಕರನ್ನು ಸಂಪರ್ಕಿಸಿ ಅಂಗಡಿಯ ಸುತ್ತಮುತ್ತಲಿನ ಜಾಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಒತ್ತಾಯಿಸಿದರು. ಸಾರ್ವಜನಿಕರೊಬ್ಬರು ಸ್ವಚ್ಛಗೊಳಿಸಿದ ಜಾಗೆಯಲ್ಲಿ ಕಸ ತಂದು ಸುರಿದದ್ದನ್ನು ಕಂಡು ಸ್ವಚ್ಛ ಮಂಗಳೂರು ಕಾರ್ಯಕರ್ತರು ಅವರಿಂದಲೇ ಅದನ್ನೆ ಪುನ: ಸ್ವಚ್ಛಗೊಳಿಸಿದ ಅಪರೂಪದ ಘಟನೆ ಜರುಗಿತು. ಅಲ್ಲದೇ ಕಾರ್ಯಕ್ರಮ ಮುಗಿದ ನಂತರವೂ ಅಲ್ಲಲ್ಲಿ ಜೋತು ನೇತಾಡುತ್ತಿದ್ದ ಸುಮಾರು ಇನ್ನೂರಕ್ಕೂ ಅಧಿಕ ಬ್ಯಾನರ್ ಗಳನ್ನು ರಸ್ತೆಯ ಮಾರ್ಗವಿಭಾಜಕಗಳ ದೀಪದ ಕಂಬಗಳಿಂದ ತೆರವುಗೊಳಿಸಲಾಯಿತು. ಸಕ್ರಿಯ ಯುವ ಕಾರ್ಯಕರ್ತ ಶ್ರೀ ಸೌರಜ್ ನೇತೃತ್ವ ವಹಿಸಿದ್ದರು. ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ಬಲ್ಮಠ ಪರಿಸರದ ಸುಮಾರು ಇನ್ನೂರು ಮನೆ ಮನೆಗೆ ತೆರಳಿ ಸ್ವಚ್ಛತಾ ಜಾಗೃತಿಯನ್ನುಂಟುಮಾಡಿದರು. ಅಲ್ಲದೇ ರಾಮಕೃಷ್ಣ ಮಿಷನ್ ಹೊರತಂದಿರುವ “ಸಂಕಲ್ಪ” ಎಂಬ ಕರಪತ್ರ ನೀಡಿ ಅಲ್ಲಲ್ಲಿ ಕಸ ಬಿಸಾಡದಂತೆ ಮನವಿ ಮಾಡಿದರು.

ಬೆಳಿಗ್ಗೆ 7:30 ರಿಂದ ಸುಮಾರು 10 ಗಂಟೆಯವರೆಗೆ ಅಭಿಯಾನ ನಡೆಯಿತು. ಕಾಯರ್ತಡ್ಕ ಗ್ರಾಮದ ಯುವಶಕ್ತಿ ಯುವಕ ಸಂಘದ ಸುಮಾರು ಇಪ್ಪತ್ತು ಜನ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದರು. ಎಲ್ಲ ಕಾರ್ಯಕರ್ತರಿಗೂ ಬಲ್ಮಠ ಮಹಿಳಾ ಕಾಲೇಜಿನ ಆವರಣದಲ್ಲಿ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಂಚಾಲಕರಾದ ಶ್ರೀ ದಿಲ್ ರಾಜ್ ಆಳ್ವ ಮತ್ತು ಶ್ರೀ ಉಮಾನಾಥ ಕೋಟೆಕಾರ್ ಅವರು ಅಭಿಯಾನದ ನೇತೃತ್ವ ವಹಿಸಿದ್ದರು.

ಸ್ವಚ್ಛ ಪುತ್ತೂರು ಹಂತ 2: ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಇಂದು ಪುತ್ತೂರಿನಲ್ಲಿ ಎರಡನೇ ಹಂತದ ಸ್ವಚ್ಛ ಪುತ್ತೂರು ಅಭಿಯಾನಕ್ಕೆ ಮಿನಿ ವಿಧಾನ ಸೌಧದ ಮುಂದೆ ಚಾಲನೆಯನ್ನು ನಗರಸಭಾ ಸದಸ್ಯ ಶ್ರೀ ರಾಜೇಶ್ ಬನ್ನೂರು ಹಾಗೂ ಶ್ರೀ ಪುಳು ಈಶ್ವರ ಭಟ್ É ನೀಡಿದರು. ನಗರಸಭಾ ಸದಸ್ಯರಾದ ಶ್ರೀಮತಿ ಜೋಹಾರ್ ನಿಸಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಮುಖ್ಯ ಸಂಯೋಜಕ ಶ್ರೀಕೃಷ್ಣ ಉಪಾಧ್ಯಾಯ ನಿರೂಪಿಸಿ, ಸ್ವಾಗತಿಸಿದರು. ಶ್ರೀ ಜಿ ಕೃಷ್ಣ ಹಾಗೂ ಶ್ರೀ ಶ್ಯಾಮ ಸುದರ್ಶನ ಭಟ್ ಹೊಸಮೂಲೆ ಕಾರ್ಯಕ್ರಮವನ್ನು ಸಂಯೋಜಿಸಿದರು.


Spread the love