ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು 9 ನೇ ಭಾನುವಾರದ ಸ್ವಚ್ಛತಾ ಕಾರ್ಯಕ್ರಮ
ಮಂಗಳೂರು: ರಾಮಕೃಷ್ಣ ಮಿಷನ್ ಆಯೋಜಿಸುತ್ತಿರುವ ಸ್ವಚ್ಛತಾ ಅಭಿಯಾನದ 9 ನೇ ವಾರದ ಕಾರ್ಯಕ್ರಮ ದಿನಾಂಕ 31-12-2017 ರಂದು ಬಂಟ್ಸ್ ಹಾಸ್ಟೆಲ್ ವೃತ್ತ ಹಾಗೂ ಕರಂಗಲಪಾಡಿಯಲ್ಲಿ ಜರುಗಿತು. ಧಾರವಾಡದ ಕೆಪಿಇಎಸ್ ಸಂಸ್ಥೆಯ ಶ್ರೀನಿವಾಸ ಪಾಟೀಲ್ ಹಾಗೂ ಬಜ್ಪೆ ಪೆÇೀಲಿಸ್ ಠಾಣೆಯ ಎಸ್ ಆಯ್ ಶ್ರೀ ಮದನ್ ಅಭಿಯಾನಕ್ಕೆ ಚಾಲನೆ ನೀಡಿದರು. ಡಾ. ಸತೀಶ್ ರಾವ್, ಶ್ರೀ ಸತೀಶ್ ಭಟ್, ಡಾ ರಾಜೇಂದ್ರ ಪ್ರಸಾದ್, ಶ್ರೀ ಪ್ರಭಾಕರ್ ಶೆಟ್ಟಿ ಸೇರಿದಂತೆ ಸುಮಾರು ನೂರಕ್ಕೂ ಅಧಿಕ ಜನ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸ್ವಚ್ಛತೆ: ಕಾರ್ಯಕರ್ತರು ಮೊದಲಿಗೆ ಶ್ರೀ ಶುಭೋದಯ ಆಳ್ವ ಹಾಗೂ ಡಾ. ಸತೀಶ್ ರಾವ್ ಮಾರ್ಗದರ್ಶನದಲ್ಲಿ ಬಂಟ್ಸ್ ಹಾಸ್ಟೆಲ್ ವೃತ್ತದಿಂದ ಸ್ವಚ್ಛತಾ ಕಾರ್ಯವನ್ನು ಪ್ರಾರಂಭಿಸಿದರು. ರಸ್ತೆಯ ಇಕ್ಕೆಲಗಳನ್ನು ಗುಡಿಸಿದರು ನಂತರ ಕಾಲುದಾರಿ ಬದಿಯಲ್ಲಿದ್ದ ಹುಲ್ಲನ್ನು ತೆಗೆದು ಸ್ವಚ್ಛಗೊಳಿಸಿದರು. ಕಾರ್ಯಕರ್ತ ಪ್ರಕಾಶ ಗರೋಡಿ ಹಾಗೂ ಇತರರು ಬಂಟ್ಸ್ ಹಾಸ್ಟೆಲ್ ಬಸ್ ತಂಗುದಾಣ ಹಾಗೂ ಗೋಡೆಗಳಿಗೆ ಅಂಟಿಸಿದ್ದ ಕರಪತ್ರ ಹಾಗೂ ಪೆÇೀಸ್ಟರ್ ತೆಗೆದು ಶುಚಿಗೊಳಿಸಲಾಯಿತು ನಂತರ ನೀರಿನಿಂದ ತೊಳೆದು ಸ್ವಚ್ಛಗೊಳಿಸಿ ಬಣ್ಣ ಹಚ್ಚಿ ಅಂದಗೊಳಿಸಿದರು. ಕರಂಗಲಪಾಡಿ ಮಾರ್ಕೆಟ್ ಎದುರಿನ ಜಾಗೆಯೊಂದರಲ್ಲಿ ಸಾರ್ವಜನಿಕರು ಹಾಗೂ ಮಾರ್ಕೆಟಿನ ವರ್ತಕರು ಕಸ ತಂದು ಸುರಿದು ಆ ಪರಿಸರವನ್ನು ಗಲೀಜುಗೊಳಿಸುತ್ತಿದ್ದರು. ಇಂದು ಅಲ್ಲಿದ್ದ ಕಸ ಹಾಗೂ ತ್ಯಾಜ್ಯದ ರಾಶಿಯನ್ನು ತೆಗೆದು ಗೋಡೆಯನ್ನು ಸ್ವಚ್ಛಗೊಳಿಸಲಾಯಿತು. ಅಲ್ಲದೇ ಸ್ಥಳವನ್ನು ಅಂದಗಾಣಿಸಬೇಕೆಂಬ ಉದ್ದೇಶದಿಂದ ಹೂಕುಂಡಗಳನ್ನು ಅಲ್ಲಿರಿಸಲಾಗಿದೆ. ತದನಂತರ ಅಲ್ಲಿರುವ ವ್ಯಾಪಾರಸ್ಥರ ಬಳಿ ಹೋಗಿ ತ್ಯಾಜ್ಯವನ್ನು ಅಲ್ಲಿ ಸುರಿಯದಂತೆ ವಿನಂತಿಸಲಾಯಿತು ಹಾಗೂ ಅಲ್ಲಿಟ್ಟಿರುವ ಹೂಗಿಡಗಳನ್ನು ಸಂರಕ್ಷಿಸುವುದಾಗಿ ತಿಳಿಸಿದರು. ಅಭಿಯಾನದ ಮುಖ್ಯ ಸಂಯೋಜಕ ಶ್ರೀ ದಿಲ್ ರಾಜ್ ಆಳ್ವ ನೇತೃತ್ವ ವಹಿಸಿದ್ದರು.
ರೇಲೀಂಗ್ ಅಳವಡಿಕೆ: ಕರಂಗಲಪಾಡಿ ಅಟೋ ನಿಲ್ದಾಣದ ಮುಂಭಾಗದಲ್ಲಿ ಹಾಕಿರುವ ಬ್ಯಾರಿಕೇಡ್ ಅಡಿಯಲ್ಲಿ ಕಸ ಕಡ್ಡಿಯಿಂದ ತುಂಬಿ ಅಸಹ್ಯ ಹುಟ್ಟಿಸುತ್ತಿತ್ತು. ಹಾಗೇ ಬ್ಯಾರಿಕೇಡ್ ಸಾಕಷ್ಟು ಸ್ಥಳವನ್ನು ಆಕ್ರಮಿಸಿದ್ದಲ್ಲದೇ ಸಾಕಷ್ಟು ಬಾರಿ ಸ್ಥಳಾಂತರವಾಗಿ ಟ್ರಾಫಿಕ್ ಪೆÇೀಲಿಸರಿಗೆ ಹಾಗೂ ಸವಾರರಿಗೆ ಅನಾನುಕೂಲಾವಾಗುತ್ತಿತ್ತು. ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಇಂದು ಅಲ್ಲಿ ಪ್ರಾಯೋಗಿಕವಾಗಿ ನೂತನವಾದ ತೆಳು ರೇಲಿಂಗ್ ಅಳವಡಿಸಲಾಯಿತು. ಶ್ರೀ ಕಿರಣಕುಮಾರ್ ಪೂಜಾರಿ ಮುತುವರ್ಜಿಯಲ್ಲಿ ಈ ಕಾರ್ಯ ನಡೆಯಿತು.
ಸ್ವಚ್ಛತಾ ಆ್ಯಪ್ ಆಂದೋಲನ: ಕೇಂದ್ರ ಸರಕಾರದ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸಾರ್ವಜನಿಕರ ಸಹಭಾಗಿತ್ವದ ಅಡಿಯಲ್ಲಿ ಸ್ವಚ್ಛತಾ ಆ್ಯಪ್ ಪ್ರಮುಖ ಭಾಗವಾಗಿದ್ದು ಕಳೆದ ಬಾರಿ ಮಂಗಳೂರಿನ ಜನರಿಂದ ಬೇಕಾದಷ್ಟು ಸ್ಪಂದನೆ ದೊರೆತಿರಲಿಲ್ಲ. ಹೀಗಾಗಿ ಈ ಬಾರಿ ರಾಮಕೃಷ್ಣ ಮಿಷನ್ನಿನ ಕಾರ್ಯಕರ್ತರು ಸ್ವಯಂ ಡೌನಲೊಡ ಮಾಡಿಕೊಳ್ಳುವುದಲ್ಲದೇ ಸಾರ್ವಜನಿಕರು ಇದರಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂಬ ಹಿನ್ನಲೆಯಿಂದ ಕಳೆದ ನಾಲ್ಕು ದಿನಗಳಿಂದ ಸಾಕಷ್ಟು ಪರಿಶ್ರಮ ವಹಿಸುತ್ತಿದ್ದಾರೆ. ಕಳೆದ ವಾರದವರೆಗೆ 363 ಸ್ವಚ್ಛತಾ ಆ್ಯಪ್‍ಗಳು ಡೌನಲೋಡ್ ಆಗಿದ್ದರೆ ಈ ಆಂದೋಲನದ ಪರಿಣಾಮ ನಿನ್ನೆಗೆ 2500 ಆಗಿದ್ದು ಇಂದು ಅದು 3000-3500 ಸಾವಿರದ ಗಡಿ ದಾಟಬಹುದೆಂದು ಅಂದಾಜಿಸಲಾಗಿದೆ. ಇನ್ ಸ್ಟಾಲ್ ಮಾಡಲು ಇಂದೇ ಕೊನೆಯ ದಿನವಾಗಿದ್ದು ನಗರದ ಬೇರೆ ಬೇರೆ ಕಡೆ ಈ ಸ್ವಚ್ಛತಾ ಆ್ಯಪ್ ಅಭಿಯಾನ ನಡೆಯುತಿದೆ. ಮುಖ್ಯವಾಗಿ ಸಿಟಿ ಸೆಂಟರ್ ಮಾಲ್. ಫಿಜಾ ಫೆÇೀರಮ್ ಮಾಲ್, ಕಾಪೆರ್Çರೇಶನ್ ಬ್ಯಾಂಕ್ ಮುಖ್ಯ ಕಚೇರಿ, ಸಹ್ಯಾದ್ರಿ ಕಾಲೇಜು, ಎಸ್ ಡಿಎಂ ಕಾಲೇಜಲ್ಲದೇ ಮನೆ ಮನೆ ಭೇಟಿ ನೀಡಿ ಸಾರ್ವಜನಿಕರು ಈ ಸ್ವಚ್ಛತಾ ಆ್ಯಪ್ ನ್ನು ಡೌನ್ ಲೋಡ್ ಮಾಡಿಕೊಳ್ಳುವಂತೆ ವಿನಂತಿಸಿ ಬಳಕೆಯ ಕುರಿತಂತೆ ಮಾಹಿತಿ ಕೊಡಲಾಯಿತು. ಯುವ ಕಾರ್ಯಕರ್ತರಾದ ಸೌರಜ್, ಶಿಶಿರ ಅಮೀನ್, ಧನುಷ್ಯ ಶೆಟ್ಟಿ, ಆಭಿಷೇಕ್ ವಿ ಎಸ್, ಅಮೀತ ಜೆ, ಅನಿಲ್ ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಶ್ರೀ ಎಂ ಆರ್ ವಾಸುದೇವ, ಶ್ರೀ ಉಮಾನಾಥ್ ಕೋಟೆಕಾರ್ ಆ್ಯಪ್ ಆಂದೋಲನದ ನೇತೃತ್ವ ವಹಿಸಿದ್ದರು.
ಸ್ವಚ್ಛ ಗ್ರಾಮ: ರಾಮಕೃಷ್ಣ ಮಿಷನ್ ಸ್ವಚ್ಛ ಕಾಯರ್ತಡ್ಕ ಅಭಿಯಾನಕ್ಕೆ ಸ್ವಾಮಿ ಜಿತಕಾಮಾನಂದಜಿ ಇಂದು ಕಾಯರ್ತಡ್ಕದಲ್ಲಿ ಚಾಲನೆ ನೀಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀ ಶಾರದಾ, ಉಮಾಮಹೇಶ್ವರ ದೇವಸ್ಥಾನದ ಅಧ್ಯಕ್ಷ ಬಾಳನ್ನಗೌಡ ಕಾಯರ್ತಡ್ಕ ಹಾಗೂ ಮಸೀದಿ ಅಧ್ಯಕ್ಷ ಶ್ರೀ ಅಬ್ದುಲ್ಲಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯುವಶಕ್ತಿ ಕಾಯರ್ತಡ್ಕ , ಕೋಂಬಶ್ರೀ ಯುವಕ ಮಂಡಳ ಹಾಗೂ ಸಾರ್ವಜನಿಕರ ಸಹಯೋಗದಿಂದ ಸುಮಾರು ಮೂರು ಗಂಟೆಗಳ ಕಾಲ ಶ್ರಮದಾನ ನಡೆಯಿತು. ಶ್ರೀಯೋಗಿಶ್ ಅಭಿಯಾನವನ್ನು ಸಂಯೋಜಿಸಿದರು. ಮಳವೂರು, ಎಡಪದವು ಸೇರಿದಂತೆ ಅನೇಕ ಕಡೆ ಸ್ವಚ್ಛತಾ ಅಭಿಯಾನ ನಡೆಯಿತು.