ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ 40 ವಾರಗಳ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಎಂಬ ಕಾರ್ಯಕ್ರಮದ13ನೇ ವಾರದ ಸ್ವಚ್ಚತಾ ಅಭಿಯಾನವನ್ನು ಏಪ್ರಿಲ್ 26 ರಂದು ಮಂಗಳೂರು ಮಹಾನಗರಪಾಲಿಕ ೆಆವರಣ ಹಾಗೂ ಲಾಲಭಾಗ್ ಸುತ್ತಮುತ್ತ ಹಮ್ಮಿಕೊಳ್ಳಲಾಯಿತು.
ಆಶ್ರಮದ ಮುಖ್ಯಸ್ಥರಾದ ಸ್ವಾಮಿಜಿತಕಾಮಾನಂದಜಿಯವರ ನೇತೃತ್ವದಲ್ಲಿಪರಿಸರ ಪ್ರೇಮಿ, ಕಲಾವಿದ ಶ್ರೀ ದಿನೇಶ್ ಹೊಳ್ಳ ಅಭಿಯಾನಕ್ಕೆ ಚಾಲನೆ ನೀಡಿದರು. ಎಂಆರ್ಪಿಎಲ್ ಗ್ರೂಪ್ ಜನರಲ್ ಮ್ಯಾನೆಜರ್ ಲಕ್ಷ್ಮೀನಾರಾಯನ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕಾತ್ಯಾಯಿನಿ, ಡಾ ಸತೀಶ್ ರಾವ್, ಸಮಾಜ ಸೇವಕ ಸುರೇಶ್ ಶೆಟ್ಟಿ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಅಂಬುಜಾ ಸಿಮೆಂಟ್ ನೌಕರರು, ಮಂಕಿಸ್ಟಾಂಡ್ ಫ್ರೆಂಡ್ಸ್, ಮಠದ ಭಕ್ತರು, ರಾಮಕೃಷ್ಣ ಮಿಷನ್ ಬಾಲಕಾಶ್ರಮದ ವಿದ್ಯಾರ್ಥಿಗಳು, ಮನಪಾ ಪೌರಕಾಮರ್ಿಕರು, ಸಾರ್ವಜನಿಕರು, ಹಿತೈಷಿಗಳು ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಿದರು.
ನಗರದಲ್ಲಿ ಫೆಡರೇಶನ್ಕಪ್ ಆಯೋಜನೆಯ ತಯಾರಿ ಭರ್ಜರಿಯಾಗಿ ನಡೆಯುತ್ತಿದೆಯಾದರೂ ಅಲ್ಲಿ ಸ್ವಚ್ಚತೆಗೆ ಪ್ರಾಮುಖ್ಯತೆ ನೀಡಬೇಕಿದೆಯೆಂದು ಸಾರ್ವಜನಿಕರ ಅಭಿಪ್ರಾಯ. ಹಲವಾರು ದಿನಗಳಿಂದ ಮಾಧ್ಯಮಗಳು ಈ ವಿಷಯದತ್ತ ಗಮನ ಸೆಳೆಯುತ್ತಲೇ ಇವೆ. ಈ ಸಂದರ್ಭದಲ್ಲಿ ರಾಮಕೃಷ್ಣ ಮಿಷನ್ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಅಭಿಯಾನವನ್ನು ಲಾಲಭಾಗ್ ಹಾಗೂ ಕರಾವಳಿ ಮೈದಾನದ ಸುತ್ತಮುತ್ತ ಕೈಗೊಂಡಿತು.
ಪ್ರಥಮವಾಗಿ ಸ್ವಾಮಿಜಿತಕಾಮಾನಂದಜಿಯರ ನೇತೃತ್ವದಲ್ಲಿ ಮನಪಾ ಮುಂಭಾಗ ಹಾಗೂ ಮೂಲೆಯಲ್ಲಿ ಶೇಖರಗೊಂಡಿದ್ದ ಕಸವನ್ನು ತೆಗೆದು ಶುಚಿಗೊಳಿಸಲಾಯಿತು. ಸ್ವತ: ಸ್ವಾಮಿಜಿ ಹಾರೆ ಪೊರಕೆ ಹಿಡಿದು ಮನಪಾ ಮುಂಭಾಗವನ್ನು ಸ್ವಚ್ಚಗೊಳಿಸಿದರು. ಅತ್ತ ಬಾಲಕಾಶ್ರಮದ ವಿದ್ಯಾಥರ್ಿಗಳು ಮನಪಾ ಎದುರಿಗಿರುವ ಬಸ್ ತಂಗುದಾಣವನ್ನು ಶುಚಿಗೊಳಿಸಿ ಬಣ್ಣ ಬಳಿದು ಅಂದಗೊಳಿಸಿದರು.
ಲಾಲಭಾಗ್ ಪಬ್ಬಾಸ್ ನಿಂದ ಹಿಡಿದು ಲೇಡಿಹಿಲ್ ವರೆಗೆ ಮಂಗಳಾ ಕ್ರೀಡಾಂಗಣಕ್ಕೆ ತಾಗಿಕೊಂಡಿರುವ ಪುಟ್ಫಾತ್ ಅಲ್ಲಲ್ಲಿ ಕಿತ್ತುಹೋಗಿ ಸಾರ್ವಜನಿಕರಿಗೆ, ಕ್ರೀಡಾಸಕ್ತರಿಗೆ ತೊಂದರೆಯಾಗುತ್ತಿತ್ತು. ಸುಮಾರು ಹದಿನೈದು ಕಡೆ ಕಿತ್ತು ಹೋಗಿರುವ ಪುಟ್ಫಾತ್ನ್ನು ಸರಿ ಮಾಡಲೇಬೇಕು ಎಂಬ ಹಠತೊಟ್ಟ ಸ್ವಚ್ಚ ಮಂಗಳೂರು ಅಭಿಯಾನದ ಹಿರಿಯ ಸ್ವಯಂ ಸೇವಕರು ಕಳೆದ ನಾಲ್ಕಾರು ದಿನಗಳಿಂದ ಯೋಜನೆಯನ್ನು ಜಾರಿಗೊಳಿಸಲು ಬೇಕಾದ ತಯಾರಿ ಮಾಡಿಕೊಂಡಿದ್ದರು. ಇಂದು ಬೆಳಿಗ್ಗೆ ಹೊಚ್ಚ ಹೊಸ ಸಿಮೆಂಟ್ ಸ್ಲಾಬ್ ಗಳನ್ನು ಹೊತ್ತು ತಂದು ಅಲ್ಲಿರುವ ಕಾಲುದಾರಿಗೆ ಸರಿಯಾಗಿ ಹೊಂದಿಸಿ ಗಣ್ಯರಿಂದ ಭೇಷ ಎನ್ನಿಸಿಕೊಂಡರು. ಹಿರಿಯರಾದ ರಾಘವೇಂದ್ರ ಅಮೀನ್, ದಿಲ್ ರಾಜ್ ಆಳ್ವ, ಮುಖೇಶ್, ಸಲೀಂ ಮುತ್ತಿತರು ವಿಶೇಷ ಕಾಳಜಿ ವಹಿಸಿ ದುರಸ್ತಿ ಪೂರ್ಣಗೊಳಿಸಿದರು.
ಲಾಲ್ ಭಾಗ್, ಬಲ್ಲಾಳಭಾಗ್, ಲೇಡಿಹಿಲ್ ಮುಂತಾದಕಡೆ ಮನೆಮನೆಗೆ ತೆರಳಿ ಸ್ವಚ್ಚತಾ ಕರಪತ್ರ ಹಂಚಿ, ಜಾಗ್ರತಾ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಯಿತು. ಎಂಆರ್ಪಿಲ್ ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿಕೊಂಡಿತ್ತು