ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 5 ವರ್ಷದ 14ನೇ ಆದಿತ್ಯವಾರದ ಶ್ರಮದಾನದ
ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 14ನೇ ಆದಿತ್ಯವಾರದ ಶ್ರಮದಾನವನ್ನು ಜೆಪ್ಪು ಪ್ರದೇಶದಲ್ಲಿ ಹಮ್ಮಿಕೊಳ್ಳಲಾಯಿತು. ದಿನಾಂಕ 10-3-2019 ರಂದು ಬೆಳಿಗ್ಗೆ 7-30 ಕ್ಕೆ ಜೆಪ್ಪುವಿನಲ್ಲಿರುವ ಭಗಿನಿ ಸಮಾಜದ ಮುಂಭಾಗದಲ್ಲಿ ಶ್ರಮದಾನಕ್ಕೆ ಚಾಲನೆ ನೀಡಲಾಯಿತು. ಕ್ರೈಸ್ತ ಧರ್ಮಗುರುಗಳಾದ ರೆ. ಫಾದರ್ ರಿಚರ್ಡ್ ಡಿಸೋಜಾ ಹಾಗೂ ಶ್ರೀನಿವಾಸ್ ತಾಂತ್ರಿಕ ವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀ ಪ್ರಕಾಶ್ ಎಸ್ ಪಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಜಂಟಿಯಾಗಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಫಾದರ್ ರಿಚರ್ಡ್ ಡಿಸೋಜಾ “ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಜಾತಿ, ಮತ, ಪಂಥ ಎಂಬ ಭೇದ-ಭಾವಗಳಿಲ್ಲದೇ ಪ್ರತಿಯೊಬ್ಬರು ಪರಿಸರದ ಸಂರಕ್ಷಣೆಯ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಿದೆ. ಈ ಸ್ವಚ್ಛತಾ ಅಭಿಯಾನದ ಮೂಲಕ ಅಂತಹ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿರುವ ರಾಮಕೃಷ್ಣ ಮಿಷನ್ ಕಾರ್ಯ ಶ್ಲಾಘನೀಯವಾದದು. ಸಮಾಜದ ಶ್ರೇಷ್ಠ ಹಾಗೂ ಜವಾಬ್ದಾರಿಯುತ ನಾಗರಿಕ ಬಂಧುಗಳು ಪ್ರತಿ ವಾರ ರಸ್ತೆಗಿಳಿದು ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿರುವುದು ಅತ್ಯಂತ ಸಂತೋಷದ ವಿಷಯ. ಶ್ರಮದಾನದ ಜೊತೆ ಜೊತೆಗೆ ಜಾಗೃತಿ ಕಾರ್ಯ ಸಾಗಬೇಕು. ಕಸ ಹೆಕ್ಕುವುದರ ಜೊತೆಗೆ ಜನರು ತ್ಯಾಜ್ಯವನ್ನು ಅಲ್ಲಲ್ಲಿ ಬಿಸಾಡದಂತೆ ಅರಿವು ಮೂಡಿಸುವ ಕಾರ್ಯವಾಗಬೇಕು ಆಗ ಇಂತಹ ಕಾರ್ಯಗಳು ಹೆಚ್ಚು ಅರ್ಥಪೂರ್ಣವಾಗುತ್ತವೆ” ಎಂದು ತಿಳಿಸಿ ಶುಭ ಹಾರೈಸಿದರು. ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ಪರಿಚಯಿಸಿ ಸ್ವಾಗತಿಸಿದರು. ಡಾ. ಸತೀಶ್ ರಾವ್, ಸುರೇಂದ್ರ ನಾಯಕ್, ನಳಿನಿ ಭಟ್, ಅಭಿಲಾಶ್ ವಿ, ಭರತ್ ಸದಾನಂದ, ಮಧುಚಂದ್ರ ಆಡ್ಯಂತಾಯ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶ್ರಮದಾನ; ಸುಮಾರು ಮೂರುಗಂಟೆಗಳ ಕಾಲ ಜೆಪ್ಪು ಮಾರ್ಕೆಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಪ್ರಥಮವಾಗಿ ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಫಾ. ರಿಚರ್ಡ್ ಹಾಗೂ ಸ್ವಯಂ ಸೇವಕರು ಭಗಿನಿ ಸಮಾಜದ ಮುಂಭಾಗದ ರಸ್ತೆ ಬದಿಯಲ್ಲಿದ್ದ ಜಾಗೆಯನ್ನು ಗುಡಿಸಿ ಸ್ವಚ್ಛಗೊಳಿಸಿದರು. ಅಲ್ಲಿ ಹರಡಿಕೊಂಡು ಬಿದ್ದಿದ್ದ ಮನೆ ಕಸವನ್ನು ಗುಡಿಸಿ ತೆಗೆಯಲಾಯಿತು. ಬಳಿಕ ಜೆಸಿಬಿ ಟಿಪ್ಪರ್ ಬಳಸಿ ಸುಮಾರು ಎರಡು ಲೋಡ್ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಿ ಹಸನು ಮಾಡಲಾಯಿತು. ಅವಿನಾಶ್ ಎಚ್ ಎಸ್, ಸರಿತಾ ಶೆಟ್ಟಿ ಹಾಗೂ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನೇತೃತ್ವ ವಹಿಸಿದ್ದರು. ಮತ್ತೊಂದು ತಂಡ ಸುಧೀರ್ ನರೋಹ್ನ, ಪುನೀತ್ ಪೂಜಾರಿ ಹಾಗೂ ಉಮಾಕಾಂತ್ ಸುವರ್ಣ ಜೊತೆಗೂಡಿ ಜೆಪ್ಪು ಮೀನು ಮಾರುಕಟ್ಟೆಯನ್ನು ಸ್ವಚ್ಛಗೊಳಿಸಿದರು. ಮೊದಲಿಗೆ ಅಲ್ಲಿ ದೊಡ್ದ ಮಟ್ಟದಲ್ಲಿ ಬಿಸಾಕಿದ್ದ ತ್ಯಾಜ್ಯವನ್ನು ಸ್ವಚ್ಛಗೊಳಿಸಿ, ನೀರು ಹಾಕಿ ತೊಳೆಯಲಾಯಿತು. ಬಳಿಕ ಅಲ್ಲಿದ್ದ ಕೊಳೆಯಾಗಿದ್ದ ಗೋಡೆಗಳನ್ನೂ ಶುಚಿಮಾಡಿ ಬಣ್ಣ ಬಳಿದು ಅಂದಕಾಣುವಂತೆ ಮಾಡಲಾಯಿತು. ಕೊನೆಗೆ ಅಲ್ಲಿ ಮುಂಜಾಗ್ರತಾ ಕ್ರಮವಾಗಿ ಹೂಗಿಡಗಳುಳ್ಳ ಕುಂಡಗಳನ್ನಿಡಲಾಯಿತು. ಬಳಿಕ ಪ್ರತಿ ಅಂಗಡಿಗೆ ತೆರಳಿ ಜಾಗೃತಿ ಕಾರ್ಯ ಮಾಡಲಾಗಿದೆ. ಪ್ರಮುಖವಾಗಿ ಭಗಿನಿ ಸಮಾಜ. ಜೆಪ್ಪು ಮಾರುಕಟ್ಟೆ ಪ್ರದೇಶದ ಎಲ್ಲ ತೋಡುಗಳನ್ನು ತೋಡಿಗಿಳಿದು ಸ್ವಯಂಸೇವಕರು ಸ್ವಚ್ಛಗೊಳಿಸುತಿದ್ದುದು ವಿಶೇಷವಾಗಿತ್ತು. ಹಿರಿಯರಾದ ವಿಠಲದಾಸ್ ಪ್ರಭು, ಕಮಲಾಕ್ಷ ಪೈ ಮುಂದಾಳತ್ವ ವಹಿಸಿದ್ದರು. ಜೆಪ್ಪು ಮಾರುಕಟ್ಟೆಯಿಂದ ಮೋರ್ಗನ್ಸ್ಗೇಟ್ನತ್ತ ಸಾಗುವ ದಾರಿ, ಭಗಿನಿ ಸಮಾಜದ ಬಲಭಾಗದ ರಸ್ತೆಗಳನ್ನು, ಕಾಲುದಾರಿಗಳನ್ನು ಶುಚಿಗೊಳಿಸಲಾಯಿತು.
ಬ್ಯಾನರ್ ತೆರವು ಕಾರ್ಯಾಚರಣೆ: ನಗರದ ಸೌಂದರ್ಯಕ್ಕೆ ಹಾಗೂ ಪರಿಸರಕ್ಕೆ ಮಾರಕವಾದ ಅನದಿಕೃತ ಬ್ಯಾನರ್ ಹಾವಳಿ ಕಳೆದ ಕೆಲವು ದಿನಗಳಿಂದ ವಿಪರೀತವಾಗಿತ್ತು. ಇಂದು ಕಾರ್ಯಕರ್ತರು ಸುಮಾರು ಐನೂರಕ್ಕೂ ಹೆಚ್ಚಿನ ಬ್ಯಾನರ್ಗಳನ್ನು ತೆರವು ಮಾಡಿದ್ದಾರೆ. ಸ್ಟೇಟ್ ಬ್ಯಾಂಕ್. ಹಂಪಣಕಟ್ಟೆ, ಮಲ್ಲಿಕಟ್ಟೆ, ಜ್ಯೋತಿ, ಫಳ್ನೀರ್, ಮಂಗಳಾದೇವಿ ರಸ್ತೆ, ಬಲ್ಮಠ, ಪಿವಿಎಸ್ ಮತ್ತಿತರ ಪ್ರಮುಖ ಸ್ಥಳಗಳಲ್ಲಿದ್ದ ಪ್ಲೆಕ್ಸ್ ಬ್ಯಾನರ್ಗಳನ್ನು ತೆಗೆದುಹಾಕಲಾಯಿತು. ಸೌರಜ್ ಮಂಗಳೂರು, ರವಿ ಕೆ ಆರ್, ವಿಖ್ಯಾತ ಇನ್ನಿತರ ಕಾರ್ಯಕರ್ತರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಏರ್ ಪೆÇೀರ್ಟ್ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ: ಕರ್ನಾಟಕ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಂದ ಏರ್ಪೆÇೀರ್ಟ್ ರಸ್ತೆಯಲ್ಲಿ ಶ್ರಮದಾನವನ್ನು ಹಮ್ಮಿಕೊಳ್ಳಲಾಯಿತು. ಎನ್ನೆಸ್ಸೆಸ್ ಸಂಯೋಜಕರಾದ ಉಪನ್ಯಾಸಕ ಸಂತೋಷ್, ವಿದ್ಯಾರ್ಥಿಗಳಾದ ಗೌತಮ್, ಹೀರೇಶ್ ಮತ್ತಿತರರು ಪಾಲ್ಗೊಂಡು ಸುಮಾರು ಎರಡು ಗಂಟೆಗಳ ಕಾಲ ಕೆಪಿಟಿ ಮುಂಭಾಗದಲ್ಲಿ ಶ್ರಮದಾನ ಮಾಡಿದರು.
ಸ್ವಚ್ಛ ಸೋಚ್ ಸೆಮಿನಾರ್: ಈ ವಾರ 7 ಕಾಲೇಜುಗಳಲ್ಲಿ ಸ್ವಚ್ಛ ಸೋಚ್ ವಿಚಾರ ಸಂಕಿರಣಗಳನ್ನು ಆಯೋಜಿಸಲಾಯಿತು. ಮಹಿಳಾ ಪ್ರಥಮದರ್ಜೆ ಕಾಲೇಜು ಪುತ್ತೂರು, ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು, ಆಳ್ವಾಸ್ ಸ್ನಾತಕೋತ್ತರ ವಿಭಾಗ ಮೂಡುಬಿದ್ರೆ, ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ ಪುತ್ತೂರು, ಶ್ರೀದೇವಿ ತಾಂತ್ರಿಕ ವಿದ್ಯಾಲಯ ಕೆಂಜಾರು, ವಿವೇಕಾನಂದ ಕಲಾ ಹಾಗೂ ವಿಜ್ಞಾನ ವಿದ್ಯಾಲಯ ಪುತ್ತೂರು, ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ ಮೂಡಬಿದ್ರೆ ಈ ಕಾಲೇಜುಗಳಲ್ಲಿ ವಿಚಾರ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಯಿತು. ಇಂದಿನವರೆಗೆ ಒಟ್ಟು 41 ವಿಚಾರ ಗೋಷ್ಠಿಗಳನ್ನು ನಡೆಸಲಾಗಿದೆ. ಈ ಗೋಷ್ಠಿಗಳು ಸ್ವಚ್ಛತೆಗೆ ಸಂಬಂಧಿಸಿದ ಚರ್ಚೆ, ಸಂವಾದ, ಪ್ರತಿಜ್ಞಾವಿಧಿ ಹಾಗೂ ನಮ್ಮ ತ್ಯಾಜ್ಯ ನಮ್ಮ ಹೊಣೆ ಪ್ರಾತ್ಯಕ್ಷಿಕೆಗಳನ್ನು ಒಳಗೊಂಡಿದ್ದವು. ಡಾ. ನಿವೇದಿತಾ ಕಾಮತ್, ಪೆÇ್ರೀ. ರಾಜಮೋಹನ್ ರಾವ್, ಸರಿತಾ ಶೆಟ್ಟಿ, ಹಾಗೂ ಗೋಪಿನಾಥ್ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗಿಯಾಗಿದ್ದರು. ರಂಜನ್ ಬೆಳ್ಳರಪಾಡಿ ಕಾರ್ಯಕ್ರಮಗಳನ್ನು ಸಂಯೋಜಿಸಿದರು. ಎಂ.ಆರ್.ಪಿ.ಎಲ್ ಹಾಗೂ ನಿಟ್ಟೆ ವಿದ್ಯಾಸಂಸ್ಥೆಗಳು ಈ ಅಭಿಯಾನಗಳಿಗೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿವೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ – 94483 53162 (ಸ್ವಾಮಿ ಏಕಗಮ್ಯಾನಂದ, ಸಂಚಾಲಕ, ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿüಯಾನ)