ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಪ್ರಯುಕ್ತ ದಿನಾಂಕ 19-11-2017 ರಂದು ಹಮ್ಮಿಕೊಳ್ಳಲಾದ ಶ್ರಮದಾನದ ವರದಿ
ರಾಮಕೃಷ್ಣ ಮಿಷನ್ ಸ್ವಚ್ಚತಾ ಅಭಿಯಾನದ ಅಂಗವಾಗಿ 3ನೇ ವಾರದ ಸ್ವಚ್ಛತಾ ಕಾರ್ಯಕ್ರಮ ದಿನಾಂಕ 19-11-2017 ರಂದು ಸರ್ವಿಸ್ ಬಸ್ ನಿಲ್ದಾಣದ ಸುತ್ತಲಿನ ಪ್ರದೇಶದಲ್ಲಿ ಜರುಗಿತು. ಊಟಿ ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ರಾಘವೇಶಾನಂದಜಿ ಹಾಗೂ ಮೈಸೂರು ರಾಮಕೃಷ್ಣ ನೈತಿಕ ಹಾಗೂ ಆಧ್ಯಾತ್ಮಿಕ ಸಂಸ್ಥೆಯ ಸಂಚಾಲರಾದ ಸ್ವಾಮಿ ಮಹೇಶಾತ್ಮಾನಂದಜಿ ಜಂಟಿಯಾಗಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಪಿ ಎ ತಾಂತ್ರಿಕ ವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಅಬ್ದುಲ್ ಶರೀಫ್ ಹಾಗೂ ಪೇಸ್ ನೆಕ್ಸ್ಟ್ ಸಂಸ್ಥೆಯ ಅಧ್ಯಕ್ಷ ಶ್ರೀ ಹನಿಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 317 ಡಿ ಜಿಲ್ಲಾ ಲಯನ್ಸ್ ಗವರ್ನರ್ ಶ್ರೀ ಹರೀಶ್ ಎಚ್ ಆರ್ ಅಭಿಯಾನಕ್ಕೆ ಶುಭಹಾರೈಸಿದರು. ಸ್ವಾಮಿ ಜಿತಕಾಮಾನಂದಜಿ ಹಾಗೂ ಲಯನ್ ಶ್ರೀ ಕೆ ಸಿ ಪ್ರಭು , ಶ್ರೀ ಸದಾನಂದ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.
ಬೆಳಿಗ್ಗೆ 7:30 ಕ್ಕೆ ಅಭಿಯಾನ ಸರ್ವಿಸ್ ಬಸ್ ನಿಲ್ದಾಣವನ್ನು ಶುಚಿಗೊಳಿಸುವುದರ ಮೂಲಕ ಪ್ರಾರಂಭವಾಯಿತು. ನೂರಾರು ಕಾರ್ಯಕರ್ತರೊಂದಿಗೆ ಸ್ವಾಮಿಜಿಗಳು ಹಾಗೂ ಅತಿಥಿಗಳು ಕಸಗುಡಿಸಿ ಸಾರ್ವಜನಿಕ ಸ್ಥಳವನ್ನು ಶುಚಿಮಾಡಿದರು. ಅಲ್ಲದೇ ಜೆಸಿಬಿ ಬಳಸಿಕೊಂಡು ತುರ್ತಾಗಿ ರಿಪೇರಿ ಆಗಬೇಕಿದ್ದ ರಸ್ತೆಯನ್ನು ಸರಿ ಮಾಡಿದರು. ಡಾ. ಬಿರೇನ್ ಮೊಯ್ದಿನ್ ನಿರ್ದೇಶನದಲ್ಲಿ ಪಿ ಎ ಕಾಲೇಜಿನ ವಿದ್ಯಾರ್ಥಿಗಳು ರಾವ್ ಆಂಡ್ ರಾವ್ ಸರ್ಕಲ್ ಸುತ್ತಮುತ್ತ ಲಿನ ಜಾಗೆ ಸ್ವಚ್ಛಗೊಳಿಸಿದರು. ನಂತರ ಡಾ. ಪಾಲಾಕ್ಷಪ್ಪ ಹಾಗೂ ವಿದ್ಯಾರ್ಥಿಗಳು ಲೇಡಿಗೋಶನ್ ಆಸ್ಪತ್ರೆಯ ಮುಂಭಾಗದ ಮಾರ್ಗ ವಿಭಾಜಕಗಳಲ್ಲಿದ್ದ ಹುಲ್ಲು ಕಸ ತೆಗೆದು ಸ್ವಚ್ಛಗೊಳಿಸಿದರು. ಅಲ್ಲದೇ ಅಲ್ಲಲ್ಲಿ ಅಂಟಿಸಲಾಗಿದ್ದ ಅ£ಧಿಕೃತ ಬ್ಯಾನರ್ ಪೆÇೀಸ್ಟರ್ ತೆಗೆಯಲಾಯಿತು.
ನಿವೇದಿತಾ ಬಳಗದ ಸದಸ್ಯರು ಹಾಗೂ ಶ್ರೀ ಎಸ್ ಎಂ ಕುಶೆ ಶಾಲಾ ವಿದ್ಯಾರ್ಥಿಗಳು ಹಾಗೂ ಸ್ಕೌಟ್ಸ್ Àಗೈಡ್ಸ್ ಸ್ವಯಂ ಸೇವಕರು ಸ್ವಚ್ಛ ಮಂಗಳೂರು ಹಿರಿಯ ಕಾರ್ಯಕರ್ತ ಶ್ರೀ ವಿಠಲದಾಸ್ ಪ್ರಭು ನಿರ್ದೇಶನದಲ್ಲಿ ತ್ಯಾಜ್ಯ ವಿಲೇವಾರಿ ಮಾಡಿದರು. ಹಿಂದೂ ವಾರಿಯರ್ಸ್ ಗ್ರೂಪ್ ನ ಸದಸ್ಯರು ಅಭಿಯಾನದಲ್ಲಿ ಸಕ್ರಿಂಯವಾಗಿ ಪಾಲ್ಗೊಂಡು ಅಲ್ಲಿದ್ದ ಟೆಲಿಫೆÇೀನ್ ಭೂತ್ನಲ್ಲಿ ಅಪಾರವಾಗಿ ಸಂಗ್ರಹವಾಗಿದ್ದ ಕಸದ ತ್ಯಾಜ್ಯವನ್ನು ತೆರವುಗೊಳಿದರು.
ಆ್ಯಂಟಿ ಪೊಲ್ಯೂಶನ್ ಡ್ರೈವ್ ನ ರುಹಿಯ ಹುಸೈನ್ ಹಾಗೂ ಅಬ್ದುಲ್ ರೆಹಮಾನ್ ನಿರ್ದೇಶನದಲ್ಲಿ ಸಾರ್ವಜನಿಕರಿಗೆ ಹಾಗೂ ಬೀದಿ ಬದಿ ವರ್ತಕರಿಗೆ ಸ್ವಚ್ಛತೆಯ ಅರಿವು ಮೂಡಿಸುವ ಕರಪತ್ರ ನೀಡಿ, ಮಾರ್ಗದಲ್ಲಿ ತ್ಯಾಜ್ಯ ಸುರಿಯದಂತೆ ವಿನಂತಿಸಲಾಯಿತು. ಬಸ್ ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಸ್ವಚ್ಛತೆಯ ಅರಿವು ಮೂಡಿಸಲಾಯಿತು. ಧ್ವನಿ ವರ್ಧಕದ ಮೂಲಕ ಸ್ವಚ್ಛತೆಯ ಸಂದೇಶವನ್ನು ಬಿತ್ತರಿಸಲಾಯಿತು.
ಪಿ.ಎ ಇಂಜನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು ಹಾಗೂ ಪೇಸ್ ನೆಕ್ಸ್ಟ್ ಉಪಾಧ್ಯಕ್ಷ ಶ್ರೀ ಗಣೇಶ ಪೈ, ಶಫನಾಜ್ ಸಯ್ಯದ್ ಇಸ್ಮಾಯಲ್ ಸೇರಿದಂತೆ ಅನೇಕ ಯುವಕ ಯುವತಿಯರು ಸ್ವಚ್ಛತಾ ಅಭಿಯಾನದಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡು ಸಹಕರಿಸಿದರು. ಬೆಳಿಗ್ಗೆ 7:30 ರಿಂದ 10 ಗಂಟೆಯ ತನಕ ಶ್ರಮದಾನ ಕಾರ್ಯ ನಡೆಯಿತು. ಶ್ರಮದಾನದ ಬಳಿಕ ಎಲ್ಲರಿಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ಶ್ರೀ ಕಿರಣ್ ಕುಮಾರ್ ಪೂಜಾರಿ ನೇತೃತ್ವದಲ್ಲಿ ಕುಮಾರ್ ಜಿಮ್ ಫ್ರೆಂಡ್ಸ್ ಸದಸ್ಯರು ಕೋಡಿಕಲ್ ನಲ್ಲಿರುವ ಅಂಗನವಾಡಿಯನ್ನು ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದಡಿಯಲ್ಲಿ ಸುಣ್ಣ ಬಣ್ಣ ಬಳಿದು ನವೀಕರಿಸಿದರು. ಈ ಪ್ರಯುಕ್ತ ಮಕ್ಕಳ ದಿನಾಚರಣೆಯಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡು ಸ್ವಚ್ಛತೆಯ ಮಹತ್ವವನ್ನು ತಿಳಿಸಲಾಯಿತು.
ಸ್ವಚ್ಛ ಗ್ರಾಮ ಅಭಿಯಾನ : ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಸ್ವಚ್ಛ ದಕ್ಷಿಣ ಕನ್ನಡ ಅಭಿಯಾನದ ಪ್ರಯುಕ್ತ ಇಂದು ತೊಕ್ಕೊಟ್ಟು, ಸೋಮೇಶ್ವರ, ಮುನ್ನೂರು, ತಲಪಾಡಿ, ಉಳ್ಳಾಲ, ಕೊಣಾಜೆ, ಆಂಬ್ಲಮೊಗರು, ಕೋಟೆಕಾರ್, ಕುಕ್ಕಿಪಾಡಿ, ಪೆರ್ಮನ್ನೂರು ಮುಂತಾದ ಇಪ್ಪತ್ತು ಗ್ರಾಮಗಳಲ್ಲಿ ಸ್ವಚ್ಛತಾ ಅಭಿಯಾನ ಜರುಗಿತು. ಒಟ್ಟು ಸುಮಾರು 1300 ಕಾರ್ಯಕರ್ತರು ಪಾಲ್ಗೊಂಡರು. ಸ್ವಚ್ಛತೆಗೆ ಬೇಕಾದ ಸಲಕರಣೆಗಳು, ಟೀಶರ್ಟ್ ಗಳು, ಬ್ಯಾನರ್ ಮತ್ತಿತರ ಸಾಮಗ್ರಿಗಳನ್ನು ಹಾಗೂ ಎಲ್ಲ ಸ್ವಯಂ ಸೇವಕರಿಗೆ ಉಪಾಹಾರದ ವ್ಯವಸ್ಥೆಯನ್ನೂ ರಾಮಕೃಷ್ಣ ಮಿಷನ್ ವತಿಯಿಂದ ಒದಗಿಸಿಲಾಗಿತ್ತು. ದಕ ಜಿಲ್ಲಾ ಪಂಚಾಯತ್ ಸ್ವಚ್ಛ ದಕ್ಷಿಣ ಕನ್ನಡ ಅಭಿಯಾನಕ್ಕೆ ಸಹಕಾರ ನೀಡುತ್ತಿದೆ.
ಈ ಅಭಿಯಾನಕ್ಕೆ ಎಂಆರ್ಪಿಎಲ್ ಪ್ರಾಯೋಜಕತ್ವ ನೀಡಿ ಪೆÇ್ರೀತ್ಸಾಹಿಸುತ್ತಿದೆ. ಈ ಅಭಿಯಾನಗಳಿಗೆ ಸಂಬಂಧಪಟ್ಟಂತೆ ಕೆಲ ಚಿತ್ರಗಳನ್ನು ಲಗತ್ತಿಸಿದ್ದೇವೆ. ದಯಮಾಡಿ ಈ ವರದಿಯನ್ನು ಪ್ರಕಟಿಸಿ ಈ ಮೂಲಕ ನೀವೂ ಈ “ಸ್ವಚ್ಚತಾ ಅಭಿಯಾನ” ದಲ್ಲಿ ಕೈಜೋಡಿಸಿ ಸಹಕರಿಸಬೇಕೆಂದು ಕೇಳಿಕೊಳ್ಳುವೆವು.
ಸ್ವಾಮಿ ಚಿದಂಬರಾನಂದ (ಪ್ರಧಾನ ಸಂಚಾಲಕ), ಸಂಪರ್ಕ – 9448353162