ರಾಮಕೃಷ್ಣ ಮಿಷನ್ ಸ್ವಚ್ಛತಾ ಜನ ಸಂಪರ್ಕ ಅಭಿಯಾನದ ಪ್ರಯುಕ್ತ ಪ್ರತಿನಿತ್ಯ ನಡೆಯುವ ಕಾರ್ಯಕ್ರಮಗಳು

Spread the love

ರಾಮಕೃಷ್ಣ ಮಿಷನ್ ಸ್ವಚ್ಛತಾ ಜನ ಸಂಪರ್ಕ ಅಭಿಯಾನದ ಪ್ರಯುಕ್ತ ಪ್ರತಿನಿತ್ಯ ನಡೆಯುವ ಕಾರ್ಯಕ್ರಮಗಳು

ರಾಮಕೃಷ್ಣ ಮಿಷನ್ ಸ್ವಚ್ಛತಾ ಜನ ಸಂಪರ್ಕ ಅಭಿಯಾನ 2018 ನೇ ಡಿಸೆಂಬರ್ ತಿಂಗಳಲ್ಲಿ ಮಂಗಳೂರಿನ ವಿವಿಧ ಸ್ಥಳಗಳಲ್ಲಿ ಜರುಗಿತು. ದಿನಾಂಕ 5-12-2018 ರಿಂದ 31-12-2018 ವರೆಗೆ ಒಟ್ಟು 24 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.  24 ಸಂಸ್ಥೆಗಳಿಂದ ಸುಮಾರು 2000 ಕ್ಕೂ ಹೆಚ್ಚು ಜನರು ಈ ಜನ ಸಂಪರ್ಕ ಅಭಿಯಾನದಲ್ಲಿ ಪಾಲ್ಗೊಂಡರು. ಇಲ್ಲಿಯವರೆಗೆ ಒಟ್ಟು 800 ಕ್ಕೂ ಅಧಿಕ ಸಾರ್ವಜನಿಕರು ಹಸಿಕಸ ನಿರ್ವಹನೆಗೆ ಮಡಕೆಗಳಿಗಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.

ಶ್ರೀಶಾರದಾ ಮಹಿಳಾ ವೃಂದ: ರಾಮಕೃಷ್ಣ ಮಠದಲ್ಲಿ ಶ್ರೀ ಶಾರದಾ ಮಹಿಳಾ ವೃಂದದ ಸದಸ್ಯೆಯರಿಗೆ ಸ್ವಚ್ಛತೆಯ ಕುರಿತು ಮಾಹಿತಿ ನೀಡಲಾಯಿತು. ಸ್ವಾಮಿ ಧರ್ಮವ್ರತಾನಂದಜಿ ಮಹರಾಜ್ ಸಾನಿಧ್ಯ ವಹಿಸಿ ಪ್ರತಿಯೊಬ್ಬರು ಸ್ವಚ್ಛತೆಯನ್ನು ಮೈಗೂಡಿಕೊಳ್ಳುವಂತೆ ಕg Éನೀಡಿದರು. ಶಾರದಾ ಮಹಿಳಾ ವೃಂದದ ಅಧ್ಯಕ್ಷೆ ಶ್ರೀಮತಿ ಸತ್ಯವತಿ ಸ್ವಾಗತಿಸಿದರು.

ನಿವೇದಿತ ಬಳಗ: ರಾಮಕೃಷ್ಣ ಮಿಷನ್ ಯೋಗಮಂದಿರದಲ್ಲಿ ನಿವೇದಿತ ಬಳಗದ ಸದಸ್ಯರಿಗೆ ಮಡಕೆಗೊಬ್ಬರದ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಯಿತು. ಅಭಿಯಾನದ ಸಂಯೋಜಕ ಉಮಾನಾಥ್ ಕೋಟೆಕಾರ್ ಸ್ವಚ್ಛತೆಯ ಕುರಿತು ಮಾಹಿತಿ ನೀಡಿ, ಪ್ರತಿಯೊಬ್ಬರು ಕಸವನ್ನು ಮನೆಯಲ್ಲಿ ನಿರ್ವಹಿಸುವಂತೆ ಮನವಿ ಮಾಡಿದರು. ಅಧ್ಯಾಪಕಿ ಶ್ರೀಮತಿ ವಿಜಯಲಕ್ಷ್ಮೀ ಕಾರ್ಯಕ್ರಮವನ್ನು ನಿರೂಪಿಸಿದರು.

ಶ್ರೀಸುಮನಾ ಮಾತೃ ಮಂಡಳಿ: ಶ್ರೀಮಂಗಳಾದೇವಿ ದೇವಸ್ಥಾನದಲ್ಲಿ ಸುಮನಾ ಮಾತೃ ಮಂಡಳಿಯ ಸದಸ್ಯೆಯರಿಗೆ ‘ನಮ್ಮ ಕಸ ನಮ್ಮ ಹೊಣೆ’ ಪರಿಕಲ್ಪನೆಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಸ್ವಾಮಿ ಜಿತಕಾಮಾನಂಡಜಿ ಸಾನಿಧ್ಯವಹಿಸಿ ಸ್ವಚ್ಛತೆಯ ಕುರಿತು ಮಾತನಾಡಿದರು. ಪ್ರೇಮಲತಾ ಆಚಾರ್ ಹಾಗೂ ಲಿಲಿತಾ ಉಪಾಧ್ಯಾಯ ಕಾರ್ಯಕ್ರಮವನ್ನು ಸಂಯೋಜಿಸಿದರು.

ಭಗಿನಿ ಸಮಾಜ: ಜೆಪ್ಪುನಲ್ಲಿರುವ ಭಗಿನಿ ಸಮಾಜದಲ್ಲಿ ಸ್ವಚ್ಛತಾ ಸಂಪರ್ಕ ಅಭಿಯಾನದ ಕಾರ್ಯಕ್ರಮವನ್ನು ಹಮಿಕೊಳ್ಳಲಾಗಿತ್ತು. ಸುಮಾರು ಐವತ್ತು ಗೃಹಿಣಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಸಿಕಸ ಹಾಗೂ ಒಣಕಸದ ಮಹತ್ವದ ಬಗ್ಗೆ ವಿವರಿಸಲಾಯಿತು. ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಭಟ್ ಮುಖ್ಯ ಅತಿಥಿಯಾಗಿದ್ದರು.  ಶ್ರೀಮತಿ ರತ್ನಾ ಆಳ್ವ ಕಾರ್ಯಕ್ರಮವನ್ನು ಸಂಘಟಿಸಿದರು. ಸಚಿನ್ ಶೆಟ್ಟಿ ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆ ನೀಡಿದರು.

ಎಸ್ ಸಿ ಎಸ್ ಆಸ್ಪತ್ರೆ: ಬೆಂದೂರ್‍ವೆಲ್‍ನಲ್ಲಿರುವ ಎಸ್ ಸಿ ಎಸ್ ಆಸ್ಪತ್ರೆಯ ಸಿಬ್ಬಂದಿಗೆ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು. ರಮಾ ಸೊರಕೆ ಅತಿಥಿಗಳನ್ನು ಸಭಿಕರನ್ನು ಸ್ವಾಗತಿಸಿದರು. ಡಾ ಜೀವರಾಜ್ ಸೊರಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಉಮಾನಾಥ್ ಕೋಟೆಕಾರ್ ಸಂಪರ್ಕ ಅಭಿಯಾನದ ಉದ್ದೇಶದ ಕುರಿತು ಮಾತನಾಡಿದರು. ಸುಮಾರು 150 ಜನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪವನ್ ಅಪಾರ್ಟ್‍ಮೆಂಟ್: ಕರಂಗಲ್ಪಾಡಿಯಲ್ಲಿರುವ ಅರೈಸ್ ಅವೇಕ್ ಪಾರ್ಕ್‍ನಲ್ಲಿ ಪವನ್ ಅಪಾರ್ಟ್‍ಮೆಂಟ್ ನಿವಾಸಿಗಳು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಪ್ರಭಾಕರ ಶೆಟ್ಟಿ ಮಾತನಾಡಿ ರಾಮಕೃಷ್ಣ ಮಿಶನ್ ಸ್ವಚ್ಛತಾ ಕಾರ್ಯಗಳ ಮಾಹಿತಿ ನೀಡಿದರು. ಬಳಿಕ ಸ್ವಯಂ ಸೇವಕ ಸಚಿನ ಪಾಟ್ ಕಾಂಪೆÇೀಸ್ಟಿಂಗ್ ಬಗ್ಗೆ ತಿಳಿಸಿ, ಪ್ರತಿ ಮನೆಯಲ್ಲಿ ಇದನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದರು.

ಜಿಲ್ಲಾ ಪಂಚಾಯತ್: ರಾಮಕೃಷ್ಣ ಮಠದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆ ನೀಡಲಾಯಿತು. ಸ್ವಾಮಿ ಏಕಗಮ್ಯಾನಂದಜಿ ಕಸದಿಂದ ಆದಾಯ ಗಳಿಸುವ ಬಗ್ಗೆ ವಿವರಿಸಿ ತ್ಯಾಜ್ಯ ಭಾರವಾಗದೇ, ಅದೊಂದು ಆದಯದ ಮೂಲವಾಗಬೇಕಾಗಿದೆ ಎಂದು ತಿಳಿಸಿ ಅದರ ಅನುಷ್ಠಾನದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆರ್ ಸೆಲ್ವಮಣಿ, ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಂಯೋಜಕಿ ಶ್ರೀಮತಿ ಮಂಜುಳಾ ಸೇರಿದಂತೆ  ಸುಮಾರು ನೂರಕ್ಕೂ ಅಧಿಕ ಗ್ರಾಮಗಳಿಂದ  ಇನ್ನೂರಕ್ಕೂ ಅಧಿಕ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಶ್ರೀವಿಠೋಭಾ ದೇವಸ್ಥಾನ: ಗೋಕರ್ಣ ಮಠದ ಭಕ್ತಾದಿಗಳು ಹಾಗೂ ಸಾರ್ವಜನಿಕರಿಗಾಗಿ ಶ್ರೀ ವಿಠೋಭಾ ದೇವಸ್ಥಾನದ ಸಭಾಂಗಣದಲ್ಲಿ ಸ್ವಚ್ಛತೆಯ ಮಾಹಿತಿ ಕಾರ್ಯಕ್ರಮ ಜರುಗಿತು. ವಿಠಲದಾಸ್ ಪ್ರಭು ಕಾರ್ಯಕ್ರಮಕ್ಕೆ ಆಗಮಿಸಿದ ಸಮಸ್ತರನ್ನು ಸ್ವಾಗತಿಸಿದರು. ಉಮಾನಾಥ್ ಕೋಟೆಕಾರ್ ಮಾತನಾಡಿ ಸ್ವಚ್ಛತೆಯ ವಿµಯÀದಲ್ಲಿ ನಾಗರಿಕರ ಕರ್ತವ್ಯಗಳ ಕುರಿತು ಮಾತನಾಡಿದರು. ಕಮಲಾಕ್ಷ ಪೈ ಧನ್ಯವಾದ ಸಮರ್ಪಿಸಿದರು.

ಮಹಿಳಾ ಸಭಾ: ಲೈಟ್ ಹೌಸ್ ಹಿಲ್ ರಸ್ತೆಯಲ್ಲಿರುವ ಮಹಿಳಾ ಸಭಾದಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅಧ್ಯಕ್ಷರಾದ ಜ್ಯೋತಿ ಆಳ್ವ, ಶ್ರೀಮತಿ ವಜ್ರಾ ರಾವ್, ರಾಜಿ ಬಾಲಕೃಷ್ಣ ಸೇರಿದಂತೆ ಒಟ್ಟು ಎಪ್ಪತ್ತ್ತು ಮಹಿಳೆಯರು ಉಪಸ್ಥಿತರಿದ್ದರು. ಮನೆಯಲ್ಲಿಯೇ ತ್ಯಾಜ್ಯವನ್ನು ವಿಂಗಡಿಸಿ ನಿರ್ವಹಿಸುವ ಕುರಿತು ಮಾಹಿತಿ ನೀಡಲಾಯಿತು. ಆಶ್ರಮದ ಕಾರ್ಯಕರ್ತ ಗುರುಪ್ರಸಾದ್ ರಾವ್ ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಿದರು. ಶ್ರೀಮತಿ ವಿಜಯಲಕ್ಷ್ಮೀ ಭಟ್ ಸ್ವಾಗತಿಸಿದರು.

ಗುರುನಗರ: ಯಯ್ಯಾಡಿಯಲ್ಲಿರುವ ಗುರುನಗರ ಶ್ರೀನಾರಾಯಣ ಮಂದಿರದಲ್ಲಿ ಸ್ವಚ್ಛತಾ ಜನಸಂಪರ್ಕ ಕಾರ್ಯಕ್ರಮ ನಡೆಯಿತು. ಕಮಲಾಕ್ಷ ಬಂಗೇರಾ, ಜಯಲಕ್ಷೀ  ಮುಖ್ಯ ಅಭ್ಯಾಗತರಾಗಿದ್ದರು. ಸ್ವಚ್ಛತೆಯ ವಿಷಯದಲ್ಲಿ ಜನರ ಪಾತ್ರವೇನು? ಎನ್ನುವುದರ ಕುರಿತು ರಾಮಕೃಷ್ಣ ಮಿಷನ್ ಕಾರ್ಯಕರ್ತರು ಮಾತನಾಡಿದರು.  ಫ್ರೆಂಡ್ಸ್ ಫಾರ್ ಎವರ್ ಸ್ವಚ್ಛತಾ ತಂಡದ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರುಗಿತು. ಸುಭೋದಯ ಆಳ್ವ, ಸುಜಿತ್ ಭಂಡಾರಿ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದರು.

ಪಡೀಲ್-ವೀರನಗರ: ನವಕೀರ್ತಿ ಯುವಕ ಮಂಡಳ ಹಾಗೂ ನವಜ್ಯೋತಿ ಮಹಿಳಾ ಮಂಡಳದ ಸಹಯೋಗದಲ್ಲಿ ವೀರನಗರದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತು.್ತ ಶ್ರೀಮತಿ ಭವ್ಯಾ ಅತಿಥಿಗಳನ್ನು ಸ್ವಾಗತಿಸಿದರು. ಸಚಿನ್ ಶೆಟ್ಟಿ ಮಾತನಾಡಿ ಮನೆಯಲ್ಲಿನ ಹಸಿತ್ಯಾಜ್ಯವನ್ನು ನಿರ್ವಹಿಸುವ ಬಗೆಯನ್ನು ತಿಳಿಸಿಕೊಟ್ಟರು. ಸಂದೀಪ ಶೆಟ್ಟಿ ಹಾಗೂ ಶ್ರೀಮತಿ ಸುನಿತಾ ಅತಿಥಿಗಳಾಗಿ ಭಾಗವಹಿಸಿದ್ದರು. ಕೋಡಂಗೆ ಬಾಲಕೃಷ್ಣ ನಾೈಕ್ ಕಾರ್ಯಕ್ರಮವನ್ನು ಆಯೋಜಿಸಿದರು.

ಚಿಲಿಂಬಿ: ಶ್ರೀಶಾರದಾ ನಿಕೇತನ ಚಿಲಿಂಬಿಯಲ್ಲಿ ಸ್ವಚ್ಛತಾ  ಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.  ವಿಶೇಷ ಆಹ್ವಾನಿತರಾಗಿ ಸುಬ್ರಾಯ ನಾಯಕ ಉಪಸ್ಥಿತರಿದ್ದರು. ಶ್ರೀಶಾರದಾ ನಿಕೇತನದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಡುಗೆ ಮನೆಯಿಂದ ಉತ್ಪತ್ತಿಯಾಗುವ ಕಸದ ನಿರ್ವಹಣೆಯ ಕುರಿತು ಮಾಹಿತಿ ಪಡೆದರು. ವಿಠಲದಾಸ ಪ್ರಭು ಕಾರ್ಯಕ್ರಮ ಆಯೋಜಿಸಿದರು.

ರಾಮಕೃಷ್ಣ ಮಠ: ವಿವೇಕಾನಂದ ಯೋಗಮಂದಿರದಲ್ಲಿ ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆ ನಡೆಯಿತು. ಮೋಹನ್ ಕುಂಬ್ಳೆಕರ್ ಹಾಗೂ ಯೋಗಾಭ್ಯಾಸಿಗಳು ಕಾರ್ಯಕ್ರಮzಲ್ಲಿ ಭಾಗವಹಿಸಿ ಸಂವಾದ ನಡೆಸಿದರು.

ಉಜ್ಜೋಡಿ: ಯುವವಾಹಿನಿ ಉಜ್ಜೋಡಿ ಘಟಕದಿಂದ ಮಹಾಕಾಳಿ ದೇವಸ್ಥಾನದಲ್ಲಿ ಸ್ವಚ್ಛತಾ ಸಂಪರ್ಕ ಕಾರ್ಯ ನಡೆಯಿತು. ಭವಿತ್ ರಾಜ್, ಗೋಪಾಲ ಪೂಜಾರಿ ಮತ್ತಿತರರು ಭಾಗವಹಿಸಿದರು. ಪ್ರಶಾಂತ್ ಯಕ್ಕೂರು ಕಾರ್ಯಕ್ರಮವನ್ನು ಸಂಯೋಜಿಸಿದರು.

ಮಾಡೂರು: ವಿಶ್ವಭಾರತಿ ಮಂದಿರದ ಸಹಯೋಗದಲ್ಲಿ ಸತ್ಯನಾರಾಯಣ ನಗರ ಮಾಡೂರಿನಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಂಜನ್ ಬೆಳ್ಳರಪಾಡಿ ಸ್ವಚ್ಛತೆಯ ಮಹತ್ತೆಯ ಕುರಿತಂತೆ ಸವಿಸ್ತಾರವಾಗಿ ಮಾತನಾಡಿದರು.  ಉದಯ್ ಕೆ ಪಿ ಕಾರ್ಯಕ್ರಮದ ನೇತೃತ್ವ  ವಹಿಸಿದ್ದರು.

ಮಂಗಳಾದೇವಿ:  ಕಿಟ್ಟಿ ಪಾರ್ಟಿ ಮಹಿಳಾ ಮಂಡಳದ ಸಹಯೋಗದಲ್ಲಿ ಮಂಗಳಾದೇವಿಯಲ್ಲಿರುವ ಶ್ರೀದೇವಿ ನಿಲಯದಲ್ಲಿ ಪಾಟ್ ಕಾಂಪೆÇೀಸ್ಟಿಂಗ್ ಕುರಿತು ಪ್ರಾತ್ಯಕ್ಷಿಕೆ ನಡೆಯಿತು. ನಲ್ಲೂರು ಸಚಿನ ಶೆಟ್ಟಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಲಕ್ಷ್ಮೀ ಆಳ್ವ,  ರತ್ನಾ ಆಳ್ವ , ಶೈಲಜಾ  ಹಾಗೂ ಇನ್ನಿತರ ಸದಸ್ಯರು ಪಾಲ್ಗೊಂಡಿದ್ದರು.

ಚೇತನಾ ಶಾಲೆ: ಸೇವಾ ಭಾರತಿ ಸಹಯೋಗದಲ್ಲಿ ಚೇತನಾ ಶಾಲೆಯಲ್ಲಿ ಜನಸಂಪರ್ಕ ಅಭಿಯಾನ ಜರುಗಿತು.  ಸೇವಾ ಭಾರತಿ ಅಧ್ಯಕ್ಷೆ ಸುಮತಿ ಶೆಣೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.  ಸ್ವಚ್ಛತೆಯ ಕುರಿತು ಸವಿವರವಾದ ಮಾಹಿತಿ ನೀಡಲಾಯಿತು. ಹಿರಿಯರಾದ ಶ್ರೀನಾಗೇಶ್ ಹಾಗೂ ಕಮಲಾಕ್ಷ ಪೈ ಕಾರ್ಯಕ್ರಮವನ್ನು ಸಂಘಟಿಸಿದರು.

ಲಯನ್ಸ್ ಕ್ಲಬ್: ಕದ್ರಿಯಲ್ಲಿರುವ ಲಯನ್ಸ್ ಸೇವಾ  ಮಂದಿರದಲ್ಲಿ  ಕಂಕನಾಡಿ ಲಯನ್ಸ್ ಕ್ಲಬ್ ವತಿಯಿಂದ ಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷೆ ಉಮಾ ಹೆಗ್ಡೆ ಮುಖ್ಯ ಅತಿಥಿಯಾಗಿದ್ದರು. ಉಮಾನಾಥ್ ಕೋಟೆಕಾರ್ ಸ್ವಚ್ಛತೆಯ ಮಾಹಿತಿ ನೀಡಿದರು. ಬಿ ಸದಾಶಿವ್ ರೈ  ಕಾರ್ಯಕ್ರಮ ಸಂಯೋಜಿಸಿದರು

ಜೆಪ್ಪು: ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಸಂಪರ್ಕ ಅಭಿಯಾನವನ್ನು ಜೆಪ್ಪು ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು. ಡಾ. ಸುಜಯಕುಮಾರ್ ಹಾಗೂ ಶ್ರೀಮತಿ ಜಯಶ್ರೀ ಪವಾರ್ ಉಪಸ್ಥಿತರಿದ್ದರು. ಸಚಿನ್ ಶೆಟ್ಟಿ ಹಾಗೂ ಗುರುಪ್ರಸಾದ ರಾವ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕೊಟ್ಟಾರ್: ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆಯ ಕಾರ್ಯಕ್ರಮ ನೇತ್ರಾವತಿ ಸಭಾಭವನದಲ್ಲಿ ನಡೆಯಿತು. ಜಿಪಂ ಉಪಕಾರ್ಯದರ್ಶಿ ಎಂ ವಿ ನಾಯಕ್, ಯೋಜನಾ ನಿರ್ದೇಶಕ ಲೋಕೇಶ್, ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಂಯೋಜಕಿ  ಮಂಜುಳಾ ಜಿ ಸೇರಿದಂತೆ ಅನೇಕ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಸ್ವಾಮಿ ಏಕಗಮ್ಯಾನಂದಜಿ ಸ್ವಚ್ಛತೆಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು.

ಮುಳಿಹಿತ್ಲು: ಶ್ರೀಅಂಬಾಮಹೇಶ್ವರಿ ಭಜನಾ ಮಂದಿರದಲ್ಲಿ ಸ್ವಚ್ಛತಾ ಸಂಪರ್ಕ ಅಭಿಯಾನ ಜರುಗಿತು. ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ದಿಲೀಪ ಕುಮಾರ್ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು. ಉದಯ ಕೆ ಪಿ ಜಾಗೃತಿ ಭಾಷಣ ಮಾಡಿದರು. ಪುನೀತ್ ಪೂಜಾರಿ ಅತಿಥಿಗಳನ್ನು ಸ್ವಾಗತಿಸಿ, ವಂದಿಸಿದರು.

ಬೋಳಾರ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸ್ವಚ್ಛತಾ ಸಂಪರ್ಕ ಅಭಿಯಾನ ನಡೆಯಿತು. ಶ್ರೀಮತಿ ಗೀತಾ ಶಾನಭೋಗ, ಪೂರ್ಣಿಮಾ ಹಾಗೂ ಅನೇಕ ಜನ ಪಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಸದ ನಿರ್ವಹಣೆಯ ಕುರಿತ ಸಂವಾದದಲ್ಲಿ ಭಾಗಿಯಾದರು.

ಪ್ರತಿದಿನ ನಡೆಯುತ್ತಿರುವ ಈ ಸ್ವಚ್ಛತಾ ಜನಸಂಪರ್ಕ ಅಭಿಯಾನದ ನೇತೃತ್ವವನ್ನು ಅಭಿಯಾನದ ಪ್ರಧಾನ ಸಂಯೋಜಕ ಉಮಾನಾಥ್ ಕೋಟೆಕಾರ್ ವಹಿಸಿದ್ದರು. ಎಂಆರ್‍ಪಿಎಲ್ ಸಂಸ್ಥೆ ಈ ಅಭಿಯಾನಕ್ಕೆ ಪ್ರಾಯೋಜಕತ್ವ ನೀಡಿ ಪೆÇ್ರೀತ್ಸಾಹಿಸುತ್ತಿದೆ. ಈ ಕಾರ್ಯಕ್ರಮಗಳಿಗೆ ಸಂಬಂಧಪಟ್ಟಂತೆ ಕೆಲ ಚಿತ್ರಗಳನ್ನು ಲಗತ್ತಿಸಿದ್ದೇವೆ. ದಯಮಾಡಿ ಈ ವರದಿಯನ್ನು ಪ್ರಕಟಿಸಿ ಈ ಮೂಲಕ ನೀವೂ ಈ “ಸ್ವಚ್ಛತಾ ಮಂಗಳೂರು ಅಭಿಯಾನ” ದಲ್ಲಿ ಕೈಜೋಡಿಸಿ ಸಹಕರಿಸಬೇಕೆಂದು ಕೇಳಿಕೊಳ್ಳುವೆವು.


Spread the love