Home Mangalorean News Kannada News ರಾಮಕೃಷ್ಣ ಮಿಷನ್ : ಸ್ವಚ್ಛ ಭಾರತ ಶ್ರಮದಾನ ಕಾರ್ಯಕ್ರಮದ ಶುಭಾರಂಭ

ರಾಮಕೃಷ್ಣ ಮಿಷನ್ : ಸ್ವಚ್ಛ ಭಾರತ ಶ್ರಮದಾನ ಕಾರ್ಯಕ್ರಮದ ಶುಭಾರಂಭ

Spread the love

ರಾಮಕೃಷ್ಣ ಮಿಷನ್ : ಸ್ವಚ್ಛ ಭಾರತ ಶ್ರಮದಾನ ಕಾರ್ಯಕ್ರಮದ ಶುಭಾರಂಭ

ಮಂಗಳೂರು : ರಾಮಕೃಷ್ಣ ಮಿಷನ್ ಸ್ವಚ್ಚತಾ ಅಭಿಯಾನದ ಅಂಗವಾದ ಸ್ವಚ್ಛ ಭಾರತ ಶ್ರಮದಾನ ಕಾರ್ಯಕ್ರಮದ ಶುಭಾರಂಭ 5 ನವೆಂಬರ್ ಬೆಳಿಗ್ಗೆ 7.30 ಕ್ಕೆ ರಾಮಕೃಷ್ಣ ಮಠದಲ್ಲಿ ನೆರವೇರಿತು.

ಬೆಳಿಗ್ಗೆ 7.30ಕ್ಕೆ ವೇದಘೋಷದೊಂದಿಗೆ ಪ್ರಾರಂಭವಾದ ಸಭಾ ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠ ಮತ್ತು ಮಿಷನ್ನಿನ ವಿಶ್ವಸ್ತರಾದ ಸ್ವಾಮಿ ಮುಕ್ತಿದಾನಂದಜಿ, ಲಂಡನ್ ರಾಮಕೃಷ್ಣ ವೇದಾಂತ ಸೊಸೈಟಿಯ ಮುಖ್ಯಸ್ಥರಾದ ಸ್ವಾಮಿ ಸರ್ವಸ್ಥಾನಂದಜಿ, ಮಂಗಳೂರು ರಾಮಕೃಷ್ಣ ಮಠದ ಮುಖ್ಯಸ್ಥರಾದ ಸ್ವಾಮಿ ಜಿತಕಾಮಾನಂದಜಿ, ಅಭಿಯಾನದ ಮಾರ್ಗದರ್ಶಿಗಳಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತು ಶ್ರೀ ಎಮ್. ಆರ್. ವಾಸುದೇವ್ ಹಾಗೂ ಎಮ್. ಆರ್. ಪಿ. ಎಲ್ ನ ಮಹಾಪ್ರಬಂಧಕರಾದ À ಶ್ರೀ ಬಿ. ಹೆಚ್. ವಿ. ಪ್ರಸಾದ್ ಉಪಸ್ಥಿತರಿದ್ದರು.

ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಸ್ವಚ್ಛ ಭಾರತ ಶ್ರಮದಾನ ರೂಪುರೇಷೆಯನ್ನು ನೀಡಿದ ನಂತರ ಮಂಗಳೂರಿನ ಮಠದ ಮುಖ್ಯಸ್ಥರಾದ ಸ್ವಾಮಿ ಜಿತಕಾಮಾನಂದಜಿ ಅವರು ಸ್ವಚ್ಛ ಮಂಗಳೂರು ಅಭಿಯಾನದ ಮೊದಲ ಮೂರು ಹಂತಗಳು ನಡೆದು ಬಂದ ಬಗೆಯನ್ನು ವಿವರಿಸಿ ಈ ಅಭಿಯಾನದ ಮೂಲ ಉದ್ದೇಶ ಜನರಲ್ಲಿ ಸ್ವಚ್ಛತೆಯನ್ನು ಕುರಿತಂತೆ ಜಾಗೃತಿಯನ್ನು ಮೂಡಿಸುವುದು. ಈ ನಿಟ್ಟಿನಲ್ಲಿ ಇಂದು ಪ್ರಾರಂಭವಾಗುತ್ತಿರುವ ಶ್ರಮದಾ£ದಂತೆ ಮುಂದಿನ 35 ವಾರಗಳ ವರೆಗೆ ಅವ್ಯಾಹತವಾಗಿ ನಡೆಯಲಿದೆ. ಸ್ವಚ್ಛ ಮಂಗಳೂರು ಕಲ್ಪನೆಯನ್ನು ಸಾಕಾರ ಮಾಡುವ ಇಚ್ಛೆಯುಳ್ಳ ಎಲ್ಲ ಜನರೂ ಈ ಶ್ರಮದಾನ ಕಾರ್ಯಕ್ರಮದಲ್ಲಿ ಕೈಜೋಡಿಸಿ ಇದನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು.

ಕಾರ್ಯಕ್ರಮವನ್ನು ದೀಪ ಪ್ರಜ್ವಲನ ಮೂಲಕ ಉದ್ಘಾಟನೆಯನ್ನು ಮಾಡಿದ ಸ್ವಾಮಿ ಮುಕ್ತಿದಾನಂದಜಿ ಅವರು ಸ್ವಾಮಿ ಜಿತಕಾಮಾನಂದಜಿಯವರ ನೇತೃತ್ವದಲ್ಲಿ ಮಂಗಳೂರು ರಾಮಕೃಷ್ಣ ಮಿಷನ್ ಕೈಗೊಂಡಿರುವ ಸ್ವಚ್ಛತಾ ಅಭಿಯಾನವನ್ನು ಮನಸಾರೆ ಶ್ಲಾಘಿಸಿದರು ಮತ್ತು ಜನರು ತಮ್ಮ ಮನೆ-ತಮ್ಮ ಸುತ್ತಮುತ್ತಲಿನ ಪರಿಸರ – ತಮ್ಮ ಊರು ಮತ್ತು ತಮ್ಮ ದೇಶ – ಇವೆಲ್ಲವನ್ನೂ ಶುಚಿಯಾಗಿಡುವತ್ತ ತಮ್ಮ ಕೈಲಾದಷ್ಟು ಪ್ರಯತ್ನ ಮಾಡಬೇಕೆಂದು ಕರೆ ಕೊಟ್ಟರು. ಕಾರ್ಯಕ್ರಮದಲ್ಲಿ ನೆರೆದಿದ್ದ ಮಕ್ಕಳ – ಯುವಕರ ಮತ್ತು ವಯಸ್ಕರ ಉತ್ಸಾಹವನ್ನೂ ಮೆಚ್ಚಿಕೊಂಡರು.

ಸ್ವಾಮಿ ಸರ್ವಸ್ಥಾನಂದಜಿಯವರು ದೇಶವನ್ನು ಶುಚಿಯಾಗಿಸುವುದು ಒಂದು ದಿನದ ಕಾರ್ಯವಲ್ಲ. ಮತ್ತು ಅದು ಕೇವಲ ಸರ್ಕಾರೀ ಯೋಜನೆಯಲ್ಲ. ಅದನ್ನು ಯಶಸ್ವಿಯಾಗಿಸುವುದು ಪ್ರತಿಯೊಬ್ಬ ನಾಗರಿಕ ಪ್ರಜೆಯ ಕರ್ತವ್ಯ. ಸಮಾಜಸೇವೆಯ ಪ್ರತಿಯೊಂದು ಅವಕಾಶದಲ್ಲಿಯೂ ರಾಮಕೃಷ್ಣ ಮಿಶನ್ ಮುಂಚೂಣಿಯಲ್ಲಿದ್ದು ಜನರಿಗೆ ಮಾರ್ಗದರ್ಶನ ಮಾಡುತ್ತ ಬಂದಿದೆ. ಹಾಗೆಯೇ ಮಂಗಳೂರಿನಲ್ಲಿಯೂ ರಾಮಕೃಷ್ಣ ಮಿಷನ್ ಈ ಅಭಿಯಾನದ ಉಸ್ತುವಾರಿಯನ್ನು ಹೊತ್ತು ಮತ್ತು ಮಾರ್ಗದರ್ಶನವನ್ನು ನೀಡುತ್ತಿದ್ದು ಎಲ್ಲರೂ ಅವರೊಂದಿಗೆ ಕೈಜೋಡಿಸಿ ಅದನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಎಮ್. ಆರ್. ಪಿ. ಎಲ್. ನ ಮಹಾಪ್ರಬಂಧಕರಾದ ಶ್ರೀ ಬಿ. ಹೆಚ್. ವಿ. ಪ್ರಸಾದ್ ಅವರು ಕಳೆದ ಮೂರು ಹಂತಗಳಲ್ಲಿ ರಾಮಕೃಷ್ಣ ಮಿಷನ್ನಿನೊಂದಿಗೆ ಈ ಅಭಿಯಾನದಲ್ಲಿ ಎಮ್. ಆರ್. ಪಿ. ಎಲ್ ಕೈಜೋಡಿಸಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯ. ಅದರಂತೆ ನಾಲ್ಕನೇ ಹಂತದಲ್ಲಿಯೂ ಸಂಸ್ಥೆ ಆರ್ಥಿಕಸಹಾಯವನ್ನು ನೀಡುವುದಾಗಿ ಭರವಸೆಯಿತ್ತರು. ಶ್ರೀ ಎಮ್. ಆರ್. ವಾಸುದೇವ್ ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಸ್ವಾಮಿ ಏಕಗಮ್ಯಾನಂದಜಿಯವರು ಧನ್ಯವಾದವನ್ನು ಸಮರ್ಪಿಸಿದರು.
ಕಾರ್ಯಕ್ರಮದ ನಂತರ ಸ್ವಯಂಸೇವಕರೆಲ್ಲರಿಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಸುಮಾರು 250 ಕ್ಕೂ ಅಧಿಕ ಸ್ವಯಂಸೇವಕರು ಭಾಗವಹಿಸಿದ್ದರು. ಅದರಲ್ಲಿ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮತ್ತು ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಶಾರದಾ ಮಹಿಳಾ ವೃಂದ, ನಿವೇದಿತಾ ಬಳಗದ ಸದಸ್ಯರು ಭಾಗವಹಿಸಿದ್ದರು.


Spread the love

Exit mobile version