ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು; 1000 ಜನ ಸ್ವಯಂಸೇವಕರಿಂದ ಸ್ವಚ್ಛತಾ ಕಾರ್ಯ

Spread the love

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು; 1000 ಜನ ಸ್ವಯಂಸೇವಕರಿಂದ ಸ್ವಚ್ಛತಾ ಕಾರ್ಯ

ಮಂಗಳೂರು: ರಾಮಕೃಷ್ಣ ಮಿಷನ್ನಿನಿಂದ ಪ್ರೇರೇಪಿತರಾದ ಸುಮಾರು 1000 ಜನ ಸ್ವಯಂ ಸೇವಕರು ಮಂಗಳೂರಿನ ಸುತ್ತಮುತ್ತಲಿನ ಹದಿಮೂರು ಪ್ರದೇಶಗಳಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನವನ್ನು ಕೈಗೊಂಡರು.

ಕರಂಗಲಪಾಡಿ: ನಗರದ ಕರಂಗಲಪಾಡಿಯಲ್ಲಿ ಸ್ವಚ್ಛ ಮಂಗಳೂರು ಅಭಿಯಾನದ ಸದಸ್ಯರು ಸ್ವಚ್ಛತಾ ಕೈಂಕರ್ಯ ಕೈಗೊಂಡರು. ಶ್ರೀಸುಬ್ರಮಣ್ಯ ಸದನದ ಅಧ್ಯಕ್ಷರಾದ ವಾಸುದೇವ ಎಂ ಆರ್ ಉಪಸ್ಥಿತಿಯಲ್ಲಿ ಸ್ವಚ್ಛ ಮಂಗಳೂರು ಅಭಿಯಾನದ ಪ್ರಧಾನ ಸಂಚಾಲಕರಾದ ಸ್ವಾಮಿಚಿದಂಬರಾನಂದಜಿ ಹಾಗೂ ಮನಪಾ ಸದಸ್ಯ ಪ್ರಕಾಶ ಸಾಲಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೈಲ್‍ರಸ್ತೆ, ಸುಬ್ರಮಣ್ಯ ಸಭಾ ಸುತ್ತಮುತ್ತ ಶುಚಿತ್ವ ಕಾರ್ಯ ನಡೆಯಿತು. ಸಂಯೋಜಕ ಶ್ರೀಕಾಂತ್ ಪಿ ರಾವ್, ಮನೀಶ್‍ರಾವ್‍ಯು , ರಂಗನಾಥಕಿಣಿ ಮತ್ತಿತರರು ಸಕಿಯವಾಗಿ ಭಾಗವಹಿಸಿದರು.

ಸುಧಾಕರ ಕಾವೂರು ನೇತೃತ್ವದಲ್ಲಿ ಬಿಜಿಎಸ್ ಶಾಲೆಯ ಮುಂಭಾಗದ ರಸ್ತೆಯಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಬೆಳಿಗ್ಗೆ 7;30 ಕ್ಕೆ ಸ್ವಚ್ಛ ಮಂಗಳೂರು ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ಹಾಗೂ ಮನಪಾ ಸದಸ್ಯ ಮಧುಕಿರಣ ಸ್ವಚ್ಛತಾ ಕೈಂಕರ್ಯಕ್ಕೆ ಚಾಲನೆ ನೀಡಿದರು. ರಸ್ತೆಯ ಎರಡೂ ಬದಿ ಸ್ವಚ್ಛ ಮಾಡಿದ ನಂತರ ಯುವ ಸ್ಯಯಂ ಸೇವಕರು ಬಸ್ ತಂಗುದಾಣವನ್ನು ಬಣ್ಣ ಹಚ್ಚಿ ಸುಂದರಗೊಳಿಸಿದ್ದಾರೆ. ಶಾಲಾ ವಠಾರವೆಂಬ ಫಲಕವನ್ನು ನವೀಕರಿಸಲಾಗಿದೆ.

ಸೇಂಟ್‍ಆಗ್ನೇಸ್: ಸಹ್ಯಾದ್ರಿ ಇಂಜನಿಯರಿಂಗ್ ವಿದ್ಯಾರ್ಥಿಗಳು ಇಂದು ಆಗ್ನೇಸ್ ವೃತ್ತದ ಮೂರೂ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ಮಾಡಿದರು. ಶಾಸಕರಾದ ಜೆಆರ್ ಲೋಬೊ ಸೇಂಟ್ ಆಗ್ನೇಸ್ ಕಾಲೇಜಿನ ಮುಂಭಾಗದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪೆÇ್ರೀ. ಉಮಾಶಂಕರ್. ಪೆÇ್ರೀಶೇಷಪ್ಪ ಅಮೀನ್ ಹಾಜರಿದ್ದರು. ಪ್ರಕಾಶ್ ಗರೋಡಿ ಹಾಗೂ ಸಹ್ಯಾದ್ರಿ ಕಾಲೇಜಿನ ಕಾರ್ಯಕ್ರಮ ನಿರ್ವಹಣಾಧಿಕಾರಿ ಶ್ರೀಲತಾ ಯು ಎ ವಿದ್ಯಾರ್ಥಿಗಳನ್ನು ಮಾರ್ಗದರ್ಶಿಸಿದರು.

image035swacch-mangaluru-20161023-035 image034swacch-mangaluru-20161023-034 image033swacch-mangaluru-20161023-033 image032swacch-mangaluru-20161023-032 image031swacch-mangaluru-20161023-031 image030swacch-mangaluru-20161023-030 image029swacch-mangaluru-20161023-029 image028swacch-mangaluru-20161023-028 image027swacch-mangaluru-20161023-027 image026swacch-mangaluru-20161023-026

ಮಂಗಳಾ ನಗರ: ಶ್ರೀ ಶಾರದಾ ಮಹಿಳಾ ವñಂದದ ಸದಸ್ಯರಿಂದ ರಾಮಕೃಷ್ಣ ಮಠದ ಮುಂಭಾಗದಿಂದ ಆರಂಭಿüಸಿ ಮಂಗಳಾ ನಗರದ ಹಲವೆಡೆ ಪೆÇರಕೆ ಹಿಡಿದು ಗುಡಿಸಿದರು. ಬೆಳಿಗ್ಗೆ 7:30 ಕ್ಕೆ ರಾಮಕೃಷ್ಣ ಮಠದ ಸ್ವಾಮಿದ್ಯುತಿಮಯಾನಂದಜಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿದರು. ಬ್ರಹ್ಮಚಾರಿ ನಿಶ್ಚಯ ಹಾಗೂ ಸುರೇಶ್ ಶೆಟ್ಟಿ ಮಾರ್ಗದರ್ಶಿಸಿದರು. ಸತ್ಯವತಿ ಕಾರ್ಯಕ್ರಮ ಸಂಘಟಿಸಿದರು.

ದೇರೆಬೈಲ್ : ಭಾಗ್ಯಜ್ಯೋತಿ ಸೇವಾ ಸಮಿತಿಯ ಸದಸ್ಯರು ಹಾಗೂ ದೇರೆಬೈಲ್ ನಾಗರಿಕರು ದೇರೆಬೈಲಿನಲ್ಲಿ ಅಭಿüಯಾನವನ್ನು ಕೈಗೊಂಡರು. ಕಸಾಪ ಜಿಲ್ಲಾಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ ಹಾಗೂ ಮಹಾಕಾಳಿ ದೇವಸ್ಥಾನದ ಮೊಕ್ತೇಸರ ಸೀತಾರಾಂ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಸುಮಾರು 80ಜನ ಸ್ವಂiÀiಂ ಸೇವಕರು ಸ್ವಚ್ಛತೆ ಕೈಗೊಂಡರು. ಸಂಯೋಜಕ ಜಗದೀಶ್ ಶೆಟ್ಟಿ, ಲಕ್ಷಣದೇವಾಡಿಗ, ರಾಘವ ಕೊಂಚಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

25 ಯೆಯ್ಯಾಡಿ: ಏರ್ ಪೆÇೀರ್ಟ್ ರಸ್ತೆಯೆ ಯ್ಯಾಡಿಯಲ್ಲಿಯೂ ಸ್ವಚ್ಛತಾ ಸೇವೆಯನ್ನು ಹಮ್ಮಿಕೊಳ್ಳಲಾಗಿತ್ತು. ಶುಭೋದಯ ಆಳ್ವರ ನೇತೃತ್ವದ ತಂಡ ರಸ್ತೆಯ ಇಕ್ಕೆಲಗಳನ್ನು ಶುಚಿಗೊಳಿಸಿದರು. ಕಾರ್ಯಕ್ರಮಕ್ಕೆ ಅಶೋಕಕುಮಾರ ಹೆಗ್ಡೆ ಹಾಗೂ ದೇವದಾಸ್ ಆಳ್ವ ಹಸಿರು ನಿಶಾನೆ ತೋರಿಸಿ ಶುಭಾರಂಭಗೊಳಿಸಿದರು.
26 ತೊಕ್ಕೊಟ್ಟು: ನಗರದ ಹೊರವಲಯದಲ್ಲಿರುವ ತೊಕ್ಕೊಟ್ಟುವಿನಲ್ಲಿಯೂ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸ್ವಾಮಿ ಧರ್ಮವ್ರತಾನಂದಜಿ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿ ಮಾತನಾಡಿದರು. ಪರಂಜ್ಯೋತಿ ಮಾನವ ಸೇವಾ ಸಮಿತಿ, ಉಮಾಮಹೇಶ್ವರಿ ದೇವಸ್ಥಾನ ಹಾಗೂ ವೀರಮಾರುತಿ ವ್ಯಾಯಾಮ ಶಾಲೆಯ ಸದಸ್ಯರು ಕಾರ್ಯಕ್ರಮಕ್ಕೆ ಕೈಜೋಡಿಸಿದರು. ಮನೋಹರ ಪ್ರಭು ಸಂಘಟಿಸಿದರು.

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ “ಸ್ವಚ್ಛ ಮಂಗಳಗಂಗೋತ್ರಿ” ಎಂಬ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು. ನೂರಾರು ವಿದ್ಯಾರ್ಥಿಗಳು ಅತ್ತ್ಯುತ್ತ್ಸಾಹದಿಂದ ಆವರಣದಲ್ಲಿ ಪೆÇರಕೆ ಹಿಡಿದು ಸ್ವಚ್ಛಗೊಳಿಸಿದರು. ಶಾಸಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ಸಿಂಡೀಕೆಟ್ ಸದಸ್ಯ ಹರೀಶ್ ಆಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾಜಸೇವಾ ವಿಭಾಗದ ವಿದ್ಯಾರ್ಥಿಗಳು, ಯೋಗವಿಜ್ಞಾನದ ವಿದ್ಯಾರ್ಥಿಗಳು ಹಾಗೂ ಆಸಕ್ತ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಶುಚಿತ್ವದ ಕಾರ್ಯ ನಿರ್ವಹಿಸಿದರು.
28 ಲ್ಯಾಂಡ್ ಲಿಂಕ್ಸ್ :ಶ್ರೀ ಮಾತೃಧಾಮ ಸೇವಾ ಸಮಿತಿಯ ಸದಸ್ಯರು ಸ್ವಚ್ಛ ಮಂಗಳೂರಿಗಾಗಿ ಸ್ವಚ್ಛ ಲ್ಯಾಂಡ್ ಲಿಂಕ್ಸ್ ಅಭಿüಯಾನವನ್ನು ಕೈಗೊಂಡರು. ಮನಪಾ ಸದಸ್ಯ ರಾಜೇಶ್ ಹಾಗೂ ಕೃಷ್ಣರಾಜಯ್ಯ ಕಾರ್ಯಕ್ರಮಕ್ಕೆ ಜಂಟಿಯಾಗಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಮಾತೃಧಾಮದ ವೇದಾವತಿ , ವಿದ್ಯಾಶೆಣೈ, ಶಾಂಭವಿ ಮತ್ತಿತರರು ಸಕ್ರಿಯವಾಗಿ ಭಾಗವಹಿಸಿದರು. ಶ್ರೀ ಕೆ ವಿ ಸತ್ಯನಾರಾಯಣ್ ಕಾರ್ಯಕ್ರಮ ಸಂಯೋಜಿಸಿದರು.
29 ದೇರಳಕಟ್ಟೆ: ಜಸ್ಟೀಸ್ ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಸಹಯೋಗದಲ್ಲಿ ದೇರಳಕಟ್ಟೆಯಲ್ಲಿ ಸ್ವಚ್ಛತಾ ಅಭಿüüಯಾನವನ್ನು ಆಯೋಜಿಸಲಾಗಿತ್ತು. ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ. ವಿನಯ ಹೆಗ್ಡೆ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಡಾ. ಕ್ಯಾಪ್ಟನ್‍ಗಣೇಶ್‍ಕಾರ್ಣಿಕ್ ಮುಖ್ಯ ಅತಿಥಿಯಾಗಿದ್ದರು. ಡಾ. ಸತೀಶ್ ಭಂಡಾರಿ, ಡಾ. ಸತೀಶ್‍ರಾವ್ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಸುಮಾರು 200 ಮೆಡಿಕಲ್ ವಿದ್ಯಾರ್ಥಿಗಳು ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಯ ಮುಂಭಾಗದ ರಸ್ತೆಯ ಎರಡೂ ಬದಿಗಳನ್ನು ಶುಚಿಗೊಳಿಸಿದರು.
30 ರಥಬೀದಿ: ಶ್ರೀ ಗೋಕರ್ಣ ಮಠದ ಭಕ್ತರ ನೇತೃತ್ವದಲ್ಲಿ ರಥಬೀದಿಯಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ರಥಬೀದಿಯ ಪುಟ್ ಪಾಥ್‍ಗಳನ್ನು ಸ್ವಚ್ಛಗೊಳಿಸಲಾಯಿತು. ದಾರಿಯಲ್ಲಿ ಅನೆಕ ದಿನಗಳಿಂದ ರಾಶಿಯಾಗಿ ಬಿದ್ದಿದ್ದ ಮಣ್ಣು Pಲ್ಲುಗಳನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಿ ದಾರಿಹೋಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು. ಬಸ್ತಿ ಪುರುಷೋತ್ತಮ ಶೆಣೈ, ಶ್ರೀಮತಿ ಅರುಣಾ ಪ್ರಭು, ಕುಂಬ್ಳೇ ನರಸಿಂಹ ಪ್ರಭು, ಶ್ರೀ ನರೇಶ್‍ಕಿಣಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

31 ಕೊಲ್ಯ : ಶ್ರಿಕ್ಷೇತ್ರ ಕೊಲ್ಯ ಮಠದ ಭಕ್ತರು ಹಾಗೂ ಹಿತೈಶಿಗಳು “ಸ್ವಚ್ಛಕೊಲ್ಯ” ಎಂಬ ಅಭಿüüಯಾನವನ್ನು ಹಮ್ಮಿಕೊಂಡಿದ್ದಾರೆ. ಸ್ವಾಮಿ ಧರ್ಮವ್ರತಾನಂದಜಿ ಹಾಗೂ ಕೆ ಮಧುಸೂದನ್ ಅಯ್ಯರ್ ಜಂಟಿಯಾಗಿ ಅಭಿüಯಾನಕ್ಕೆ ಹಸಿರು ನಿಶಾನೆ ತೋರಿಸಿ ಶುಭಾರಂಭಗೊಳಿಸಿದರು. ಮಠದ ಕಾರ್ಯಕರ್ತರು ಮಠದ ಸುತ್ತಮುತ್ತ ಹಾಗೂ ಹೆದ್ದಾರಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿದ್ದ ಪ್ಲಾಸ್ಟಿಕ್ ಕಸವನ್ನು ತೆಗೆದು ಶುಚಿಗೊಳಿಸಿ ಸ್ವಚ್ಛ ಹೆದ್ದಾರಿಗಾಗಿ ಸಂಕಲ್ಪಿಸಿದರು. ಶ್ರೀ ಉಮಾನಾಥ ಕೋಟೆಕಾರ ಕಾರ್ಯಕ್ರಮವನ್ನು ಸಂಯೋಜಿಸಿದರು.
32 ಸ್ವಚ್ಛ ಮೇರ್ಲಪದವು: ನಗರದ ಹೊರವಲಯದಲ್ಲಿರುವ ಮೇರ್ಲಪದುವಿನಲ್ಲಿಯೂ ಶ್ರೀನಿವಾಸ ಇಂಜನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ವಿಶೇಷ ಬೇಡಿಕೆಯ ಮೇರೆಗೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸುಮಾರು 75 ಜನ ಊರಿನ ನಾಗರಿಕರು ಹಾಗೂ ವಿದ್ಯಾರ್ಥಿಗಳು ಸೇರಿ ಸ್ವಚ್ಛತೆಯನ್ನು ಮಾಡಿದರು.

ಒಟ್ಟು 13 ಪ್ರದೇಶಗಳಲ್ಲಿ ಸುಮಾರು 1000 ಕ್ಕೂ ಮೀರಿ ಕಾರ್ಯಕರ್ತರು ರಾಮಕೃಷ್ಣ ಮಿಷನ್ನಿನ ಆಯೋಜಿಸಿದ್ದ ಈ ವಾರದ ಅಭಿಯಾನದಲ್ಲಿ ಪಾಲ್ಗೊಂಡರು. ಈ ಅಭಿಯಾನಕ್ಕೆ ನಿಟ್ಟೆ ವಿದ್ಯಾಸಂಸ್ಥೆ ಹಾಗೂ ಎಂಆರ್‍ಪಿಎಲ್ ಪ್ರಾಯೋಜಕತ್ವ ನೀಡಿ ಪೆÇ್ರೀತ್ಸಾಹಿಸುತ್ತಿವೆ.


Spread the love