ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ನಾಲ್ಕನೇ ಹಂತದ 8 ನೇ ಶ್ರಮದಾನ
ಮಂಗಳೂರು : 8 ನೇ ಭಾನುವಾರದ ಸ್ವಚ್ಛತಾ ಕಾರ್ಯಕ್ರಮ : ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 4ನೇ ಹಂತದ 8ನೇ ಭಾನುವಾರದ ಶ್ರಮದಾನ ಕಾರ್ಯಕ್ರಮ ದಿನಾಂಕ 24-12-2017 ಭಾನುವಾರ ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯ ತನಕ ಹಂಪಣಕಟ್ಟೆ ಪರಿಸರದಲ್ಲಿ ಜರುಗಿತು.
ಮಂಗಳೂರು ನಗರ ಆಯುಕ್ತರಾದ ಶ್ರೀ ಸುರೇಶ್ ಟಿ ಆರ್ ಹಾಗೂ ಸ್ವಾಮಿ ದಯಾಧಿಪಾನಂದಜಿ ರಾಮಕೃಷ್ಣ ಮಿಷನ್ ಹರಿದ್ವಾರ್ ಇವರುಗಳು ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತಿಯಲ್ಲಿ ಜಂಟಿಯಾಗಿ ಹಸಿರು ನಿಶಾನೆ ತೋರಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ವಿಧಾನ್ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಡಾ ಸತೀಶ್ ರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಆಯುಕ್ತರಾದ ಶ್ರೀ ಸುರೇಶ್ ಟಿ ಆರ್ ಮಾತನಾಡಿ “ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನವನ್ನು ವಿಶಿಷ್ಠವಾಗಿ ಮಾಡಿ ಮಾದರಿ ಕಾರ್ಯಕ್ರಮವನ್ನಾಗಿಸಿದೆ. ಸ್ವಚ್ಛತೆಯೊಂದಿಗೆ ಸ್ವಚ್ಛ ಮನಸ್ಸು ಎಂಬ ಕಾರ್ಯಕ್ರಮದ ಕಲ್ಪನೆ ಹಾಗೂ ಗ್ರಾಮಗಳ ಜನರನ್ನೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದು ಅಭಿನಂದನಾರ್ಹ! ಪೆÇರಕೆ ಹಿಡಿದು ಕಸಗುಡಿಸುವುದರಿಂದ ಹಿಡಿದು ಅನೇಕ ಜನೋಪಯೋಗಿ ಕಾರ್ಯಗಳನ್ನು ಅನುಷ್ಠಾನಗೊಳಿಸಿ ನಗರದ ಎಲ್ಲ ವರ್ಗಗಳ ಜನ ಈ ಅಭಿಯಾನದಲ್ಲಿ ಭಾಗವಹಿಸಿರುವುದರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ಸ್ವಾಮಿ ದಯಾಧಿಪಾನಂದಜಿ ಮಾತನಾಡಿ “ಸ್ವಚ್ಛತೆಯ ದೇವರು ಎನ್ನುವುದು ಭಾರತೀಯ ಸಂಸ್ಕೃತಿ ಆದರೆ ಕಾಲಕ್ರಮದಲ್ಲಿ ಅದನ್ನು ಮರೆತುದರ ಪರಿಣಾಮ ಇಂದು ಸ್ವಚ್ಛ ಭಾರತವನ್ನು ಪ್ರಾರಂಭಿಸಬೇಕಾಯಿತು. ಪ್ರತಿಯೊಬ್ಬರು ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ಕರೆನೀಡಿದರು.
ಮತ್ತೋರ್ವ ಅತಿಥಿ ರಾಣೆಬೆನ್ನೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಪ್ರಕಾಶಾನಂದಜಿ ಮಾತನಾಡಿ “ ಸ್ವಚ್ಛ ಮಂಗಳೂರು ಅಭಿಯಾನ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವುದು. ಇಡೀ ಭಾರತ ದೇಶದಲ್ಲಿಯೇ ಅಪರೂಪವಾದುದು. ಈಗ ಇದನ್ನು ನಾಲ್ಕು ಆಯಾಮಗಳಲ್ಲಿ ವಿಸ್ತರಿಸಿ ಮುನ್ನಡೆಸುತ್ತಿರುವುದು ಅತ್ಯಂತ ಸಂತೋಷದ ಹಾಗೂ ಅಭಿನಂದನಾರ್ಹ ಕಾರ್ಯ” ಎಂದು ಬಣ್ಣಿಸಿದರು.
ಸ್ವಾಮಿಜಿಯವರು ಹಾಗೂ ಗಣ್ಯರು ಪೆÇರಕೆ ಹಿಡಿದು ಒಂದಿಷ್ಟು ಹೊತ್ತು ಹಂಪಣಕಟ್ಟೆ ಮುಖ್ಯ ರಸ್ತೆಯನ್ನು ಸ್ವಚ್ಛಗೊಳಿಸಿದರು. ಸುಮಾರು ಐವತ್ತು ಜನ ಕಾರ್ಯಕರ್ತರು ತಾಲೂಕ ಪಂಚಾಯತ್ ಆವರಣ ಗೋಡೆಯಿಂದ ಪ್ರಾರಂಭಿಸಿ ಎ ಬಿ ಶೆಟ್ಟಿ ವೃತ್ತದ ವರೆಗಿನ ಸರಕಾರಿ ಕಟ್ಟಡಗಳ ಆವರಣ ಗೋಡೆಗಳ ಮೇಲೆ ಅಂಟಿಸಿದ್ದ ಪೆÇಸ್ಟರ್‍ಗಳನ್ನು ನೀರು ಹಾಕಿ ತೆಗೆದು ಹಾಕಿ ಶುಚಿಗೊಳಿಸಿದರು; ನಂತರ ಅದನ್ನು ಬಣ್ಣ ಹಚ್ಚಿ ಅಂದಗೊಳಿಸಿದರು. ಇರದ ಜೊತೆಜೊತೆಗೆ ಕ್ಲಾಕ್ ಟವರ್ ನಿಂದ ಆರ್ ಟಿ ಓ ತನಕದ ಎರಡೂ ಬದಿ ರಸ್ತೆಯನ್ನು ಹಾಗೂ ಮಾರ್ಗ ವಿಭಾಜಕಗಳನ್ನು ಸ್ವಚ್ಛ ಮಾಡಿದರು. ಶ್ರೀಮತಿ ಸುದೀಕ್ಷಾ ಹಾಗೂ ಶ್ರೀ ಕಿರಣ ಪೂಜಾರಿ ದಂಪತಿಗಳು ಒಂದು ವರ್ಷದ ‘ನಕ್ಷ’ ಎಂಬ ಅವರ ಪುಟ್ಟ ಮಗುವಿನೊಂದಿಗೆ ಅಭಿಯಾನದಲ್ಲಿ ಭಾಗವಹಿಸಿದ್ದು ಸಾರ್ವಜನಿಕರ ವಿಶೇಷ ಗಮನ ಸೆಳೆಯಿತು.
ಪುರಭವನದ ಬದಿಯ ಕೇಂದ್ರ ರೈಲು ನಿಲ್ದಾಣಕ್ಕೆ ಸಾಗುವ ಮಾರ್ಗದಲ್ಲಿಯೂ ಸ್ವಚ್ಛತಾ ಅಭಿಯಾನ ನಡೆಯಿತು. ಅದೇ ರಸ್ತೆಯ ಮೂಲೆಯೊಂದರಲ್ಲಿ ಬಿಸಾಡಿದ್ದ ಕಟ್ಟಡ ತ್ಯಾಜ್ಯ ಹಾಗೂ ಅಪಾಯಕಾರಿ ಗಾಜುಗಳನ್ನು ತೆಗೆದುಹಾಕಿದರು. ರಸ್ತೆಯ ಪಕ್ಕದಲ್ಲಿ ಬೆಳೆದಿದ್ದ ಹುಲ್ಲು ತೆಗೆದು ತೋಡುಗಳನ್ನು ಶುಚಿಗೊಳಿಸಲಾಯಿತು. ಸಾರ್ವಜನಿಕರು ನಡೆದು ಹೋಗುವ ಕಾಲುದಾರಿ ಅರ್ಧಕ್ಕೆ ನಿಂತುಹೋಗಿ ಕೃತಕ ಹೊಂಡ ನಿರ್ಮಾಣವಾಗಿ ಅಪಾಯಕಾರಿಯಾಗಿತ್ತು. ಅಲ್ಲಿ ಗಾರೆ ಕೆಲಸದವರ ಸಹಾಯದಿಂದ ಕಾಲು ಹಾಯಿಸಿ ಮೆಟ್ಟಿಲು ಮಾಡಲಾಗಿದೆ. ಮತ್ತೊಂದೆಡೆ ಕಲ್ಲು ಕಟ್ಟಿ ಪಾದಚಾರಿಗಳಿಗೆ ಅಪಾಯಕಾರಿಯಾಗಬಹುದಾದ ಸ್ಥಳದ ಗುರುತು ಸಿಗುವಂತೆ ಮಾಡಲಾಗಿದೆ.
ಪೆÇೀಸ್ಟರ್ ಬ್ಯಾನರ್ ನಗರದ ಸೌಂದರ್ಯವನ್ನು ಹಾಳು ಮಾಡುತ್ತಿದೆ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಪಾಯಕಾರಿಯಾಗುತ್ತಿದೆ ಎಂದು ಕಳೆದ ನಾಲ್ಕೈದು ವಾರಗಳಿಂದ ಮಂಗಳೂರಿನ ವಿವಿಧೆÉಡೆಗಳಲ್ಲಿ ಬ್ಯಾನರ್ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಇಂದೂ ಸಹಿತ ಸ್ವಚ್ಛ ಮಂಗಳೂರು ಕಾರ್ಯಕರ್ತರು ಪಾಂಡೇಶ್ವರ, ಹಂಪಣಕಟ್ಟೆ ಸೇರಿದಂತೆ ಅನೇಕ ಸ್ಥಳಗಳಲ್ಲಿದ್ದ ತೂಗು ಹಾಕಿದ್ದ ಹಾಗೂ ಕಟ್ಟಿದ್ದ ಬ್ಯಾನರ್ ಗಳನ್ನು ತೆಗೆದು ಹಾಕಿದರು .ಶ್ರೀ ಗಣಪತಿ ಹೈಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜಿನ ಸುಮಾರು 250 ಕ್ಕೂ ವಿದ್ಯಾರ್ಥಿಗಳು ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಕೇಂದ್ರ ರೈಲು ನಿಲ್ದಾಣದ ಸುತ್ತಮುತ್ತ ಸ್ವಚ್ಛತಾ ಅಭಿಯಾನ ಕೈಗೊಂಡರು.
ಸಾರಸ್ವತ ಶಿಕ್ಷಣ ಸಂಸ್ಥೆಯ ಶ್ರೀ ರಾಮಚಂದ್ರ ರಾವ್ ಹಾಗೂ ಶ್ರೀ ಮಹೇಶ್ ಬೊಂಡಾಲ್ ಅಭಿಯಾನದ ನೇತೃತ್ವ ವಹಿಸಿದ್ದರು. ಸುಮಾರು ಎರಡು ಟಿಪ್ಪರ್ ಗಳಷ್ಟು ಕಸವನ್ನು ಗುಡಿಸಿ ತೆಗೆದು ರೈಲು ನಿಲ್ದಾಣದತ್ತ ಸಾಗುವ ಎಲ್ಲ ಮಾರ್ಗಗಳನ್ನು ಶುಚಿಗೊಳಿಸಿದರು. ಶಾಲೆಯ ಮುಖ್ಯಾಧ್ಯಾಪಕಿ ಶ್ರೀಮತಿ ರಂಜಿತಾ ಹಾಗೂ ಅಧ್ಯಾಪಕ ವೃಂದ ಅಭಿಯಾನದಲ್ಲಿ ಭಾಗವಹಿಸಿದ್ದರು. ಶ್ರೀ ಸುರೇಶ್ ಶೆಟ್ಟಿ ಹಾಗೂ ಕೋಡಂಗೆ ಬಾಲಕೃಷ್ಣ ನಾಯಕ್ ವಿದ್ಯಾರ್ಥಿಗಳನ್ನು ಮಾರ್ಗದರ್ಶಿಸಿದರು. ಜಪಾನಿ ಪ್ರಜೆ ಶ್ರೀ ಮಸಾಹಿರೋ ಮೊನೊಯಿ, ಶ್ರೀ ಮಹ್ಮದ್ ಶಮೀಮ್ ಸ್ವಯಂ ಪ್ರೇರಣೆಯಿಂದ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.